ಇವರು ಶಿಕ್ಷಕನಾ ಇಲ್ಲ ಕಾಮುಕನಾ ಒಂದಲ್ಲ, ಎರಡಲ್ಲ, ಮೂವರು ಹೆಂಡ್ತೀರ ಗಂಡ! ಇಬ್ಬರಿಗೆ ಕೈ ಕೊಟ್ಟು 3ನೇ ಹೆಂಡ್ತಿ ಜತೆ ಸಂಸಾರ. ಕೊನೆಗೂ ಆಯ್ತು ಶಾಸ್ತಿ

ಯಾದಗಿರಿ: ಇಲ್ಲೊಬ್ಬ ಶಿಕ್ಷಕ ಸುಳ್ಳು ಹೇಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂವರನ್ನು ಮದ್ವೆ ಆಗಿದ್ದಾನೆ. ಈ ವಿಚಾರ ಪರಸ್ಪರ ಪತ್ನಿಯರಿಗೂ ಗೊತ್ತಾಗದಂತೆ ಹಲವು ವರ್ಷ ಸಂಸಾರ ನಡೆಸಿದ ಇದೀಗ ಸಿಕ್ಕಿಬಿದ್ದಿದ್ದಾನೆ.

ಆ ಭೂಪನ ಹೆಸರು ಮೋಹನರೆಡ್ಡಿ ಪಾಟೀಲ್.

ಯಾದಗಿರಿ ತಾಲೂಕಿನ ನಿಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಮೂರು ಮದ್ವೆಯಾದ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಮೋಹನರೆಡ್ಡಿ ಪಾಟೀಲ್ 1988ರಲ್ಲಿ ಮದುವೆ ಆಗಿದ್ದ. 1992ರಲ್ಲಿ ಎರಡನೇ ಮದುವೆ ಆಗಿದ್ದ. ಎರಡು ಮದುವೆ ಆಗಿರುವ ವಿಚಾರ ಬಚ್ಚಿಟ್ಟು 2007ರಲ್ಲಿ ಮತ್ತೊಬ್ಬಳನ್ನ ಕೈಹಿಡಿದಿದ್ದ. ಮೊದಲ ಮತ್ತು ಎರಡನೇ ಹೆಂಡತಿಯರಿಗೆ ಕೈ ಕೊಟ್ಟು ಮೂರನೇ ಹೆಂಡ್ತಿ ಜತೆ ಸಂಸಾರ ನಡೆಸುತ್ತಿದ್ದ.

ತಮ್ಮ ಗಂಡ ಮೂರನೇ ಮದ್ವೆ ಆಗಿದ್ದಾನೆ ಎಂಬ ವಿಚಾರ ಮೊದಲ ಮತ್ತು 2ನೇ ಪತ್ನಿಯರಿಗೆ ತಿಳಿದಿದೆ. ಅವರಿಬ್ಬರೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಸರ್ಕಾರಿ ಶಾಲೆ ಶಿಕ್ಷಕ 3 ಮದ್ವೆ ಆಗಿದ್ದಾನೆ ಎಂಬ ವಿಚಾರ ತಿಳಿದು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಕಾನೂನು ಬಾಹಿರವಾಗಿ ಮದ್ವೆಯಾದ ಶಿಕ್ಷಕನನ್ನು ಕೆಲಸದಿಂದ ಅಮಾನತು ಮಾಡಿ ಡಿಡಿಪಿಐ ಶಾಂತಗೌಡ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

iPhone ಬದಲಿಗೆ ಕೈ ಸೋಪ್ ಬಾಟಲಿಯನ್ನು ಪಡೆದ, ಮಹಿಳೆ;

Mon Feb 7 , 2022
ನೀವು ಇಕಾಮರ್ಸ್ ವೆಬ್‌ಸೈಟ್‌ನಿಂದ ತುಂಬಾ ದುಬಾರಿ ಏನನ್ನಾದರೂ ಆರ್ಡರ್ ಮಾಡಿದರೆ ಮತ್ತು ನೀವು ತುಂಬಾ ವಿಭಿನ್ನವಾದ ಮತ್ತು ಅತ್ಯಂತ ಅಗ್ಗದ ಉತ್ಪನ್ನವನ್ನು ಪಡೆಯುವಲ್ಲಿ ನೀವು ಏನು ಮಾಡುತ್ತೀರಿ? ಜನರು ಕೆಲವು ಉತ್ಪನ್ನವನ್ನು ಖರೀದಿಸಿದ ಹಲವಾರು ನಿದರ್ಶನಗಳಿವೆ, ಆದರೆ ಅವರು ಪೆಟ್ಟಿಗೆಯಲ್ಲಿ ಬೇರೆ ಯಾವುದನ್ನಾದರೂ ಪ್ಯಾಕ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಯುಕೆಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿಯ ಘಟನೆ ನಡೆದಿದೆ. ಮಹಿಳೆಯು £1,500 ಬೆಲೆಯ ಹೊಸ iPhone 13 Pro Max ಅನ್ನು ಆರ್ಡರ್ […]

Advertisement

Wordpress Social Share Plugin powered by Ultimatelysocial