ಕೊಪ್ಪಳದ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಯ ಪಕ್ಕದ ತುಂಗಾಭದ್ರ ನದಿಯೂ ಕಲುಷಿತ.

ಕೊಪ್ಪಳದ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಯ ಪಕ್ಕದ ತುಂಗಾಭದ್ರ ನದಿಯೂ ಕಲುಷಿತ ಹಾಗೂ ಅಸ್ವಚ್ಛತೆಯಿಂದ ಕೂಡಿದ್ದು, ಸಹೋದರಿ ನಿವೇದಿತಾ ಪ್ರತಿಷ್ಠಾನದಿಂದ ಸ್ವಚ್ಛತಾ ಶ್ರಮಧಾನ ಶಿಬಿರ ಜರುಗಿ

ವಾ.ಓ: ಹೌದು! ಕೊಪ್ಪಳದ ಆಧಿಶಕ್ತಿ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿಗೆ ದೇಶ ವಿದೇಶಗಳಲ್ಲೂ ಲಕ್ಷಾಂತರ ಭಕ್ತರಿದ್ದಾರೆ. ಅದರಲ್ಲೂ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯಂದು ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಹರಿದು ಬರುತ್ತಾರೆ. ಅಲ್ಲದೆ ದೇವಸ್ಥಾನ ಹಿಂಭಾಗ ಹರಿಯು ತುಂಗಾಭದ್ರ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಅಲ್ಲಿಯೇ ಪ್ಲಾಸ್ಟಿಕ್, ಉಡಪು ಹಾಗೂ ಕೆಲವು ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಾರೆ. ಇದರಿಂದ ಹರಿಯುವ ನದಿ ಅಸ್ವಚ್ಚತೆಯಿಂದ ಕೂಡಿರುತ್ತದೆ. ಹಾಗಾಗಿ ನದಿಯ ಸ್ವಚ್ಛತೆಯನ್ನು
ಸಹೋದರಿ ನಿವೇದಿತಾ ಪ್ರತಿಷ್ಠಾನ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು. ಪ್ರತಿ ತಿಂಗಳು ಸರ್ವಾಜನಿಕ ಸ್ಥಳ, ಧಾರ್ಮಿಕ ಸ್ಥಳ ಹೀಗೆ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈ ಬಾರಿ ಹುಲಿಗಿಯಲ್ಲಿ ನಿವೇದಿತಾ ಸಹೋದರಿಯ ನೂರಾರು ಸದಸ್ಯರ ತಂಡ ಸ್ವಚ್ಛತಾ ಕಾರ್ಯ ಹಮ್ಮಿಕೊಂಡ ನದಿಯಲ್ಲಿ ಉಳಿದ ಕಸವನ್ನು ಸ್ವಚ್ವ ಮಾಡಿದರು. ನದಿಗಳು ಸ್ವಚ್ಛವಾಗಿದ್ದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ , ಆ ಮೂಲಕ ಪ್ರವಾಸೋದ್ಯಮ ಅಭಿವೃದ್ದಿಗೊಳ್ಳುತ್ತದೆ. ಸ್ಥಳೀಯರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ದಿಯೂ ಸಾಧ್ಯವಾಗುತ್ತೆ. ನದಿ ಸ್ವಚ್ಛ ಇರುವುದರಿಂದ ಜಲಚರ ಪ್ರಾಣಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ನದಿಗಳನ್ನು ಕಲುಷಿತಗೊಳಿಸದೆ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ತಂಡ ಅಭಿಪ್ರಾಯ ವ್ಯಕ್ತಪಡಿಸಿತು. ಸ್ವಚ್ಛತೆ ಕಾರ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಕೂಡ ಭಾಗವಿಸಿದ್ದರಂತೆ. ಒಟ್ಟಾರೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಿವೇದಿತಾ ತಂಡ ಮಾಡುತ್ತಿದ್ದು, ಸಾರ್ವಜನಿಕರು ಸಹ ಇದರ ಬಗ್ಗೆ ಜಾಗೃತರಾಗಿ ವಾತಾವರಣ ಸ್ವಚ್ಚವಾಗಿಡಲು ಮುಂದಾಗಬೇಕಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟರ್ಕಿ ಭೂಕಂಪದಲ್ಲಿ 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ ಮಗುವಿನ ಮತ್ತೊಂದು ವೀಡಿಯೊ ವೈರಲ್

Mon Feb 13 , 2023
ಇಸ್ತಾಂಬುಲ್: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಅವಶೇಷಗಳ ಅಡಿಯಲ್ಲಿ 128 ಗಂಟೆ ಕಾಲ ಸಿಲುಕಿಕೊಂಡಿದ್ದ ಎರಡು ತಿಂಗಳ ಮಗುವೊಂದನ್ನು ಟರ್ಕಿಯ ಅಂಟಾಕ್ಯಾದಲ್ಲಿ ಧ್ವಂಸಗೊಂಡ ಕಟ್ಟಡದಿಂದ ಪರಿಹಾರ ತಂಡಗಳು ಯಶಸ್ವಿಯಾಗಿ ಹೊರ ತೆಗೆದ ವೀಡಿಯೊ ವೈರಲ್ ಆದ ಮರುದಿನ ಅದೇ ಮಗುವಿನ ಮತ್ತೊಂದು ವೀಡಿಯೊ ಕೂಡ ಜನಮೆಚ್ಚುಗೆ ಪಡೆದಿದೆ. ಮುಖದ ಮೇಲೆ ಧೂಳು ಹಾಗೂ ಕೊಳೆಯೊಂದಿಗಿದ್ದ ಮಗುವಿನ ಚಿತ್ರಗಳು ಹಾಗೂ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದೀಗ ಒಂದು ದಿನದ […]

Advertisement

Wordpress Social Share Plugin powered by Ultimatelysocial