THALAPATHY:’ಬೀಸ್ಟ್’ ಸಿನಿಮಾಗೆ 100 ಕೋಟಿ ಪಡೆದ ವಿಜಯ್;

ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ತಮಿಳಿನ ನಟ ವಿಜಯ್​ ಕೂಡ ಇದ್ದಾರೆ.

ವಿಜಯ್​ ಸಿನಿಮಾಗಳೆಂದರೆ ಅಲ್ಲಿ ಹಬ್ಬ. ಬೇರೆ ಭಾಷೆಗಳ ರಾಜ್ಯದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ವಿಜಯ್.

ವಿಜಯ್​ ಸಿನಿಮಾಗಳು ರಿಲೀಸ್​ ಆದ ಕೆಲವೇ ದಿನಗಳಲ್ಲಿ ನೂರು-ಇನ್ನುರು ಕೋಟಿ ಗಳಿಕೆಯನ್ನು ಸುಲಭಕ್ಕೆ ಮಾಡಿಬಿಡುತ್ತದೆ. ಹೀಗಾಗಿ ಇವರ ಕಾಲ್​ಶೀಟ್​ಗಾಗಿ ನಿರ್ಮಾಕರು ಕಾಯುತ್ತಾ ಕುಳಿತಿರುತ್ತಾರೆ.

ಉದಾಹರಣಗೆ ಕಳೆದ ವರ್ಷ ಕೊರೋನಾ ಸಮಯದಲ್ಲಿ ಬಿಡುಗಡೆಯಾದ ವಿಜಯ್​ ಅಭಿನಯದ ಮಾಸ್ಟರ್​ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಶೇ.50ರಷ್ಟೇ ಸೀಟು ಭರ್ತಿಗೆ ಅವಕಾಶ ಇತ್ತು. ಹೀಗಿದ್ದರೂ ಮಾಸ್ಟರ್​ ಸಿನಿಮಾ ನೂರಾರು ಕೋಟಿ ಗಳಿಸಿತ್ತು.

ಇದೀಗ ವಿಜಯ್​ ಕೂಡ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ವಿಜಯ್ ಕೆಲವು ದಿನಗಳ ಹಿಂದಷ್ಟೆ ತಮ್ಮ 66ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿರುವ ಈ ಸಿನಿಮಾಕ್ಕೆ ದೊಡ್ಡ ಸಿನಿಮಾಗಳ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ.

‘ಮಾಸ್ಟರ್’, ‘ಬೀಸ್ಟ್’ ಸಿನಿಮಾಗಳಿಗೆ ಕ್ರಮವಾಗಿ 70, 80 ಕೋಟಿ ಸಂಭಾವನೆ ಪಡೆದಿದ್ದ ನಟ ವಿಜಯ್ ತಮ್ಮ 66ನೇ ಸಿನಿಮಾಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.

ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 120 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಆ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಭಾರತದ ನಟ ಎಂಬ ಖ್ಯಾತಿಯನ್ನು ವಿಜಯ್ ಪಡೆಯುತ್ತಿದ್ದಾರೆ.

ಒಟಿಟಿ ಹಾಗೂ ಮನೊರಂಜನಾ ಚಾನೆಲ್ ಎರಡೂ ಹೊಂದಿರುವ ಮೀಡಿಯಾ ಸಂಸ್ಥೆಯೊಂದು ಈ ಸಿನಿಮಾದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಎರಡಕ್ಕೂ ಸೇರಿ 200 ಕೋಟಿ ಆಫರ್ ನೀಡಿದೆಯಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂನಲ್ಲಿ ಮೂರು ವರ್ಷದ ಬಾಲಕಿ ತಾಯಿ ಆನೆಯ ಹಾಲು ಕುಡಿದಿದ್ದಾಳೆ

Sat Jan 29 , 2022
ಹೃದಯ ಬೆಚ್ಚಗಾಗುವ ಎನ್‌ಕೌಂಟರ್‌ನಲ್ಲಿ, ಅಸ್ಸಾಂನ ಮೂರು ವರ್ಷದ ಬಾಲಕಿ ಆನೆಯಿಂದ ಹಾಲು ಕುಡಿಯುತ್ತಿರುವುದು ಕಂಡುಬಂದಿದೆ. ಬಾಲಕಿ ಹರ್ಷಿತಾ ಬೋರಾ ಅಸ್ಸಾಂನ ಗೋಲಾಘಾಟ್ ಜಿಲ್ಲೆಯವಳು. ಆಕೆ ಆನೆಯೊಂದಿಗೆ ಆಟವಾಡುತ್ತಾ ಅದರ ಹಾಲು ಕುಡಿಯುತ್ತಿರುವುದು ಪತ್ತೆಯಾಗಿದೆ. ಬಾಲಕಿಯ ಉಪಸ್ಥಿತಿಯನ್ನು ಅರ್ಥಮಾಡಿಕೊಂಡ ಆನೆಯು ಬಾಲಕಿಗೆ ತನ್ನ ಮಾತೃತ್ವವನ್ನು ತೋರಿಸಿದೆ. ನಂತರ, ಹರ್ಷಿತಾ ಆನೆಯೊಂದಿಗೆ ಆಟವಾಡುತ್ತಿರುವುದು ಮತ್ತು ಜಂಬೂವನ್ನು ಏಕಾಂಗಿಯಾಗಿ ಆಡುತ್ತಿರುವುದು ಕಂಡುಬಂದಿದೆ. ಅವಳು ಆನೆಗಳನ್ನು ಬಿನು ಎಂದು ಕರೆಯುತ್ತಾಳೆ. ಟೈಮ್ಸ್ ನೌ ಪ್ರವೇಶಿಸಿದ ವೈರಲ್ […]

Advertisement

Wordpress Social Share Plugin powered by Ultimatelysocial