ಇನ್ಮುಂದೆ ದೀರ್ಘ‌ ಬರಹಕ್ಕೆ ಟ್ವಿಟರ್‌ನಲ್ಲೂ ಅವಕಾಶ?

ವಾಷಿಂಗ್ಟನ್‌: ಟ್ವಿಟರ್‌ನಲ್ಲಿ ಹೆಚ್ಚೆಂದರೆ 280 ಕ್ಯಾರೆಕ್ಟರ್‌ಗಳ ಟ್ವೀಟ್‌ ಮಾಡಬಹುದು. ಅದಕ್ಕಿಂತ ದೀರ್ಘ‌ ಟ್ವೀಟ್‌ ಮಾಡಬೇಕೆಂದರೆ ಅದನ್ನು ಎಲ್ಲಾದರೂ ಬರೆದು ಅದರ ಸ್ಕ್ರೀನ್‌ ಶಾಟ್‌ ಮಾತ್ರ ಹಂಚಿಕೊಳ್ಳಬಹುದಷ್ಟೇ.ಆದರೆ ಇನ್ನು ಮುಂದೆ ಹಾಗಿರುವುದಿಲ್ಲ.ಫೇಸ್‌ಬುಕ್‌ ರೆಡ್ಡಿಟ್‌ ರೀತಿಯಲ್ಲೇ ದೀರ್ಘ‌ ಬರಹಗಳನ್ನು ನೀವು ಟ್ವಿಟರ್‌ನಲ್ಲೂ ಹಂಚಿಕೊಳ್ಳಬಹುದು. ಅದಕ್ಕೆಂದು ಸಂಸ್ಥೆ ಹೊಸ ಅಪ್‌ಡೇಟ್‌ ಒಂದರ ಮೇಲೆ ಕೆಲಸ ಮಾಡುತ್ತಿದೆ.ಡಿಜಿಟಲ್‌ ಪತ್ತೆದಾರಿಕೆ ಕೆಲಸ ಮಾಡುವುದಕ್ಕೆ ಪ್ರಸಿದ್ಧರಾಗಿರುವ ಜಾನೆ ಮಂಚುನ್‌ ವೊಂಗ್‌ ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ಹಂಚಿ ಕೊಂಡಿದ್ದಾರೆ. “ಟ್ವಿಟರ್‌ ಆರ್ಟಿಕಲ್‌’ ಹೆಸರಿನ ನೂತನ ಆಯ್ಕೆಯ ಸ್ಕ್ರೀನ್‌ಶಾಟ್‌ ಹಂಚಿಕೊಂಡಿ ರುವ ಅವರು, “ಇದು ಟ್ವಿಟರ್‌ನಲ್ಲಿ ದೊಡ್ಡ ಬರಹಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಡಬಲ್ಲ ಅಪ್‌ಡೇಟ್‌ ಆಗಿರುವ ಸಾಧ್ಯತೆಯಿದೆ’ ಎಂದು ಬರೆದುಕೊಂಡಿದ್ದಾರೆ.ಅದಾಗ್ಯೂ ಟ್ವಿಟರ್‌ ಈ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಟ್ವಿಟರ್‌ ಪ್ರಾರಂಭಿಕ ವರ್ಷಗಳಲ್ಲಿ ಒಂದು ಟ್ವೀಟ್‌ಗೆ 140 ಕ್ಯಾರೆಕ್ಟರ್‌ ಗಳ ಗಡಿ ಇಟ್ಟಿತ್ತು. ಅನಂತರ ಅದನ್ನು 280 ಕ್ಯಾರೆಕ್ಟರ್‌ಗೆ ಏರಿಸಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಗಾತಿಯ ಸ್ಪರ್ಷದಲ್ಲಿ ಜಾದೂ ಇದೆ.

Fri Feb 4 , 2022
ಸಂಗಾತಿಯ ಸ್ಪರ್ಷದಲ್ಲಿ ಜಾದೂ ಇದೆ. ಪರಸ್ಪರ ಕೈಕೈ ಹಿಡಿದು ಓಡಾಡುವ ಪ್ರೇಮಿಗಳಿಗಂತೂ ಒಂದು ರೀತಿಯ ರೋಮಾಂಚನ ಸಹಜ. ಆದ್ರೆ ಈ ಸ್ಪರ್ಷದಲ್ಲಿ ಪ್ರೀತಿ, ಸುರಕ್ಷತಾ ಭಾವ ಮಾತ್ರವಲ್ಲ ಆರೋಗ್ಯವೂ ಇದೆ. ಹೌದು ಸಂಗಾತಿ ಸ್ಪರ್ಷಿಸಿದಾಗ ಹೃದಯ ಬಡಿತ ಮತ್ತು ಉಸಿರಾಟ ಹೊಂದಾಣಿಕೆಯಾಗುತ್ತದೆ, ಇದರಿಂದ ನೋವು ಕೂಡ ಕ್ಷೀಣಿಸುತ್ತದೆ.ಇತ್ತೀಚೆಗೆ ನಡೆಸಲಾದ ಸಂಶೋಧನೆಯೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ. ಇದನ್ನು ಅಂತರ್ ವ್ಯಕ್ತೀಯ ಸಿಂಕ್ರೊನೈಸೇಶನ್ ಅಂತಾ ವಿಜ್ಞಾನಿಗಳು ಕರೆಯುತ್ತಾರೆ. ಜೊತೆಯಾಗಿ ಹೋಗುತ್ತಿರುವಾಗ ಪರಸ್ಪರರ ನಡಿಗೆ […]

Advertisement

Wordpress Social Share Plugin powered by Ultimatelysocial