ಮಹಿಳೆಯರು ಸುಂದರವಾದ ತ್ವಚೆಯನ್ನು ಪಡೆಯಲು ಹಲವು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇವುಗಳು ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಇದರ ಬದಲು ಮನೆಯಲ್ಲಿಯೇ ತಯಾರಿಸಿದ ಕೆಲವು ಫೇಸ್ ಪ್ಯಾಕ್ ಗಳನ್ನು ವಾರದಲ್ಲಿ 3 – 4 ಬಾರಿ ಬಳಸಿದರೆ ಸಾಕು.

ಮಹಿಳೆಯರು ಮುಖದ ಮೇಲೆನ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್, ಥ್ರೆಡಿಂಗ್ ನಂತಹ ಮಾರ್ಗಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಮಾಡುವುದರಿಂದ ತುಂಬಾ ನೋವಾಗುತ್ತದೆ. ಹಾಗೇ ಚರ್ಮ ಕೆಂಪಾಗುವುದು, ಅಲರ್ಜಿಯಾಗುವುದು ಕಂಡು ಬರುತ್ತದೆ. ಹಾಗಾಗಿ ಬೇಡದ ಕೂದಲನ್ನು ತೆಗೆಯಲು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವ ಬದಲು ಟೂತ್ ಪೇಸ್ಟ್ ಬಳಸಿ ಬೇಡದ ಕೂದಲನ್ನು ತೆಗೆದುಹಾಕಿ.

ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಮಯದಲ್ಲಿ ಚರ್ಮದ ಮೇಲೆ ತುರಿಕೆ, ಒಣಚರ್ಮ, ದದ್ದುಗಳು ಕಂಡುಬರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಚರ್ಮವನ್ನು ತೇವಗೊಳಿಸಲು ಬಾಡಿಲೋಷನ್ ಅನ್ನು ಹಚ್ಚುತ್ತಾರೆ. ಆದರೆ ಚರ್ಮಕ್ಕೆ ಬಾಡಿಲೋಷನ್ ಹಚ್ಚುವಾಗ ಕೆಲವು ವಿಚಾರಗಳು ತಿಳಿದಿರಲಿ.

ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆಯೂ ಕೂಡ ಒಂದು. ಇದು ಅನೇಕರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದೆ.

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ ಆಗಲಿಲ್ಲ. ಅದಕ್ಕೆ ಸರಿ ಹೊಂದುವ ಬ್ಲೌಸ್, ಲಂಗ, ಆಭರಣ, ಚಪ್ಪಲಿ ಎಲ್ಲವೂ ಮಹತ್ವ ಪಡೆಯುತ್ತದೆ.

ಮೈಕಾಂತಿ ಹೆಚ್ಚಿಸಲು ಮತ್ತು ದಿನವಿಡಿ ತಾಜಾ ಅಗಿರಲು ನೀವು ಸ್ನಾನ ಮಾಡುವ ನೀರಿಗೆ ಈ ಕೆಲವು ವಸ್ತುಗಳನ್ನು ಹಾಕಿನೋಡಿ. ಸ್ನಾನ ಮಾಡುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ತ್ವಚೆಯ ತುರಿಕೆ, ಸನ್ ಬರ್ನ್, ಉಳುಕು, ಮಾನಸಿಕ ಒತ್ತಡ ಸೇರಿದಂತೆ ಹಲವು ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಟೂತ್ ಪೇಸ್ಟ್ ಕೂಡಾ ಮುಖದ ಕಲೆ, ಮೊಡವೆಗಳನ್ನು ಹೋಗಲಾಡಿಸಬಲ್ಲವು. ಅದು ಹೇಗೆಂದು ತಿಳಿಯಬೇಕೇ.? ಒಂದು ಚಮಚ ನಿಂಬೆ ರಸಕ್ಕೆ ಪೇಸ್ಟ್ ಸೇರಿಸಿ ಮುಖದ ಮೇಲೆ ಮೃದುವಾಗಿ ಲೇಪಿಸಿ. ಒಂದು ಗಂಟೆ ಬಿಟ್ಟು ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆ ಮೂಡಿರುವ ಜಾಗಕ್ಕೆ ಸ್ವಲ್ಪ ಕೊಲ್ಗೇಟ್ ಹಚ್ಚಿ ಒಂದು ಗಂಟೆಯ ನಂತರ ತೊಳೆದರೆ ಮೊಡವೆ ದೊಡ್ಡದಾಗದೆ ಅಲ್ಲೇ ಮುದುಡುತ್ತದೆ. ರಾತ್ರಿ ಹಚ್ಚಿದರೆ ಬೆಳಗಾಗುವಾಗ ನಿಮ್ಮ ಮೊಡವೆ […]

ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು ನಾವು ಸೇವಿಸುವ ಆಹಾರದಿಂದಲೇ ಪಡೆದುಕೊಳ್ಳಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಆಯಿಲ್, ಹೇರ್ ಕ್ರೀಮ್ಸ್, ವಿವಿಧ ಬಗೆಯ ಶ್ಯಾಂಪೂಗಳು, ಕಂಡೀಶನರ್ ಗಳು ಹೀಗೆ ಹಲವು ಉತ್ಪನ್ನಗಳ ಮೊರೆ ಹೋಗುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಉತ್ಪನ್ನಗಳನ್ನು ಬಳಸಿ ಹೇಗಾದರೂ ತಮ್ಮ ಕೂದಲನ್ನು ಆರೈಕೆ ಮಾಡಿಕೊಳ್ಳಬೇಕು ಅನ್ನೋ ಧಾವಂತ ಎಲ್ಲರಲ್ಲೂ ಇದೆ. […]

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಅಪ್ರಿಕಾಟ್ : ಕ್ಯಾಲ್ಸಿಯಂ, ಸತು, ಕಬ್ಬಿಣ, ಮ್ಯಾಗ್ನೆಸಿಮ್, ಖನಿಜಗಳು ಸಾಕಷ್ಟಿವೆ. ಇದು ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಬಹಳ ಉಪಯೋಗಕಾರಿ. 2-3 ಅಪ್ರಿಕಾಟ್ ತೆಗೆದುಕೊಂಡು ಪೇಸ್ಟ್ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 15 […]

ಒಣ ದ್ರಾಕ್ಷಿಯಿಂದ ಹಲವಾರು ಉಪಯೋಗಗಳಿವೆ. ಇವು ದೇಹದ ತೂಕ ಇಳಿಸಲೂ ಕೂಡ ನೆರವಾಗುತ್ತವೆ ಎಂಬುದನ್ನು ನೀವು ಕೇಳಿದ್ದೀರಾ..? ಒಣ ದ್ರಾಕ್ಷಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಒಣ ದ್ರಾಕ್ಷಿಯಲ್ಲಿ ವಿಟಮಿನ್ ಮತ್ತು ಖನಿಜಾಂಶವಿದ್ದು, ಇದು ದೇಹದ ಅಂಗಾಂಶ ಮತ್ತು ಮಾಂಸ ಖಂಡಗಳಿಗೆ ಶಕ್ತಿ ಒದಗಿಸುತ್ತದೆ. ದೇಹದಲ್ಲಿ ಜೀರ್ಣ ಕ್ರಿಯೆ ನಿಧಾನವಾದಾಗ ಕೊಬ್ಬು ಬೆಳೆಯುತ್ತದೆ. ಜೀರ್ಣವಾಗದೆ ಉಳಿದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗುವ ಬದಲು ಕೊಬ್ಬು […]

Advertisement

Wordpress Social Share Plugin powered by Ultimatelysocial