ತಿರುಪತಿ ತಿಮ್ಮಪ್ಪನ ದರ್ಶನ ದುಬಾರಿ.

ದೇವಸ್ಥಾನಂ (ಟಿಟಿಡಿ) ತಿರುಪತಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತದೆ.

ಆಂಧ್ರ ಪ್ರದೇಶ ಮಾತ್ರವಲ್ಲದೇ ದೇಶದ ನಾನಾ ರಾಜ್ಯದ ಜನರು ತಿರುಪತಿಗೆ ಭೇಟಿ ನೀಡುತ್ತಾರೆ.

ಈಗ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದು ಸ್ಪಲ್ಪ ದುಬಾರಿಯಾಗಿದೆ. ಜನವರಿ 12 ರಿಂದ ಫೆಬ್ರವರಿ 28ರ ತನಕ ವಿಶೇಷ ದರ್ಶನ ಪಡೆಯಲು ಟಿಟಿಡಿ ಈಗಾಗಲೇ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದೆ. ವಿಶೇಷ ಟಿಕೆಟ್‌ಗೆ 300 ರೂ. ದರವಿದೆ.

ಟಿಟಿಟಿ ವೆಬ್‌ಸೈಟ್‌ ಮೂಲಕ ವಿಶೇಷ ದರ್ಶನದ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಜನವರಿ 9ರ ಬೆಳಗ್ಗೆ 10 ಗಂಟೆಗೆ ಬುಕ್ಕಿಂಗ್ ಆರಂಭಗೊಂಡಿದೆ. ಈಗ ಟಿಕೆಟ್ ಬುಕ್ ಮಾಡಿದವರು ತಿರುಪತಿಯಲ್ಲಿ ವಾಸ್ತವ್ಯದ ರೂಂ ಬಾಡಿಗೆ ಹೆಚ್ಚು ಮಾಡಿರುವ ಮಾಹಿತಿ ನೀಡಿದ್ದಾರೆ.

ಹೊಸದಾಗಿ ನವೀಕರಣ ಮಾಡಲಾದ ಅತಿಥಿ ಗೃಹ, ಕಾಟೇಜ್‌ಗಳ ಬಾಡಿಗೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಟಿಟಿಡಿ ದರ ಏರಿಕೆ ಸಮರ್ಥನೆ ಮಾಡಿಕೊಂಡಿದ್ದು, ಮೂರು ದಶಕದಿಂದ ಒಂದೇ ದರವಿತ್ತು ಎಂದು ಹೇಳಿದೆ.

ಏರ್‌ಪೋರ್ಟ್‌ನಲ್ಲೇ ತಿರುಪತಿ ವಿಐಪಿ ದರ್ಶನ ಟಿಕೆಟ್ ಪಡೆಯಿರಿ.

ನಾರಾಯಣಗಿರಿ ಅತಿಥಿ ಗೃಹದಲ್ಲಿ ರೂಂ ಬಾಡಿಗೆ 750 ರೂ. ಇತ್ತು. ಇದನ್ನು 1,700 ರೂ.ಗಳಿಗೆ ಏರಿಕೆ ಮಾಡಲಾಗಿದೆ. ವಿಶೇಷ ಮಾದರಿ ಕಾಟೇಜ್‌ಗಳ ದರಗಳು 750 ರಿಂದ 2,200 ರೂ.ಗಳಿಗೆ ಏರಿಕೆಯಾಗಿದೆ.

Tirupati Darshan: ತಿರುಪತಿ ತಿಮ್ಮಪ್ಪನ ಗರ್ಭಗುಡಿ 6 ತಿಂಗಳು ಮುಚ್ಚಲ್ಲ- ಮುಖ್ಯ ಅರ್ಚಕ ಹೇಳಿದ್ದೇನು?

ದರ ಏರಿಕೆ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ದರಗಳನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಟಿಟಿಡಿ ಬಾಡಿಗೆ ಹೆಚ್ಚಳ ಮಾಡಿರುವ ತನ್ನ ತೀರ್ಮಾನವನ್ನು ಸಮರ್ಥಿಸಿಕೊಂಡಿದೆ. ನಾರಾಯಣಗಿರಿ ಅತಿಥಿ ಗೃಹವನ್ನು ಈಗ ಭಕ್ತರ ಬೇಡಿಕೆಯಂತೆ ನವೀಕರಣ ಮಾಡಲಾಗಿದೆ. ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. ಅದರಂತೆ ಬಾಡಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದೆ.

ತಿರುಪತಿಯಲ್ಲಿನ ವಾಸ್ತವ್ಯವ ವಿವರಗಳು

* ತಿರುಪತಿ ಶ್ರೀನಿವಾಸಂ ಕಾಂಪ್ಲೆಕ್ಸ್. ಸಾಮಾನ್ಯ ರೂಂಗೆ 200 ರೂ.

* ತಿರುಪತಿ ವಿಷ್ಣು ನಿವಾಸಂ & ನಾನ್‌ ಎಸಿ ರೂಂ 2 ಬೆಡ್ ಅಟ್ಯಾಚ್ ಬಾತ್‌ ರೂಂ 300 ರೂ.

* ತಿರುಪತಿ ಶ್ರೀನಿವಾಂ ಕಾಂಪ್ಲೆಕ್ಸ್ ಎಸಿ ರೂಂ 400 ರೂ.

* ತಿರುಪತಿ ವಿಷ್ಣು ನಿವಾಸಂ & ನಾನ್ ಎಸಿ ಸೂಟ್ 2 ಬೆಡ್ ಅಟ್ಯಾಚ್ ಬಾತ್ ರೂಂ 500 ರೂ.

* ತಿರುಪತಿ ಶ್ರೀನಿವಾಸಂ ಕಾಂಪ್ಲೆಕ್ಸ್ & ಡಿಲಕ್ಸ್‌ ರೂಂ 600 ರೂ.

* ತಿರುಪತಿ ವಿಷ್ಣು ನಿವಾಸಂ & ಎಸಿ ರೂಂ 800 ರೂ., 2 ಬೆಡ್ ಅಟ್ಯಾಚ್ ಬಾತ್‌ ರೂಂ

* ತಿರುಪತಿ ಮಾಧವಂ ಅತಿಥಿ ಗೃಹ & ಎಸಿ ಸೂಟ್ 800 ರೂ.

* ತಿರುಪತಿ ಮಾಧವಂ ಅತಿಥಿ ಗೃಹ & ಎಸಿ ಡಿಲಕ್ಸ್ 1000 ರೂ.

* ತಿರುಪತಿ ವಿಷ್ಣು ನಿವಾಸಂ & ಎಸಿ ಸೂಟ್ ವಿತ್ 2 ಬೆಟ್ ಅಟ್ಯಾಚ್ ಬಾತ್‌ ರೂಂ 1300 ರೂ.

ವಿಶೇಷ ದರ್ಶನ ಬುಕ್ ಮಾಡುವುದು ಹೇಗೆ? ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಯಸುವವರು tirupatibalaji.ap.gov.in. ವೆಬ್‌ಸೈಟ್‌ ಮೂಲಕ ವಿಶೇಷ ದರ್ಶನದ ಟಿಕೆಟ್ ಬುಕ್ ಮಾಡಬಹುದಾಗಿದೆ.

ಆನ್‌ಲೈನ್ ಬುಕ್ ಮಾಡುವಾಗ ನಿಮ್ಮ ಇ-ಮೇಲ್ ಐಡಿ ನೀಡಬೇಕು. ವೆಬ್‌ಸೈಟ್‌ನಲ್ಲಿ ನೀಡುವ ವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕವೇ ಪೇ-ಮೆಂಟ್ ಮಾಡಲು ಸಹ ಅವಕಾಶ ನೀಡಲಾಗಿದೆ. ಹಣ ಪಾವತಿ ಬಳಿಕ 300 ರೂ. ದರ್ಶನದ ಟಿಕೆಟ್ ನಿಮ್ಮ ಇ-ಮೇಲ್‌ ಐಡಿಗೆ ಬರಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

12 ದಿನದಲ್ಲಿ 5.4 ಸೆ.ಮೀ ಮುಳುಗಿದ ಜೋಶಿಮಠ.

Fri Jan 13 , 2023
ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂ.ಮೀಟರ್‌ನಷ್ಟು ಮುಳುಗಿದೆ, ಭವಿಷ್ಯದಲ್ಲಿ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಇಸ್ರೋ ಮಾಹಿತಿ ನೀಡಿದೆ. ಈ ಬಗ್ಗೆ ಇಸ್ರೋ ಅಧ್ಯಯನ ಕೈಗೊಂಡಿದ್ದು, ಸಂಸ್ಥೆಯ ದೂರಸಂವೇದಿ ಕೇಂದ್ರವು ಜೋಶಿಮಠ ನಗರದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ನಿಧಾನವಾಗಿ ಭೂಮಿ ಹೇಗೆ ಮುಳುಗುತ್ತಿದೆ ಎಂಬುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ. ಡಿ.27ರಿಂದ ಜ.8ರವೆಗಿನ ಚಿತ್ರಗಳು ಇದಾಗಿದ್ದು, ಈ ಸಂದರ್ಭದಲ್ಲಿ ಭೂಮಿ 5.4 ಸೆಂ.ಮೀಟರ್‌ನಷ್ಟು ಕುಸಿದಿರುವುದು ಕಂಡು ಬಂದಿದೆ. […]

Advertisement

Wordpress Social Share Plugin powered by Ultimatelysocial