ಆಡುಮಲ್ಲೇಶ್ವರ ಪ್ರಾಣಿಸಂಗ್ರಹಾಲಯಕ್ಕೆ ಬಂಗಾಳದ ಹುಲಿಗಳ ಎಂಟ್ರಿ.

 

ಚಿತ್ರದುರ್ಗದ ಆಡುಮಲ್ಲೇಶ್ವರ ಅರಣ್ಯಧಾಮಕ್ಕೆ ಕಾಡಿನ ರಾಜ ಬಂಗಾಳದ ಹುಲಿಗಳು ಎಂಟ್ರಿ ಕೊಟ್ಟಿದ್ದು, ಹುಲಿರಾಯನನ್ನು ಕಣ್ತುಂಬಿಕೊಳ್ಳಲು ಪ್ರಾಣಿ ಪ್ರೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಕಳೆದ 10ದಿನಗಳ ಹಿಂದೆ ಮೈಸೂರು ಮೃಗಾಲಯದಿಂದ ಅಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಎರಡು ಬಂಗಾಳದ ಹುಲಿಗಳನ್ನು ತರಲಾಗಿದೆ. 7ವರ್ಷದ ಹೆಣ್ಣುಹುಲಿ ನಿಷಾ ಹಾಗೂ 10ತಿಂಗಳ ಗಂಡು ಹುಲಿ ವಿಜಯ್ ಈಗ ಪ್ರವಾಸಿಗರ ಹಾಗೂ ಪ್ರಾಣಿ ಪ್ರೀಯರ ಕೇಂದ್ರವಾಗಿದ್ದಾರೆ. ಈಗಾಗಲೇ ಹುಲಿಗಳಿಗೆ ಮನೆಗಳನ್ನ ನಿರ್ಮಾಣ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ವೀಕ್ಷಣೆಗೆ ಒದಗಿಸಿದ್ದಾರೆ. ್ರಮೇಣ ಹುಲಿಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಅವನ್ನು ಕಣ್ತುಂಬಿಕೊಳ್ಳಲು ಜನರು ಅರಣ್ಯಧಾಮದತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ರಜೆ ದಿನ ಹಾಗೂ ಹಬ್ಬಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಚಿರತೆ, ಕರಡಿ, ಜಿಂಕೆ, ಮೊಸಳೆ ಹೀಗೆ ವಿವಿಧ ಪ್ರಾಣಿಗಳೊಂದಿಗೆ ದೇಶ ವಿದೇಶ ತಳಿಯ ಪಕ್ಷಿಗಳನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ ಜಿಲ್ಲೆಯ ಪ್ರವಾಸೋದ್ಯಮ ಹೆಚ್ಚಲಿ ಅಂತಾ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೆಸ್ಸಿಗೆ ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿ,

Tue Feb 28 , 2023
ಪ್ಯಾರಿಸ್‌: 2022ನೇ ಸಾಲಿನ ಫುಟ್‌ಬಾಲ್ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ, ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಅವರು, ಮಹಿಳಾ ವಿಭಾಗದ ಪ್ರಶಸ್ತಿ ಗಳಿಸಿದ್ದಾರೆ.ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದ್ದ ಅರ್ಜೇಂಟೀನಾ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು.36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವಕಪ್ ಗೆದ್ದು […]

Advertisement

Wordpress Social Share Plugin powered by Ultimatelysocial