ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’

ಭಾರತದ ಸಿನಿಮಾಗಳು ಆಸ್ಕರ್​ ಪ್ರಶಸ್ತಿ ಪಡೆಯಲು​ ಹಣಾಹಣಿ ನಡೆಸುತ್ತಿವೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ ಶಾರ್ಟ್​ಲಿಸ್ಟ್​ ಆಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತಾದ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ.ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದ ಈ ಸಿನಿಮಾ ಈಗ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಪೈಪೋಟಿ ನೀಡುತ್ತಿದೆ. ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿಯ ಕಣದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಸ್ಪರ್ಧಿಸುತ್ತಿದೆ. ಈ ಸುದ್ದಿಯನ್ನು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.ಈ ಸಿನಿಮಾದಲ್ಲಿ ಪಲ್ಲವಿ ಜೋಶಿ, ಅನುಪಮ್​ ಖೇರ್​, ದರ್ಶನ್​ ಕುಮಾರ್​, ಮಿಥುನ್​ ಚಕ್ರವರ್ತಿ ಮುಂತಾದವರು ನಟಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಜೊತೆಗೆ ಕನ್ನಡದ ‘ಕಾಂತಾರ’, ‘ವಿಕ್ರಾಂತ್​ ರೋಣ’ ಸಿನಿಮಾಗಳು ಕೂಡ ಈ ಶಾರ್ಟ್​ಲಿಸ್ಟ್​ನಲ್ಲಿ ಸ್ಥಾನ ಪಡೆದುಕೊಂಡಿವೆ.’ದಿ ಕಾಶ್ಮೀರ್​ ಫೈಲ್ಸ್​’ ಚಿತ್ರವು ಆಸ್ಕರ್​ನ ‘ವಿದೇಶಿ ಭಾಷಾ ಚಿತ್ರ’ ವಿಭಾಗಕ್ಕೆ ಸ್ಪರ್ಧೆ ನೀಡಲು ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಬಹುದು ಎಂದು ಬಹುತೇಕರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾದಿಂದ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದ್ದರಿಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ಅವಕಾಶ ಮಿಸ್​ ಆಗಿತ್ತು. ಆದರೆ ಈ ಚಿತ್ರ ಈಗ ನೇರವಾಗಿ ಆಸ್ಕರ್​ ಕಣದಲ್ಲಿ ಸ್ಪರ್ಧೆ ಮಾಡುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ಅಶ್ವಿನಿ ನಕ್ಷತ್ರ' ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ?

Tue Jan 10 , 2023
‘ಅಶ್ವಿನಿ ನಕ್ಷತ್ರ’ ಸೀರಿಯಲ್ ಪ್ರಿಯರಿಗೆ ತೀರಾ ಪರಿಚಿತವಾಗಿರುವ ಹೆಸರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ‘ಅಶ್ವಿನಿ ನಕ್ಷತ್ರ’ವೂ ಒಂದು. ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ಖಳನಾಯಕಿ ಭಾವನಾ ಆಗಿ ಅಭಿನಯಿಸಿದ್ದ ಪ್ರಿಯಾ ಕೆಸರೆ ಬರೋಬ್ಬರಿ ಎರಡು ವರ್ಷಗಳಿಂದ ಬಣ್ಣದ ಲೋಕದಿಂದ ಕಾಣೆಯಾಗಿದ್ದಾರೆ.ಅರ್ಥಾತ್ ಯಾವ ಧಾರಾವಾಹಿಯಲ್ಲಾಗಲಿ ಅಥವಾ ಸಿನಿಮಾಗಳಲ್ಲಿ ಆಗಲಿ ಆಕೆ ಕಾಣಿಸಿಕೊಳ್ಳುತ್ತಿಲ್ಲ.ಎರಡು ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾ ಕೆಸರೆ ಸದ್ಯ ಮುದ್ದು ಮಗನ […]

Advertisement

Wordpress Social Share Plugin powered by Ultimatelysocial