ಗೋಧಿ ಬೆಲೆ ನಿಯಂತ್ರಣಕ್ಕೆ ಸರ್ಕಾರದ ದೊಡ್ಡ ನಿರ್ಧಾರ!

ವದೆಹಲಿ: ದುಬಾರಿ ಗೋಧಿ ಮತ್ತು ಹಿಟ್ಟಿನಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡಲು ಸರ್ಕಾರದಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆ ಸರ್ಕಾರ ಗೋಧಿಯ ಮೀಸಲು ಬೆಲೆಯನ್ನು ಇಳಿಕೆ ಮಾಡಿದೆ. ಇದಲ್ಲದೇ ಸರ್ಕಾರ ಮುಕ್ತ ಮಾರುಕಟ್ಟೆಯಡಿ ಇ-ಹರಾಜು ಮೂಲಕ 25 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡುತ್ತಿದೆ.

ಈ ಹರಾಜುಗಳನ್ನು ಎಫ್‌ಸಿಐ ಮೂಲಕ ಮಾಡಲಾಗುತ್ತಿದೆ. ಇದುವರೆಗೆ 2 ಹರಾಜು ಪ್ರಕ್ರಿಯೆ ನಡೆದಿದ್ದು, ಈಗ 3ನೇ ಹರಾಜು ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ. 3ನೇ ಇ-ಹರಾಜಿನಲ್ಲಿ 11.72 ಲಕ್ಷ ಟನ್ ಗೋಧಿಯನ್ನು ಹಿಟ್ಟಿನ ಗಿರಣಿಗಳಂತಹ ಬೃಹತ್ ಗ್ರಾಹಕರಿಗೆ ಮಾರಾಟ ಮಾಡಲು ನೀಡಲಾಗುತ್ತದೆ.

ಬೆಲೆ ಏರಿಕೆಯ ಮಧ್ಯೆ ಕಳೆದ 2 ವಾರದ ಇ-ಹರಾಜಿನಲ್ಲಿ ಸುಮಾರು 12.98 ಲಕ್ಷ ಟನ್ ಗೋಧಿ ಮಾರಾಟವಾಗಿದ್ದು, ಈ ಪೈಕಿ 8.96 ಲಕ್ಷ ಟನ್‌ಗಳನ್ನು ಬಿಡ್‌ದಾರರು ಎತ್ತಿದ್ದಾರೆ. ಈ ಹಂತದ ನಂತರ ಗೋಧಿ ಮತ್ತು ಹಿಟ್ಟಿನ ಚಿಲ್ಲರೆ ದರ ಕಡಿಮೆಯಾಗಿದೆ.

ಮೀಸಲು ಬೆಲೆ ಕಡಿತ

ಕೇಂದ್ರ ಆಹಾರ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ, ಫೆಬ್ರವರಿ 22ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ 3ನೇ ಇ-ಹರಾಜಿನಲ್ಲಿ ಎಫ್‌ಸಿಐ ದೇಶಾದ್ಯಂತದ 620 ಡಿಪೋಗಳಿಂದ 11.72 ಲಕ್ಷ ಟನ್ ಗೋಧಿಯನ್ನು ಮಾರಾಟಕ್ಕೆ ನೀಡಲಿದೆ ಎಂದು ಹೇಳಲಾಗಿದೆ. ಗೋಧಿ ಮತ್ತು ಹಿಟ್ಟಿನ ಬೆಲೆಯನ್ನು ತಗ್ಗಿಸಲು ಸರ್ಕಾರವು OMSS ಯೋಜನೆಯಡಿ ಗೋಧಿ ಮಾರಾಟಕ್ಕಾಗಿ ಮೀಸಲು ಬೆಲೆಯನ್ನು ಕ್ವಿಂಟಲ್‌ಗೆ 2,150 ರೂ. ನಿಗದಿಪಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿಲ್ಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ಹತ್ತಾರು ವಾಹನಗಳ ನಡುವೆ ಡಿಕ್ಕಿ!

Sun Feb 19 , 2023
ಹೊಸದಿಲ್ಲಿ: ದಿಲ್ಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ಹತ್ತಾರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ರವಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 709 ಬಿ ನಲ್ಲಿರುವ ಪಾಲಿ ಗ್ರಾಮದ ಬಳಿ ರವಿವಾರ ಅಪಘಾತ ಸಂಭವಿಸಿದ್ದು, ಕಡಿಮೆ ಗೋಚರತೆಯ ನಡುವೆ ಬೈಕ್ ಗಳು , ಕಾರುಗಳು ಹಾಗೂ ಶಾಲಾ ಬಸ್‌ಗಳು ಸೇರಿದಂತೆ […]

Advertisement

Wordpress Social Share Plugin powered by Ultimatelysocial