ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯ ಭಾರದ್ವಜ್ ಅವರು ತಮ್ಮ ಕುರಿತು ಪ್ರಕಟವಾದ ಸುದ್ದಿ ಒಂದ ಮೇಲೆ ಗರಂ ಆಗಿದ್ದಾರೆ. ವರದಿಯಲ್ಲಿ ಅವರ ವಿರುದ್ಧ ಅವಹೇಳನಕಾರಿಯಾದ ಬರವಣಿಗೆ ಇಲ್ಲ. ಆದರೂ, ಅವರು ಗರಂ ಆಗಲು ಒಂದು ಕಾರಣವಿದೆ. ಅದು ಏನಂತಾ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ. ಅನಸೂಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ಫೋಟೋಶೂಟ್​ ಮಾಡಿಸುವ ಅನಸೂಯ, ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅವರು ಬಿಳಿ […]

ಬಿಹಾರ: ಇಲ್ಲಿನ ಮಧುಬನಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಧಗಧಗಿಸಿ ಹೊತ್ತಿ ಉರಿದಿರುವಂತ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೆಹಲಿಯಿಂದ ಬಿಹಾರದ ಮಧುಬನಿಗೆ ಬಂದಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಪರಿಣಾಮ, ರೈಲು ಬೋಗಿ ಸುಟ್ಟು ಕರಕಲಾಗಿವೆ. ಅಂದಹಾಗೇ ಕಳೆದ ರಾತ್ರಿ ದೆಹಲಿಯಿಂದ ಬಂದು ಮಧುಬನಿಯಲ್ಲಿ ನಿಂತಿದ್ದ ಕಾರಣ, ಯಾವುದೇ ಪ್ರಯಾಣಿಕರು ರೈಲಿನಲ್ಲಿ ಇರಲಿಲ್ಲ. ಹೀಗಾಗಿ ಪ್ರಾಣಾಪಾಯ ಕೂಡ […]

ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯ ಕುರಿತು ರಾಜೇಶ್ ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.ಬೆಂಗಳೂರು: ಹಿರಿಯ ರಾಜೇಶ್ ಇಂದು (ಶನಿವಾರ, ಫೆ.19) ಮುಂಜಾನೆ ನಿಧನರಾಗಿದ್ದಾರೆ. ಅವರ ಕುರಿತು ಹಾಗೂ ಅಂತ್ಯಕ್ರಿಯೆಯ ಕುರಿತು ರಾಜೇಶ್ ಅಳಿಯ, ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಈ ದಿನ ದುಃಖಕರವಾದ ದಿನ ಎಂದಿರುವ ಅರ್ಜುನ್ ಸರ್ಜಾ, ”ಕನ್ನಡ ಚಿತ್ರರಂಗದಲ್ಲಿ 50 ವರ್ಷಕ್ಕೂ ಹೆಚ್ಚು ಇದ್ದವರು ರಾಜೇಶ್. ಡಾ.ರಾಜ್‌ಕುಮಾರ್​ರವರ ಪಂಕ್ತಿಯವರು. […]

  ಆಘಾತಕಾರಿ ಘಟನೆಯೊಂದರಲ್ಲಿ, ಆನ್‌ಲೈನ್ ವಂಚನೆಯು ಚಂಡೀಗಢದಲ್ಲಿ ವ್ಯಕ್ತಿಯೊಬ್ಬನನ್ನು ಫೇಸ್‌ಬುಕ್‌ನಲ್ಲಿ ಯುಕೆ ಪ್ರಜೆಯಂತೆ ಪೋಸ್ ಕೊಟ್ಟು 9 ಲಕ್ಷ ರೂ.ಗೆ ವಂಚಿಸಿದೆ. ಮಣಿ ಮಜ್ರಾ ನಿವಾಸಿ ಯಸ್ವೀರ್ ಸಿಂಗ್ ಎಂದು ಗುರುತಿಸಲ್ಪಟ್ಟಿರುವ ಸಂತ್ರಸ್ತೆ, ತಾನು ಹಣಕ್ಕಾಗಿ ವಂಚಿಸಿದ ಯುಕೆ ಮಹಿಳೆ ಟೀನಾ ಫ್ರಾನ್ಸಿಸ್ ಅನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದಾಗಿ ಬಹಿರಂಗಪಡಿಸಿದ್ದಾನೆ. ಟೈಮ್ಸ್ ನೌ ವರದಿಯ ಪ್ರಕಾರ, ಜನವರಿ 29 ರಂದು ಅವರಿಗೆ 30,000 ಯುಕೆ ಪೌಂಡ್‌ಗಳ ಮೌಲ್ಯದ ಉಡುಗೊರೆಯನ್ನು ಕಳುಹಿಸುವುದಾಗಿ ಭರವಸೆ […]

  ಬಾಲಿವುಡ್‌ನಲ್ಲಿ ಮತ್ತೆ ಮದುವೆ ಸಂಭ್ರಮ ಕಳೆಗಟ್ಟಿದೆ. ಬಾಲಿವುಡ್ ಮದುವೆಗಳು ಅಂದರೆ ಕೊಂಚ ಕುತೂಹಲ ಹೆಚ್ಚೇ ಇರುತ್ತದೆ. ಯಾಕೆಂದರೆ ಬಾಲಿವುಡ್‌ನಲ್ಲಿ ಯಾರು, ಯಾರೊಂದಿಗೆ ಯಾವಾಗ ಮದುವೆ ಆಗುತ್ತಾರೆ ಅನ್ನೋದೆ ಅಚ್ಚರಿಯ ಸಂಗತಿ. ಅದರಲ್ಲಿ ಎರಡನೇಯ ಮದುವೆಯ?, ಮೂರನೆಯಾ ಮದುವೆಯಾ ಎನ್ನುವುದು ಕೂಡ ಮುಖ್ಯ ಆಗುತ್ತೆ. ಈಗ ಎರಡನೇ ಮದುವೆ ಬಗ್ಗೆ ಮಾತನಾಡಲು ಕಾರಣ ಬಾಲಿವುಡ್ ತಾರಾ ಜೋಡಿ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್. ಹೌದು ಸದ್ಯ ಮದುವೆ ವಿಚಾರವಾಗಿ […]

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಫಿಲಿಭಿತ್​ನ ಚುನಾವಣಾ ನಿಯಂತ್ರಣ ಕೊಠಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಣ್ಗಾವಲಿಗೆಂದು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಬರೋಬ್ಬರಿ 34 ಸಿಸಿ ಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಹುಶಃ ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರ ಕೆಲಸ ಎಂದು ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಸಾಕಷ್ಟು ತನಿಖೆಯ ಬಳಿಕ ಇದು ಮಾನವ ಕೃತ್ಯವಲ್ಲ ಎಂದು ತಿಳಿದುಬಂದಿದೆ. […]

  ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ. ಯಾವುದೇ ಕೀಟನಾಶಕವನ್ನು ಉಪಯೋಗಿಸದೆ, ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಹಲ್ಲಿಯ ಕಾಟದಿಂದ ಮುಕ್ತಿ ಹೊಂದಬಹುದು. ನೈಸರ್ಗಿಕವಾಗಿ ದೊರೆಯುವ ವಸ್ತುಗಳಾದ ಈರುಳ್ಳಿ, ಬೆಳ್ಳುಳ್ಳಿ ಉಪಯೋಗಿಸಿ ಹಲ್ಲಿಯನ್ನು ಓಡಿಸಬಹುದು. ಈರುಳ್ಳಿ, ಬೆಳ್ಳುಳ್ಳಿ ವಾಸನೆ ಹಲ್ಲಿಗಳಿಗೆ ಆಗದು. ಇವುಗಳ ರಸವನ್ನು ಸ್ಪ್ರೇ ಮಾಡುವುದರಿಂದ ಹಲ್ಲಿ ಸುಳಿಯುವುದಿಲ್ಲ. ಕಾಫೀ ಬೀಜ, ತಂಬಾಕು ಹುಡಿ ಮಾಡಿ ಕಿಟಕಿ ಬಾಗಿಲು ಸಂಧಿಯಲ್ಲಿ ಇಡುವುದರಿಂದಲೂ […]

  ಅಹಮದಾಬಾದ್; 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ. ಪ್ರಕರಣದ 49 ಅಪರಾಧಿಗಳ ಪೈಕಿ ಬರೋಬ್ಬರಿ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಿರುವ ನ್ಯಾಯಾಲಯ, 11 ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. 2008, ಜುಲೈ 8ರಂದು ಅಹಮದಾಬಾದ್ ನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 56 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ 200ಕ್ಕೂ ಹೆಚ್ಚು […]

  ಐಷಾರಾಮಿ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆಯ ಹಡಗೊಂದು ಬೆಂಕಿಗೆ ಆಹುತಿಯಾದ ಪರಿಣಾಮ ಅಟ್ಲಾಂಟಿಕ್​ ಸಾಗರದಲ್ಲಿ ಮುಳುಗಿ ಹೋಗಿದೆ. ಬೃಹತ್​ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಸುಡುತ್ತಿದ್ದ ಕಾರುಗಳ ಜೊತೆಯಲ್ಲಿ ಫೆಲಿಸಿಟಿ ಏಸ್​ ಮಧ್ಯ ಅಟ್ಲಾಂಟಿಕ್​ ಅಜೋರ್ಸ್​ ದ್ವೀಪಗಳ ಬಳಿ ತೇಲಿದೆ. ಈ ಹಡಗು ಜರ್ಮನಿಯ ಎಂಡೆನ್​ನಿಂದ ಅಮೆರಿಕದ ರೋಡ್​ ಐಲ್ಯಾಂಡ್​​ನ ಡೇವಿಸ್​​ವಿಲ್ಲೆ ಬಂದರಿಗೆ ನೌಕಾಯಾನ ಮಾಡುತ್ತಿತ್ತು. ಫೆಲಿಸಿಟಿ ಏಸ್​ 17 ಸಾವಿರ ಮೆಟ್ರಿಕ್​ ಟನ್​ಗಿಂತ ಹೆಚ್ಚಿನ […]

  ನವದೆಹಲಿ: ದೇಶದಾದ್ಯಂತ ಶುಕ್ರವಾರ ಬೆಳಿಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ 25,920 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದು ಗುರುವಾರ ವರದಿಯಾದ ಪ್ರಕರಣಕ್ಕಿಂತ 4,837 ಕಡಿಮೆಯಾಗಿದ್ದು, ದಿನನವೊಂದರಲ್ಲಿ ಹೊಸ ಸೋಂಕು ದೃಢಪಟ್ಟ ಪ್ರಮಾಣದಲ್ಲಿ ಶೇ 15.7ರಷ್ಟು ಇಳಿಕೆಯಾದಂತಾಗಿದೆ. ಒಂದೇ ದಿನ 492 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ ದೇಶದಲ್ಲಿ 2,92,092 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 2.07ರಷ್ಟಿದೆ. ಈವರೆಗೆ 4,19,77,238 ಮಂದಿ ಸೋಕಿನಿಂದ […]

Advertisement

Wordpress Social Share Plugin powered by Ultimatelysocial