ಇತ್ತೀಚಿನ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಆರ್ಭಟ ಜೋರಾಗಿದೆ. ಕ್ರೀಡಾ ಕ್ಷೇತ್ರದ ಸಾಧಕರು, ರಾಜಕೀಯರಂಗದ ನಾಯಕರು, ಸಿನಿಮಾ ತಾರೆಯರು, ಉದ್ಯಮಿಗಳ ಜೀವನಾಧರಿತ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ. ಇದರಲ್ಲಿ ಕ್ರೀಡಾ ಕ್ಷೇತ್ರದ ಸಾಧಕರ ಕಥೆಗಳೇ ಹೆಚ್ಚು.ಧೋನಿ, ಸಚಿನ್, ಕಪಿಲ್ ನಂತರ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾ ನಿರ್ಮಾಣಕ್ಕೆ ವೇದಿಕೆ ಸಿದ್ದವಾಗಿದೆ. ಚಿತ್ರದಲ್ಲಿ ಬೆಂಗಾಲ್ ಟೈಗರ್ ಆಗಿ ಯಾರು ನಟಿಸ್ತಾರೆ ಎನ್ನುವುದು ಪಕ್ಕಾ ಆಗಿದೆ.ಬಹಳ ದಿನಗಳಿಂದ ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ ಚರ್ಚೆ ನಡೀತಿದೆ. […]

ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಸುದ್ದಿಗೋಷ್ಠಿ. ಪಟ್ಟಣದ ಸರ್ಕಾರಿ ನೌಕರರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ. ಸರ್ಕಾರಕ್ಕೆ ಗಡುವು ನೀಡಿದಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಶಿವಶಂಕರ್ ಮೂರ್ತಿ. ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಯಾವುದೇ ಯೋಜನೆ ಜಾರಿ ಮಾಡಿಲ್ಲ. ಸರ್ಕಾರಿ ನೌಕರರ ಬಹು ಬೇಡಿಕೆಯಾದ 7ವೇತನ ಜಾರಿ ಮಾಡಬೇಕು. ಜೊತೆಗೆ ಹೊಸ ಪಿಂಚಣಿ ಯೋಜನೆ […]

  ಪ್ರೊ. ಎಚ್.ಎಂ. ಚನ್ನಯ್ಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಲ್ಲಿ ನಿಷ್ಣಾತರೆನಿಸಿದ್ದವರು.ಚನ್ನಯ್ಯನವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ 1935ರ ಫೆಬ್ರುವರಿ 22ರಂದು ಜನಿಸಿದರು. ತಂದೆ ಎಚ್‌.ಜಿ. ಮಹದೇವಯ್ಯ. ತಾಯಿ ಗಂಗಮ್ಮ. ಜಡೆ, ತೀರ್ಥಹಳ್ಳಿ, ಸಂತೆಬೆನ್ನೂರು, ಹೊನ್ನಾಳಿ, ಶಿರಾಳ ಕೊಪ್ಪ ಮುಂತಾದೆಡೆ ಶಾಲಾ ಶಿಕ್ಷಣ ನಡೆಯಿತು. ಕವಿ ಸುಮತೀಂದ್ರ ನಾಡಿಗರು ಇವರ ಸಹಪಾಠಿ.ಚನ್ನಯ್ಯನವರು ಹೈಸ್ಕೂಲಿನಲ್ಲಿದ್ದಾಗಲೇ ಕವನಗಳ ರಚನೆ ಆರಂಭಿಸಿದರು. ಇಂಟರ್ ಮೀಡಿಯೆಟ್‌ ಓದಿದ್ದು ಶಿವಮೊಗ್ಗದಲ್ಲಿ. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ […]

  ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂದರ್ಯಗಳಿಂದ ಬೆಳಗಿನ ಕಲಾವಿದರಲ್ಲಿ ಮಧುಬಾಲಾ ಪ್ರಮುಖ ಹೆಸರು. ಇಂದು ಈ ಮಹಾನ್ ಕಲಾವಿದೆಯ ಸಂಸ್ಮರಣೆ ದಿನ. ಮಧುಬಾಲಾ 1933ರ ಫೆಬ್ರುವರಿ 14ರಂದು ಜನಿಸಿದರು. ಇಂದಿನ ಪಾಕಿಸ್ಥಾನದ ಭಾಗವಾಗಿರುವ ಪ್ರದೇಶದಿಂದ ಬದುಕನ್ನು ಅರಸಿ ಮುಂಬೈಗೆ ಬಂದ ಕುಟುಂಬಕ್ಕೆ ಸೇರಿದ ಮಧುಬಾಲಾ, ಸಂಸಾರ ನಿರ್ವಹಣೆಯ ಸಲುವಾಗಿ ಪುಟ್ಟ ವಯಸ್ಸಿನಿಂದಲೇ ಚಲನಚಿತ್ರಗಳಲ್ಲಿ ಅಭಿನಯಿಸತೊಡಗಿದರು.ಆ ಕಾಲದ ಎಲ್ಲ ಪ್ರಸಿದ್ಧ ನಟರಾದ ಅಶೋಕ್ ಕುಮಾರ್, ಭರತ್ ಭೂಷಣ್, […]

ಬೆಂಗಳೂರು :ಪ್ರತಿ ಋತುವಿನಲ್ಲೂ ಸುಲಭವಾಗಿ ಸಿಗುವ ಹಣ್ಣು ಸೇಬು. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಸೇಬು ತಿನ್ನಲು ಶಿಫಾರಸು ಮಾಡುತ್ತಾರೆ. ಸೇಬು ಹಣ್ಣನ್ನು ವಿವಿಧ ರೀತಿಯಲ್ಲಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸೇಬನ್ನು ಬಳಸಿ ತಯಾರಿಸುವ ಚಹಾ ಕೂಡಾ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.ಹೌದು ಪ್ರತಿನಿತ್ಯ ಆಪಲ್ ಟೀ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನವಾಗುತ್ತದೆ. ಹಾಗಾದರೆ ಈ ಚಹಾದ ಪ್ರಯೋಜನಗಳೇನು ಮತ್ತು ಅದನ್ನು ಹೇಗೆ ತಯಾರಿಸುವುದು ನೋಡೋಣ.ಆಪಲ್ ಟೀಯ ಅತ್ಯುತ್ತಮ ಪ್ರಯೋಜನಗಳು […]

‘ರೋಟರಿ’ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯನ್ನು 1905 ಫೆಬ್ರವರಿ 23ರಂದು ಶಿಕಾಗೋನಲ್ಲಿ ಪಾಲ್ ಹ್ಯಾರಿಸ್ ಮತ್ತು ಅವನ ಸಂಗಡಿಗರಾದ ಸಿಲ್ವೆಸ್ಟರ್ ಶೀಲೆ, ಗುಸ್ಟಾವಸ್ ಲೊಹ್ರೆ ಹಾಗೂ ಶೋರೆ ಹುಟ್ಟುಹಾಕಿದರು. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ರೋಟರಿ ಇದು ಇಂದು ಪ್ರಪಂಚದಾದ್ಯಂತ ಬೆಳೆದಿದೆ. ಇಂದು ಇದು ಜಗತ್ತಿನ 200ಕ್ಕೂ ದೇಶಗಳಲ್ಲಿ ಸುಮಾರು1.40 ದಶಲಕ್ಷ ಸದಸ್ಯತ್ವವನ್ನು ಹೊಂದಿದೆ. ಇದರಲ್ಲಿ ಪುರುಷರ ಹಾಗೂ ಮಹಿಳೆಯರ ಸಾಮೂಹಿಕ ಸಹಭಾಗಿತ್ವವಿದೆ. ಈ ಸಂಸ್ಥೆ ಮಾನವ ಹಿತವನ್ನು ಮುಖ್ಯ ಧ್ಯೇಯವನ್ನಾಗಿ ಹೊಂದಿದೆ. […]

ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಪ್ರಧಾನ ಮಂತ್ರಿ ಕೃಷಿ ಸಂಚಯೀ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಸರ್ಕಾರವು ಹೊಂದಿದೆ. ಇದನ್ನು ಹೊರತುಪಡಿಸಿ ಇನ್ನು ಹಲವಾರು ರೈತ ಕಲ್ಯಾಣ ಯೋಜನೆಗಳನ್ನು ಸರ್ಕಾರವು ಹೊಂದಿದೆ.ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ (ಪಿಎಂಕೆಎಂವೈ) ಅನ್ನು ಕೂಡಾ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಾರಿ ಮಾಡಿದೆ.ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ […]

ಚಂದನವನದಲ್ಲಿ ಫ್ಯಾನ್ ವಾರ್‌ಗಳಿಗೇನೂ ಬರವಿಲ್ಲ. ಒಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆಯಾಗಲಿದೆ ಎಂದರೆ ವಿರೋಧಿ ಬಣ ಆ ಚಿತ್ರದ ಕುರಿತಾಗಿ ಅಪಪ್ರಚಾರ ಮಾಡಲು ಮುಂದಾಗಿಬಿಡುತ್ತದೆ. ಆ ವಿರೋಧಿ ಬಣ ಮತ್ತೊಬ್ಬ ನಟನ ಅಭಿಮಾನಿ ಬಳಗವೇ ಎಂಬುದು ವಿಪರ್ಯಾಸ. ಇನ್ನು ಈ ಫ್ಯಾನ್ ವಾರ್ ಒಂದು ಕಡೆಯಿಂದಾಗುತ್ತಿರುವ ತಪ್ಪಲ್ಲ.ಎಲ್ಲಾ ನಟರ ಅಭಿಮಾನಿಗಳೂ ಸಹ ಇದರಲ್ಲಿ ತೊಡಗಿಕೊಂಡವರೇ. ಇದರಲ್ಲಿ ಕೆಲವರು ಸ್ವಲ್ಪ ಫ್ಯಾನ್ ವಾರ್ ಮಾಡಿದರೆ, ಇನ್ನೂ ಕೆಲವರು ಫ್ಯಾನ್ ವಾರ್ ಮಾಡಲು […]

  ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅನುದಾನಿತ ರಡ್ಡಿ ಪ್ರೌಢ ಶಾಲೆ ಶಿಕ್ಷಕ ಶಂಕರಪ್ಪ ಬೋರಡಿ ಬೆಂಗಳೂರಿನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಅನುದಾನಿತ ಶಾಲೆ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬೆಂಗಳೂರಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಲಾ ಶಿಕ್ಷಕ ಶಂಕ್ರಪ್ಪ ಬೋರೆಡ್ಡಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದೆ.ಅನುದಾನಿತ ಶಾಲೆ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕಳೆದ 140 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ […]

ನಂಜನಗೂಡಿನಲ್ಲಿ ಸಚಿವ ಅಶ್ವತ್ ನಾರಾಯಣ್ ವಿರುದ್ಧ ಕಾಂಗ್ರೆಸ್ಸಿಗರು ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಬೃಹತ್ ಪ್ರತಿಭಟನೆ ಟಿಪ್ಪು ಸುಲ್ತಾನ್ ಹತ್ಯೆ ಮಾಡಿದಂತೆ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಬೇಕು ಎಂದು ಬಿಜೆಪಿ ಸಭೆ ಒಂದರಲ್ಲಿ ಮಾತನಾಡಿದ್ದ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಯನ್ನು ಖಂಡಿಸಿ ಇಂದು ನಂಜನಗೂಡು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು ರಾಷ್ಟ್ರೀಯ ಹೆದ್ದಾರಿ 612ರ ಹುಲ್ಲಹಳ್ಳಿ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು […]

Breaking News

Advertisement

Wordpress Social Share Plugin powered by Ultimatelysocial