ಫೆಬ್ರವರಿ 17 ರಂದು ಬಹು ನಿರೀಕ್ಷಿತ “ದೊಡ್ಡಹಟ್ಟಿ ಬೋರೇಗೌಡ” ಚಿತ್ರ ಬಿಡುಗಡೆ.

ಕೆ.ಎಂ.ರಘು ನಿರ್ದೇಶನದ “ತರ್ಲೆ ವಿಲೇಜ್” ಎಂಬ ಗ್ರಾಮೀಣ ಸೊಗಡಿನ ಸಿನಿಮಾ ಗಾಂಧಿನಗರದ ಬಾಕ್ಸ್ ಆಫೀಸ್ ನಲ್ಲಿ ಲಾಭ ಪಡೆಯುವುದರ ಮೂಲಕ ಎಲ್ಲರ ಗಮನ ಸೆಳೆದಿತ್ತು. ಆ ನಂತರ ವಿಭಿನ್ನ ಕಥೆಯ “ಪರಸಂಗ” ಚಿತ್ರವನ್ನು ರಘು ನಿರ್ದೇಶನ ಮಾಡಿದ್ದರು. ಈಗ ಕೆ.ಎಂ.ರಘು, “ತಿಥಿ” ಸಿನಿಮಾದ ರೀತಿ ಸಂಪೂರ್ಣ ಗ್ರಾಮೀಣ ಪ್ರತಿಭೆಗಳನ್ನಿಟ್ಟುಕೊಂಡು “ದೊಡ್ಡಹಟ್ಟಿ ಬೋರೇಗೌಡ” ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದುಕೊಂಡಿದೆ‌. ಸನ್ಮಾನ್ಯ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದರು. ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಬಿ.ಸಿ.ಶಶಿಕುಮಾರ್ ಹಾಗೂ ಕೆ.ಎಂ.ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಶಿವಣ್ಣ ಬೀರಹುಂಡಿ,
ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದ ಗ್ರಾಮೀಣ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.

ವೀನಸ್ ನಾಗರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಹಾಗೂ ಕೆ‌.ಎಂ.ಪ್ರಕಾಶ್ ಅವರ ಸಂಕಲನವಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಮಾನ್ಯವಾಗಿ ಒಂದು ಮನೆಗಳಿಗೆ ಎಷ್ಟು ಕರೆಂಟ್ ಬಿಲ್‌ ಬರಬಹುದು.

Tue Feb 14 , 2023
ಹೈದರಾಬಾದ್:ಸಾಮಾನ್ಯವಾಗಿ ಒಂದು ಮನೆಗಳಿಗೆ ಎಷ್ಟು ಕರೆಂಟ್ ಬಿಲ್‌ ಬರಬಹುದು. 1 ಸಾವಿರ ಹೆಚ್ಚೆಂದೆರೆ ಒಂದು 500 ರೂ. ಹೆಚ್ಚು. ಅದಕ್ಕಿಂತ ಹೆಚ್ಚು ಕರೆಂಟ್‌ ಬಿಲ್‌ ಬರುವುದು ಕಡಿಮೆ. ಆದರೆ ತೆಲಂಗಾಣದ ಗ್ರಾಮ ಪಂಚಾಯತ್‌ ವೊಂದಕ್ಕೆ ಬಂದಿರುವ ಒಂದು ತಿಂಗಳ ಕರೆಂಟ್‌ ಬಿಲ್‌ ನ ಮೊತ್ತ ಕೇಳಿದರೆ ಒಮ್ಮೆ ಬೆಚ್ಚಿ ಬೀಳುವುದು ಗ್ಯಾರೆಂಟಿ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಕೊತ್ತಪಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಕಳೆದ ತಿಂಗಳ ಅಂದರೆ ಜನವರಿ ತಿಂಗಳ ಕರೆಂಟ್‌ […]

Advertisement

Wordpress Social Share Plugin powered by Ultimatelysocial