ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತ

ಉದೋಗ್ಯ ಖಾತ್ರಿ ಯೋಜನೆಯಡಿಯಲ್ಲಿ ಜೆನೆಗೂ ಕೆರೆ ಹೂಳೆತ್ತುವ ಕೆಲಸದಲ್ಲಿ ತೊಡಗಿದ್ದ ವೇಳೆ ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಉಪನಾಯಕನಹಳ್ಳಿಯಲ್ಲಿ ನಡೆದಿದೆ. ಹಗನೂರು ಗ್ರಾಮದ ಈಡಿಗರ ನಿಂಗಪ್ಪ ಮೃತಪಟ್ಟ ವ್ಯಕ್ತಿ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ನಿಂಗಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮೃತಪಟ್ಟಿರುವುದು ನೋವಿನ ಸಂಗತಿ. ನೇರಗದಡಿ ಕಾರ್ಮಿಕನ ಕುಟುಂಬಕ್ಕೆ 75 ಸಾವಿರ ಪರಿಹಾರ ನೀಡಲಾಗುವುದು ಎಂದು ತಾ.ಪಂ. ಯು.ಹೆಚ್.ಸೋಮಶೇಖರ್ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ :ಸಿಂಹದ ಮರಿಯನ್ನು ದತ್ತು ಪಡೆದು ವಸಿಷ್ಠ ಸಿಂಹ

Please follow and like us:

Leave a Reply

Your email address will not be published. Required fields are marked *

Next Post

ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ

Wed Feb 3 , 2021
ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳು ಕಾಡಾನಡಗಳ ದಾಳಿಯಿಂದ ಹಾನಿಯಾಗಿರುವ ಘಟನೆ ಕೋಲಾರದ ಗಡಿ ಭಾಗದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಭೀಮಗಾನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು,ರೈತನ ಒಂದು ಎಕರೆ ಟೊಮ್ಯಾಟೊ ತೋಟ ಸಂಪೂರ್ಣ ನಾಶವಾಗಿದೆ. ಇತ್ತೀಚೆಗಷ್ಟೇ ರೈತನು ಸಾಲ‌ಮಾಡಿ ಟೊಮ್ಯಾಟೊ ಬೆಳೆದಿದ್ದ, ಇನ್ನೇನು ಫಸಲು ಬಿಡುವಷ್ಟರಲ್ಲಿ ಕಾಡಾನೆಗಳ ದಾಳಿಯಿಂದ ಇಡೀ ತೋಟ ಹಾನಿಯಾಗಿದೆ. ಇದಲ್ಲದೆ ಭೀಮಗಾನಹಳ್ಳಿ ಸುತ್ತಮುತ್ತಲಿನಲ್ಲಿ ಹಲವಾರು ರೈತರು ಬಾಳೆ, ಕ್ಯಾಪ್ಸಿಕಂ ಸೇರಿದಂತೆ ವಿವಿಧ […]

Advertisement

Wordpress Social Share Plugin powered by Ultimatelysocial