ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ.

ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

ಅಪ್ರಿಕಾಟ್ : ಕ್ಯಾಲ್ಸಿಯಂ, ಸತು, ಕಬ್ಬಿಣ, ಮ್ಯಾಗ್ನೆಸಿಮ್, ಖನಿಜಗಳು ಸಾಕಷ್ಟಿವೆ.

ಇದು ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಬಹಳ ಉಪಯೋಗಕಾರಿ. 2-3 ಅಪ್ರಿಕಾಟ್ ತೆಗೆದುಕೊಂಡು ಪೇಸ್ಟ್ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 15 ನಿಮಿಷ ಬಿಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಪ್ರತಿದಿನ ಹೀಗೆ ಮಾಡ್ತಾ ಬಂದ್ರೆ ಆದಷ್ಟು ಬೇಗ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗಲಿದೆ.

ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ತ್ವಚೆಯ ಸೌಂದರ್ಯ ವೃದ್ಧಿಗೆ ಬಹಳ ಉಪಯೋಗಕಾರಿ. 2 ಟೀ ಸ್ಪೂನ್ ತೆಂಗಿನ ಎಣ್ಣೆ ಹಾಗೂ 1 ಟೀ ಸ್ಪೂನ್ ನಿಂಬೆ ಹಣ್ಣನ್ನು ಪೇಸ್ಟ್ ಮಾಡಿ. ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 10 ನಿಮಿಷ ಬಿಡಿ.

ಅವಕೋಡಾ: ಅವಕೋಡಾದಲ್ಲಿ ಬಿ7 ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕೆಲಸ ಮಾಡುತ್ತದೆ. ಒಂದು ಅವಕೋಡಾ, 1 ಚಮಚ ನಿಂಬೆ ರಸ, ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ. 15 ನಿಮಿಷ ಹಚ್ಚಿ ನಂತ್ರ ತೊಳೆದುಕೊಳ್ಳಿ.

ವಿಟಮಿನ್ ಇ ಹಾಗೂ ಬಾದಾಮಿ ತೈಲ : ಪುರುಷರ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕೆಲಸವನ್ನು ವಿಟಮಿನ್ ಇ ಹಾಗೂ ಬಾದಾಮಿ ತೈಲ ಮಾಡುತ್ತದೆ. ಒಂದು ಚಮಚ ಬಾದಾಮಿ ಎಣ್ಣೆಗೆ ಅರ್ಧ ಚಮಚ ವಿಟಮಿನ್ ಇಯನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಸ್ಗೆ ಹಚ್ಚಿಕೊಳ್ಳಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಕೆಲವೇ ದಿನಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಗೆ ಗುಡ್ ಬೈ ಹೇಳಬಹುದು.

Please follow and like us:

Leave a Reply

Your email address will not be published. Required fields are marked *

Next Post

ಕೂದಲಿನ ಆರೈಕೆ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

Thu Dec 16 , 2021
ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು ನಾವು ಸೇವಿಸುವ ಆಹಾರದಿಂದಲೇ ಪಡೆದುಕೊಳ್ಳಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಆಯಿಲ್, ಹೇರ್ ಕ್ರೀಮ್ಸ್, ವಿವಿಧ ಬಗೆಯ ಶ್ಯಾಂಪೂಗಳು, ಕಂಡೀಶನರ್ ಗಳು ಹೀಗೆ ಹಲವು ಉತ್ಪನ್ನಗಳ ಮೊರೆ ಹೋಗುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಉತ್ಪನ್ನಗಳನ್ನು ಬಳಸಿ ಹೇಗಾದರೂ ತಮ್ಮ ಕೂದಲನ್ನು ಆರೈಕೆ ಮಾಡಿಕೊಳ್ಳಬೇಕು ಅನ್ನೋ ಧಾವಂತ ಎಲ್ಲರಲ್ಲೂ ಇದೆ. […]

Advertisement

Wordpress Social Share Plugin powered by Ultimatelysocial