ಕೂದಲು ಉದುರುವಿಕೆ ಈಗ ಎಲ್ಲರಲ್ಲೂ ಕಂಡು ಬರುವ ಸಮಸ್ಯೆ. ಕೆಲವರಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ಯಾವುದೇ ಟಿಪ್ಸ್ ಅನುಸರಿಸಿದರೂ ಕಡಿಮೆಯಾಗಲ್ಲ. ಅಂತಹವರು ಒಮ್ಮೆ ಈ ವಿಧಾನ ಅನುಸರಿಸಿ ನೋಡಿ. ಆರೋಗ್ಯವಂತ ಕೂದಲು ಹೊಂದಲು ವಾರಕ್ಕೆರಡು ಬಾರಿ ಮಾತ್ರ ಶಾಂಪೂವಿನಿಂದ ತೊಳೆಯಿರಿ. ರಾಸಾಯನಿಕಗಳು ಕಡಿಮೆ ಇರುವ ಶಾಂಪೂವನ್ನು ಉಪಯೋಗಿಸಿ. ಬೇಬಿ ಶಾಂಪೂ ಉಪಯೋಗಿಸಿ. ಅದು ತುಂಬಾ ಒಳ್ಳೆಯದು. ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ. ಮದ್ಯಪಾನ, ಧೂಮಪಾನವನ್ನು ಮಾಡದಿರಿ. ಒತ್ತಡ ಕಡಿಮೆ ಮಾಡಿಕೊಳ್ಳಿ. […]

ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ. ಇಲ್ಲವಾದರೆ ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಬಲಯಂ ಯೋಗವನ್ನು ಮಾಡಿ. ಅದನ್ನು ಮಾಡುವ ವಿಧಾನ ಇಲ್ಲಿದೆ. ಬಲಯಂ ಯೋಗವು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಮತ್ತು ಬೋಳು ತಲೆಯ ಸಮಸ್ಯೆಯನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಈ ಯೋಗ ಮಾಡಲು ಮೊದಲಿಗೆ ಸೊಂಟವನ್ನು ನೇರವಾಗಿ ಇರಿಸಿ ನಂತರ ಎರಡೂ ಕೈಗಳನ್ನೂ […]

ನಕ್ಕಾಗ ಹಲ್ಲು ಮುತ್ತಿನಂತೆ ಹೊಳೆಯುತ್ತಿದ್ದರೆ ಆ ನಗು ನೋಡುಗರಿಗೆ ಮತ್ತಷ್ಟು ಆಕರ್ಷಕ ಅನಿಸುತ್ತದೆ. ಮುತ್ತಿನಂಥ ಹಲ್ಲುಗಳಿಗೆ ದಂತ ವೈದ್ಯರನ್ನು ಭೇಟಿಯಾಗಬೇಕಾಗಿಲ್ಲ. ಈ ಸರಳ ವಿಧಾನ ಅನುಸರಿಸಿದರೆ ಸಾಕು ಸುಂದರ ಹಲ್ಲುಗಳು ನಿಮ್ಮದಾಗುವುದು. ತೆಂಗಿನೆಣ್ಣೆ ಒಂದು ಚಮಚ ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಾಯಿ ಮುಕ್ಕಳಿಸಬೇಕು. ಈ ರೀತಿ ಮಾಡಿದರೆ ಹಲ್ಲು ಬೆಳ್ಳಗಾಗುವುದರ ಜೊತೆಗೆ ಬಾಯಿ ದುರ್ವಾಸನೆ ಇಲ್ಲವಾಗುತ್ತದೆ. ಆಯಪಲ್ ಸಿಡರ್‌ ವಿನೆಗರ್ ಸ್ವಲ್ಪ ಆಯಪಲ್ ಸಿಡರ್‌ ವಿನೆಗರ್ ಅನ್ನು […]

ವಾತಾವರಣದ ಮಾಲಿನ್ಯ, ಕೊಳೆ, ಧೂಳು, ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಿಂದ ಮುಖದ ಚರ್ಮ ದಲ್ಲಿ ಸಮಸ್ಯೆ ಉಂಟಾಗುತ್ತದೆ. ಆಗ ಮುಖದಲ್ಲಿ ಕಲೆಗಳು, ಮೊಡವೆಗಳು, ಸುಕ್ಕುಗಳು ಮೂಡುತ್ತವೆ. ಇದರಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಈ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ನೀವು ಈ ಎಲೆಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಹಚ್ಚಿ. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ನೀವು ಮೆಂತ್ಯ ಎಲೆಗಳನ್ನು ಬಳಸಬಹುದು. ಮೆಂತ್ಯ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದಕ್ಕೆ […]

ಮೆಟಾ ಮಾಲೀಕತ್ವದ ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ಆಗಿ ಕಾಣಿಸಿಕೊಂಡಿದೆ. ಟೆಕ್ಸ್ಟ್‌ ಮೆಸೆಜ್ ಸೇರಿದಂತೆ ಫೋಟೊ, ವಿಡಿಯೋ ಹಂಚಿಕೊಳ್ಳಬಹುದಾದ ಅವಕಾಶ ವಾಟ್ಸಾಪ್‌ ವೇದಿಕೆಗಳಲ್ಲಿ ಲಭ್ಯ. ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಈಗಾಗಲೇ ವಾಟ್ಸಾಪ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ವಿಶೇಷ ಐಕಾನ್, ಇಮೋಜಿ, ಸ್ಟಿಕ್ಕರ್ ಆಯ್ಕೆಗಳಿಂದಲೂ ಬಳಕೆದಾರರ ಗಮನ ಸೆಳೆದಿದೆ. ಇದೀಗ ಕ್ರಿಸ್‌ಮಸ್‌ ಹತ್ತಿರದಲ್ಲಿದ್ದು, ಬಳಕೆದಾರರು ಅವರ ವಾಟ್ಸಾಪ್‌ ಐಕಾನ್‌ ಅನ್ನು ಕ್ರಿಸ್‌ಮಸ್‌ ಥೀಮ್ […]

ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ,ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇನ್ನು ಈ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಹಲವು ಚಂದಾದಾರಿಕೆಗಳನ್ನು ಪರಿಚಯಿಸಿವೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರಿಕೆ ಪ್ಲಾನ್ ಬೆಲೆ ಕಡಿತಗೊಳಿಸಿದೆ. ಆದರೆ ಅಮೆಜಾನ್‌ ತನ್ನ ಚಂದಾದಾರಿಕೆ ಪ್ಲಾನ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಪ್ಲಾನ್‌ಹೌದು, ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರಿಕೆ ಪ್ಲಾನ್‌ಗಳ ಬೆಲೆಗಳನ್ನು ಕಡಿತಗೊಳಿಸಿದೆ. ಆದರೆ […]

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ವ್ಯಕ್ತಿಯೊಬ್ಬ ಕೇಸರಿ ಶಾಲು ಹೊದಿಸಲು ಮುಂದಾಗಿದ್ದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು. ಕಾಟರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಆಗಮಿಸಿ ಕೇಸರಿ ಶಾಲನ್ನು ಹೊದಿಸಲು ಪ್ರಯತ್ನಿಸಿದ್ದಾನೆ, ಆಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ವರ್ತನೆ ಅಲ್ಲಿ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ, ಕೇಸರಿ ಶಾಲು ಹೊದಿಸಲು ಬಂದ ವ್ಯಕ್ತಿ […]

Advertisement

Wordpress Social Share Plugin powered by Ultimatelysocial