ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಾಟೋರಿಯಸ್ ಗ್ಯಾಂಗ್

ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಾಟೋರಿಯಸ್ ಗ್ಯಾಂಗ್ ನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಜಪೆ ಪೊಲೀಸರು ಬಂಧಿಸಿದ್ದಾರೆ. ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ್ದು, 5 ಜನ ಆರೋಪಿಗಳು ಕೃತ್ಯಕ್ಕೆ ಬಳಿಸಿರುವ ಪಿಕ್ ಅಪ್ ವಾಹನ 1, ಬೈಕ್ 2, ಕಬ್ಬಿಣದ ಕತ್ತಿ, ಚೂರಿ, ಕಬ್ಬಿಣದ ಹುಕ್ಕು, ಮರದ ದಿಮ್ಮಿ, ಮೆಣಸಿನ ಹುಡಿ ಪ್ಯಾಕೇಟ್ 1, ಮೊಬೈಲ್ ಫೋನ್ 4, 2 ಜೀವಂತ ದನಗಳನ್ನು ಮತ್ತು ದನವನ್ನು ಮಾರಾಟ ಮಾಡಿದ ರೂ. 15,000/- ಸಮೇತ ಒಟ್ಟು 6 ಲಕ್ಷ ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡರು.

ಇದನ್ನೂ ಓದಿ:ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ

Please follow and like us:

Leave a Reply

Your email address will not be published. Required fields are marked *

Next Post

ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆ

Sun Feb 7 , 2021
ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆಯಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. 3 ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.ಅನುಮಾನಸ್ಪದ ಸ್ಥಿತಿಯಲ್ಲಿ ಕವಿತಾ (30) ಶವ ಪತ್ತೆಯಾಗಿದ್ದು,ಮೃತಳ ಗಂಡ ಸೂರಿ ನಾಪತ್ತೆಯಾಗಿದ್ದಾನೆ. ಇನ್ನು ಸ್ಥಳಕ್ಕೆ ನಂಗಲಿ ಪೊಲೀಸ್ ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಾಟೋರಿಯಸ್ ಗ್ಯಾಂಗ್ Please follow and like us:

Advertisement

Wordpress Social Share Plugin powered by Ultimatelysocial