UPSC Examಗೆ ಐಚ್ಛಿಕವಾಗಿ ಈ ವಿಷಯಗಳನ್ನು ತೆಗೆದುಕೊಂಡರೆ ಸುಲಭವಾಗಿ ಹೆಚ್ಚು ಅಂಕ ಗಳಿಸಬಹುದು.

2023ನೇ ಸಾಲಿನ ಸಿವಿಲ್ ಸರ್ವೀಸಸ್ ಪರೀಕ್ಷೆ (UPSC Exam) ದಿನಾಂಕಗಳು ಹೊರಬಿದ್ದಿದ್ದು, ಮೇ 28ರಂದು ಪ್ರಿಲಿಮ್ಸ್​ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಐಎಎಸ್​, ಐಪಿಎಸ್​ (IAS-IPS) ಆಗಬೇಕು ಎಂಬ ಗುರಿಯೊಂದಿಗೆ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷಾ ತಯಾರಿಯಲ್ಲಿ (UPSC Preparation) ತೊಡಗಿದ್ದಾರೆ.

ಅವರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಅಭ್ಯರ್ಥಿಗಳು UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಐಚ್ಛಿಕವಾಗಿ ಯಾವ ವಿಷಯವನ್ನು ತೆಗೆದುಕೊಳ್ಳಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಹೆಚ್ಚು ಅಂಕಗಳನ್ನು ಗಳಿಸುವ ವಿಷಯವನ್ನು ಆಯ್ಕೆ ಮಾಡಬೇಕೇ ಅಥವಾ ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಬೇಕೇ ಎಂದು ಹೆಚ್ಚಾಗಿ ಗೊಂದಲಕ್ಕೊಳಗಾಗುತ್ತಾರೆ.
ನಿವೃತ್ತ ಐಪಿಎಸ್ ಅಧಿಕಾರಿಯ ಸಲಹೆ
ಅಭ್ಯರ್ಥಿಗಳ ಈ ಕಷ್ಟವನ್ನು ನೀಗಿಸಲು ಸ್ವತಃ ಐಪಿಎಸ್ ಅಧಿಕಾರಿಯೇ ಅಂಕ ಗಳಿಸುವ ಸಾಧ್ಯತೆ ಹೆಚ್ಚಿರುವ 10 ವಿಷಯಗಳನ್ನು ಹೆಸರಿಸಿದ್ದಾರೆ. ಇತ್ತೀಚೆಗೆ ನಿವೃತ್ತ ಐಪಿಎಸ್ ಜಯಂತ್ ಮುರಳಿ ಅವರು ಟ್ವೀಟ್ ಮಾಡುವ ಮೂಲಕ ಅಂತಹ 10 ವಿಷಯಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಟಾಪ್​ 10 ವಿಷಯಗಳನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರೆ ಅಭ್ಯರ್ಥಿಗಳು ಗರಿಷ್ಠ ಅಂಕಗಳನ್ನು ಪಡೆಯಬಹುದು. ಏಕೆ ಹಾಗೂ ಹೇಗೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿಷಯವಾರು ವಿವರಿಸಿದ್ದಾರೆ. ಐಪಿಎಸ್ ಅಧಿಕಾರಿ ಹೆಸರಿಸಿರುವ ವಿಷಯಗಳು ಹೀಗಿವೆ.ಟಾಪ್​ 10 ಸಬ್ಜೆಕ್ಸ್​ ಯಾವುವು ಗೊತ್ತೇ?
ಮೊದಲನೆಯದಾಗಿ ಭೂಗೋಳ, ಇದು ಅತ್ಯಂತ ಜನಪ್ರಿಯ ಐಚ್ಛಿಕ ವಿಷಯಗಳಲ್ಲಿ ಒಂದಾಗಿದೆ. ಇದರಲ್ಲಿ ವಿವಿಧ ರೀತಿಯ ವಿಷಯಗಳಿದ್ದು, ಪ್ರಚಲಿತ ವಿದ್ಯಮಾನಗಳ ತಯಾರಿಗೂ ನೆರವಾಗುತ್ತವೆ. 2ನೇಯದ್ದು ಇತಿಹಾಸ, ಈ ವಿಷಯವು ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಇದಲ್ಲದೆ, ಈ ವಿಷಯದ ಅಧ್ಯಯನದಿಂದ ವಿಶ್ಲೇಷಣಾತ್ಮಕ ಚಿಂತನೆಯೂ ಉದ್ಭವಿಸುತ್ತದೆ.
UPSC Exam: ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆಗಲು 5 ಸ್ಟೆಪ್ಸ್ ಪಾಲಿಸಿ
3ನೇಯ ವಿಷಯ ಸಾರ್ವಜನಿಕ ಆಡಳಿತ. ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ವಿಷಯವು ತುಂಬಾ ಪ್ರಸ್ತುತವಾಗಿದೆ. 4. ಸಮಾಜಶಾಸ್ತ್ರ – ಈ ವಿಷಯದ ಅಧ್ಯಯನವು ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲಿ ಅಂಕ ಗಳಿಸುವ ಅವಕಾಶಗಳೂ ಇವೆ.
5. ರಾಜಕೀಯ ವಿಜ್ಞಾನ – ಇದು ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳಲು ಬಹಳ ಉಪಯುಕ್ತ ವಿಷಯವಾಗಿದೆ. ಇದು ಅಂತಾರಾಷ್ಟ್ರೀಯ ರಾಜಕೀಯದಿಂದ ಹಿಡಿದು ಪ್ರಚಲಿತ ವಿದ್ಯಮಾನಗಳವರೆಗಿನ ಉಪಯುಕ್ತ ವಿಷಯಗಳನ್ನು ಸಹ ಒಳಗೊಂಡಿದೆ.ಕ್ರಮವಾಗಿ 6. ಮಾನವಶಾಸ್ತ್ರ, 7. ಅರ್ಥಶಾಸ್ತ್ರ, 8. ಮನೋವಿಜ್ಞಾನ, 9. ಸಾಹಿತ್ಯ ಹಾಗೂ 10. ತತ್ವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರೆ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂದು ನಿವೃತ್ತ ಐಪಿಎಸ್ ಜಯಂತ್ ಮುರಳಿ ಸಲಹೆ ನೀಡಿದ್ದಾರೆ. ಮೇಲಿನ ವಿಷಯಗಳನ್ನು ಪ್ರಿಲಿಮ್ಸ್​ ಪರೀಕ್ಷೆಗಾಗಿ ಓದಲೇಬೇಕಾಗಿರುವುದಿಂದ ಇದೇ ವಿಷಯಗಳನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಜಾಣ ನಡೆಯಾಗಿದೆ. ಕಡಿಮೆ ನ ಮೂಲಕ ಸುಲಭವಾಗಿ ಹೆಚ್ಚು ಅಂಕಗಳನ್ನು ಗಳಿಸಬಹುದಾಗಿದೆ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ಫೆಬ್ರವರಿ 21, 2023ಕ್ಕೆ ಮುಗಿದಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮಾತ್ರ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಿಕ್ಷಾಟನೆ 55 ಮಂದಿ ರಕ್ಷಣೆ.

Thu Feb 23 , 2023
ಮಹಿಳೆಯರನ್ನು ಬಾಡಿಗೆ ಇಲ್ಲವೇ ಕಳ್ಳಸಾಗಣೆ ಮೂಲಕ ಕರೆತಂದು ಮಕ್ಕಳಿಗೆ ನಿದ್ದೆ ಬರುವ ಔಷಧಿ ನೀಡಿ ಮಲಗಿಸಿ ಭಿಕ್ಷಾಟನೆ ಮಾಡಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ೫೫ ಮಂದಿಯನ್ನು ರಕ್ಷಿಸಿದ್ದಾರೆ.ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಭಿಕ್ಷಾಟನೆ ಮಾಡುತ್ತಿದ್ದ ಜಾಲವನ್ನು ಬೇಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.ನಗರದ ಕೇಂದ್ರ, ಉತ್ತರ,ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವೈಟ್ ಫೀಲ್ಡ್ ವಿಭಾಗದಲ್ಲಿ […]

Advertisement

Wordpress Social Share Plugin powered by Ultimatelysocial