4 ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ಬೀದರ್ ಜಿಲ್ಲೆಯ ಹೂಲಸೂರು ತಾಲೂಕಿನ ಸೊಲದಾಪಕ ಗ್ರಾಮದಲ್ಲಿ ನಡೆದಿದೆ..ತಡರಾತ್ರಿ ಸುಮಾರಿನಲ್ಲಿ ಕಳ್ಳತನ ನಡೆದಿದ್ದು ಒಟ್ಟು 1 ಲಕ್ಷದ 48 ಸಾವಿರ ಹಣ, ಚಿನ್ನಾಭರಣ, ಮೊಬೈಲ್ ಕಳ್ಳತನವಾಗಿದೆ. ಇನ್ನು ಕಳ್ಳರು ನಂದಿನಿ ಹಾಲಿನ ಡೈರಿಯನ್ನು ಹೊಡೆದು ಗಲ್ಲಾಪೆಟ್ಟಿಗೆಯ ಹಣ ದೋಚಿದ್ದಾರೆ.ಸಂಜು ರಂಗರಾವ್, ರಾಜಕುಮಾರ್ ಮಾಡಜೆ, ವೆಂಕಟ್ ಸಿಂಗ್ ರಜಪೂತ್, ಮತ್ತು ಉಮಾಕಾಂತ್ ಮಾಸಳೆ ಯವರ ಮನೆಗಳಲ್ಲಿ ಕಳ್ಳತನವಾಗಿದ್ದು ಇವರು ನಮ್ಮ ವರದಿಗಾರರ […]

ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳು ಕಾಡಾನಡಗಳ ದಾಳಿಯಿಂದ ಹಾನಿಯಾಗಿರುವ ಘಟನೆ ಕೋಲಾರದ ಗಡಿ ಭಾಗದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು,ರೈತನ ಒಂದು ಎಕರೆ ಟೊಮ್ಯಾಟೊ ತೋಟ ಸಂಪೂರ್ಣ ನಾಶವಾಗಿದೆ. ಇತ್ತೀಚೆಗಷ್ಟೇ ರೈತನು ಸಾಲ‌ಮಾಡಿ ಟೊಮ್ಯಾಟೊ ಬೆಳೆದಿದ್ದ, ಇನ್ನೇನು ಫಸಲು ಬಿಡುವಷ್ಟರಲ್ಲಿ ಕಾಡಾನೆಗಳ ದಾಳಿಯಿಂದ ಇಡೀ ತೋಟ ಹಾನಿಯಾಗಿದೆ. ಇದಲ್ಲದೆ ಭೀಮಗಾನಹಳ್ಳಿ ಸುತ್ತಮುತ್ತಲಿನಲ್ಲಿ ಹಲವಾರು ರೈತರು ಬಾಳೆ, ಕ್ಯಾಪ್ಸಿಕಂ ಸೇರಿದಂತೆ ವಿವಿಧ […]

ಉದೋಗ್ಯ ಖಾತ್ರಿ ಯೋಜನೆಯಡಿಯಲ್ಲಿ ಜೆನೆಗೂ ಕೆರೆ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದ ವೇಳೆ ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಉಪನಾಯಕನಹಳ್ಳಿಯಲ್ಲಿ ನಡೆದಿದೆ. ಹಗನೂರು ಗ್ರಾಮದ ಈಡಿಗರ ನಿಂಗಪ್ಪ ಮೃತಪಟ್ಟ ವ್ಯಕ್ತಿ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ನಿಂಗಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮೃತಪಟ್ಟಿರುವುದು ನೋವಿನ ಸಂಗತಿ. ನೇರಗದಡಿ […]

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿರುವ ವಸಿಷ್ಠ ಸಿಂಹ ಒಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ನೂತನ ವರ್ಷಾರಂಭ ಮಾಡಿದ್ದಾರೆ … ವಸಿಷ್ಠ ಸಿಂಹ ಇಂದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಗೆ ಭೇಟಿ ನೀಡಿದ್ದರು … ಬೇಟಿ ನೀಡಿದ ಕಾರಣವೆಂದರೆ ವಸಿಷ್ಠ ಸಿಂಹ ಅವರು ಒಂದು ಸಿಂಹದ ಮರಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ವನ್ಯಜೀವಿ ಗಳ ಮೇಲೆ ತಮಗಿರುವ ಒಲವನ್ನು ತೋರಿಸಿದ್ದಾರೆ … […]

ನಿಯಂತ್ರಣ ತಪ್ಪಿ ಟಿಪ್ಪರ್ ವಾಹನ ಅಂಗಡಿಗೆ ನುಗ್ಗಿದ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದಿದೆ….ವಾಹನ ನುಗ್ಗಿದ ಪರಿಣಾಮ ರಸ್ತೆಯಲ್ಲಿ ಓಡಾಡುತ್ತಿರುವ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು,ಮೂವರ ಸ್ಥಿತಿ ಚಿಂತಾಚನಕವಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ…ನಿಯಂತ್ರಣ ತಪ್ಪಿ ಏಕಾಏಕಿ ಸ್ಟೋನ್ ಶಾಪ್ಗೆ ನುಗ್ಗಿ ಟಿಪ್ಪರ್ ನಿಂದ ಎರಡು ಬೈಕ್ ಗಳು, ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದ್ದು,ಔರಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನೂ ಓದಿ  :ತಿಪ್ಪೆ ಗುಂಡಿಯಲ್ಲಿ ಅನಾಥ […]

ತಿಪ್ಪೆ ಗುಂಡಿಯಲ್ಲಿ ಅನಾಥ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ…. ನವಜಾತ ಶಿಶುವನ್ನು ಗೋಣಿ ಚೀಲದಲ್ಲಿ ಹಾಕಿ ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದ್ದು,ಶಿಶು ಕೂಗನ್ನು ಗಮನಿಸಿದ ಸ್ಥಳೀಯರಿಂದ ಶಿಶುವಿನ ಆರೈಕೆ ಮಾಡಲಾಗಿದೆ..ತೊರಲಕ್ಕಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ….. ಇದನ್ನೂ ಓದಿ :ಬೆಳ್ಳಂಬೆಳಗ್ಗೆ ರೈತರ ಜಮೀನಿನಲ್ಲಿ ಪ್ರತ್ಯಕ್ಷವಾದ ಕಾಡಾನೆ  

ಮಂಡ್ಯ ಜಿಲ್ಲೆಯ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿದವು. ಎರಡು ಎಕರೆ ಕಬ್ಬು ಬೆಳೆ ಮತ್ತು ರಾಗಿ ಮೆದೆಗಳನ್ನು ನಾಶ ಮಾಡಿದ್ದು, ಬೆಳ್ಳಂಬೆಳಗ್ಗೆ ಶಿವಕುಮಾರ್ ಎಂಬ ರೈತರ ಜಮೀನಿನಲ್ಲಿ ಆನೆಗಳು ಪ್ರತ್ಯಕ್ಷವಾದವು . ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಮಾಡಿದರು. ಇದನ್ನೂ ಓದಿ :ಟ್ಯಾಂಕರ್ ಮತ್ತು ದ್ವಿಚಕ್ರವಾಹನ ಡಿಕ್ಕಿ

ಟ್ಯಾಂಕರ್ ಮತ್ತು ದ್ವಿಚಕ್ರವಾಹನದ ನಡುವೆ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ತಿಪಟೂರು ತಾಲ್ಲೂಕು ವೈ.ಟಿ.ರಸ್ತೆಯ ಹೆಡಗರಹಳ್ಳಿ ಬಳಿ ನಡೆದಿದೆ…ಸತತ 9 ತಿಂಗಳಿನ ನಂತರ ಆರಂಭಗೊಂಡಿರುವ ಕಾಲೇಜಿಗೆ ವಿದ್ಯಾರ್ಥಿ ತೆರಳುತ್ತಿದ್ದ ವೇಳೆ ಅಪಘಾತವಾಗಿದ್ದು,ಶಶಾಂಕ್ (20) ಸ್ಥಳದಲ್ಲೇ ಸಾವನ್ನಪಿದ್ದಾನೆ… ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಡಿಪ್ಲಮೋ ವ್ಯಾಸಂಗ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದು ತಿಪಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…. ಇದನ್ನೂ ಓದಿ :ದೆಹಲಿಯಲ್ಲಿ ಚಿಕನ್ ಮಾರಾಟ ನಿಷೇಧ.!

ಉತ್ತರ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಗಳು ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿ ಅಥವಾ ಸಂಸ್ಕರಿಸಿದ ಕೋಳಿಗಳ ಮಾರಾಟ ಮತ್ತು ಸಂಗ್ರಹಣೆಯನ್ನು ಇಂದು ನಿಷೇಧಿಸಿವೆ. ಮೊಟ್ಟೆ ಆಧಾರಿತ ಖಾದ್ಯಗಳು ಅಥವಾ ಕೋಳಿ ಮಾಂಸವನ್ನು ಗ್ರಾಹಕರಿಗೆ ನೀಡಿದರೆ ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ಮಾಲೀಕರು ಕ್ರಮ ಎದುರಿಸಬೇಕಾಗುತ್ತದೆ. ಎಂದು ಎನ್ ಡಿಎಂಸಿ ಮತ್ತು ಎಸ್ ಡಿಎಂಸಿ ತಿಳಿಸಿದೆ. ಇದನ್ನೂ ಓದಿ :ಅರುಣಾಚಲ ಪ್ರದೇಶದ ಗಡಿಗೆ ಸಂಬಂಧ

ಅರುಣಾಚಲ ಪ್ರದೇಶದ ಗಡಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ  ವಿವಾದವಿದೆ. ಈ ನಡುವೆ ಚೀನಾ ಸದ್ದಿಲ್ಲದೆ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದೆ. ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಇದೀಗ ಭಾರತಕ್ಕೆ ದೊರಕಿದೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತಿದೆ. ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ

Advertisement

Wordpress Social Share Plugin powered by Ultimatelysocial