ರಾಜ್ಯ ವಿಧಾನ ಸಭೆ ಚುನಾವಣೆಗೆ ಕೇವಲ ಎರಡೇ ತಿಂಗಳು ಮಾತ್ರ ಬಾಕಿ ಇದೆ.

ರಾಜ್ಯ ವಿಧಾನ ಸಭೆ ಚುನಾವಣೆಗೆ ಕೇವಲ ಎರಡೇ ತಿಂಗಳು ಮಾತ್ರ ಬಾಕಿ ಇದೆ. ಇದೇ ಹೊತ್ತಲ್ಲಿ ಆಡಳಿತರೂಢ ಬಿಜೆಪಿಯ ಕೇಂದ್ರ ನಾಯಕರು ಮಾತ್ರ ರಾಜ್ಯಕ್ಕೆ ಪದೇ ಪದೆ ಭೇಟಿ ನೀಡ್ತಿದ್ದು, ಚುನಾವಣಾ ಚಕ್ರವ್ಯೂಹ ಬೇಧಿಸಲು ಹಲವು ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ಇದೇ ಹೊತ್ತಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭರ್ಜರಿ ಮತಬೇಟೆಯಾಡಲಿದ್ದಾರೆ.

ನಡ್ಡಾ ಭೇಟಿ ಹಿಂದೆ ರಾಜಾಕೀಯ ಲೆಕ್ಕಾಚಾರವಿದ್ಯಾ ಅನ್ನೋ ಮಾತು ಜೋರಾಗಿದೆ.

ಉಡುಪಿ ಆಯ್ತು.. ಕಾಫಿನಾಡಲ್ಲೂ ಜೆ.ಪಿ.ನಡ್ಡಾ ಸಂಚಾರ
ಕರ್ನಾಟಕ ಚುನಾವಣೆಗೆ ಕೆಲವೇ ಕೆಲವು ದಿನಗಳಿರುವಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ,ನಡ್ಡಾ ರಾಜ್ಯಕ್ಕೆ ಆಗಮಿಸಿದ್ದಾರೆ. ಕರಾವಳಿಯಲ್ಲಿ ಒಂದು ಸುತ್ತಿನ ಸಂಚಾರ ಮಾಡಿದ್ದ ನಡ್ಡಾ ಕಾಫಿ ನಾಡಿಗೂ ಕಾಲಿಟ್ಟಿದ್ದಾರೆ. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ವಿವಾದದ ಮಧ್ಯೆ, ಶೃಂಗೇರಿ ಮಠದ ಬಗ್ಗೆಯೂ ಪ್ರಸ್ತಾಪವಾಗಿತ್ತು. ಇದು ಸಾಕಷ್ಟು ಪರ ವಿರೋಧದ ಚರ್ಚೆಗೆ ಎಡೆ ಮಾಡಿತ್ತು. ಈ ವಿವಾದವಾಗಿ ಕೆಲವೇ ದಿನಗಳಲ್ಲೇ ಜೆಪಿ ನಡ್ಡಾ ಶೃಂಗೇರಿಗೆ ಭೇಟಿ ನೀಡಿದ್ದಾರೆ.

ಉಡುಪಿಯ ಪ್ರವಾಸ ಮುಗಿಸಿ ಬಂದ ಜೆ.ಪಿ.ನಡ್ಡಾಗೆ ಶೃಂಗೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ವಾಗತಿಸಿದ್ರು. ನರಸಿಂಹವನದಲ್ಲಿರುವ ಗುರು ನಿವಾಸಕ್ಕೆ ಆಗಮಿಸಿದ್ದ ನಡ್ಡಾ ಜಗದ್ಗುರುಗಳ ದರ್ಶನ ಪಡೆದರು. ಸುಮಾರು 15 ನಿಮಿಷಗಳ ಕಾಲ ಜೆ ಪಿ ನಡ್ಡಾ ಸಮಾಲೋಚನೆ ನಡೆಸಿದ್ರು.. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್ ಮತ್ತು ಸಿ.ಟಿ. ರವಿ ಕೂಡ ಸಾಥ್ ನೀಡಿದ್ರು.

ಶಾರದಾಂಬೆ ದೇವಿಯ ದರ್ಶನ ಪಡೆದ ಜೆ.ಪಿ.ನಡ್ಡಾ
ಶ್ರೀಮಠದಿಂದ ಕಾಲ್ನಡಿಗೆ ಮೂಲಕ ಶಾರದಾಂಬೆ ದೇವಸ್ಥಾನಕ್ಕೆ ಜೆಪಿ ನಡ್ಡಾ ಅಗಮಿಸಿದ್ರು. ತುಂಗಾನದಿಯ ಕಿರುಸೇತುವೆ ಮೇಲೆ ನಡೆದುಕೊಂಡು, ಶಾರದಾಂಬೆ ದೇವಿ ಪಡೆದ್ರು. ಇಂದು ರಾತ್ರಿ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿರೋ ನಡ್ಡಾ, ಇಂದು ಬೆಳಗ್ಗೆ ಶಾರದಾಂಬಾ ಪೂಜೆಯಲ್ಲಿ ಪಾಲ್ಗೊಂಡು, ಅಲ್ಲಿಂದ ಚಿಕ್ಕಮಗಳೂರಿಗೆ ತೆರಳಲಿದ್ದಾರೆ.

ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ಶಾಸಕ ಸಿ.ಟಿ.ರವಿ ಅವರ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿರುವ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ, ಹಾಸನ ಜಿಲ್ಲೆಯ ಬೇಲೂರಿಗೆ ತೆರಳಿ, ಸಮಾವೇಶದಲ್ಲಿ ಭಾಗಿಯಾಗೋ ಸಾಧ್ಯತೆ ಇದೆ. ಒಟ್ಟಾರೆ, ಒಂದ್ಕಡೆ ಮೋದಿ ಬ್ಯಾಕ್ ಟು ಬ್ಯಾಕ್ ಪ್ರವಾಸ ಮಾಡ್ತಿರೋ, ಅತ್ತ ಅಮಿತ್ ಶಾ ಕೂಡ ಸೈಲೆಂಟ್ ಆಗಿಯೇ ಪಕ್ಷ ಸಂಘಟನೆಯಲ್ಲಿ ರಣತಂತ್ರ ಹೆಣಯುತ್ತಿದ್ದಾರೆ. ಇದರ ಮಧ್ಯೆ, ಬಿಜೆಪಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೂಡ ಕರಾವಳಿ ಮತ್ತು ಮಲೆನಾಡಿನ ಮಠಗಳಿಗೆ ಭೇಟಿ ನೀಡೋ ಮೂಲಕ ಬ್ರಾಹ್ಮಣ ಸಮುದಾಯದ ಒಳಪಂಗಡದ ಮತಗಳಿಗೆ ಗಾಳ ಹಾಕಿದ್ರಾ ಅನ್ನೊ ಮಾತುಗಳು ಕೇಳಿ ಬರ್ತಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ತಮ್ಮ ಘನತೆ ಕಾಪಾಡುವಂತೆ ಪ್ರಧಾನಿ ಮೋದಿ ಸಲಹೆ ನೀಡಬೇಕು: ಜಗ್ಗೇಶ್

Tue Feb 21 , 2023
ಬೆಂಗಳೂರು: ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಇದೀಗ ಭಾರಿ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅಧಿಕಾರಿಗಳಿಬ್ಬರು ತಮ್ಮ ಘನತೆ ಕಾಪಾಡುವಂತೆ ಪ್ರಧಾನಿ ಮೋದಿ ಸಲಹೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಐಪಿಎಸ್ ಮತ್ತು ಐಎಎಸ್ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಹುದ್ದೆಗಳು. ಸರ್ಕಾರಕ್ಕಾಗಿ ಸೇತುವೆಯಂತೆ ಕೆಲಸ ಮಾಡಬೇಕು. ಮಾಧ್ಯಮದಲ್ಲಿ ವೈಯಕ್ತಿಕ ದ್ವೇಷವನ್ನು ವ್ಯಕ್ತಪಡಿಸಬಾರದು ಎಂದು […]

Advertisement

Wordpress Social Share Plugin powered by Ultimatelysocial