ಹಿರಿಯ ನಟ ರಾಜೇಂದ್ರ ಪ್ರಸಾದ್ ಗೆ ಕೊರೊನಾ ಪಾಸಿಟಿವ್:TOLLYWOOD;

ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೌದು.. ಟಾಲಿವುಡ್‌ನಲ್ಲಿ ಕೋವಿಡ್ ಅಬ್ಬರ ಜೋರಾಗಿದ್ದು, ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.

ಈ ಹಿಂದೆ ಟಾಲಿವುಡ್ ನಟರಾದ ಮಹೇಶ್ ಬಾಬು, ಲಕ್ಷ್ಮಿ ಮಂಚು ಮತ್ತು ವಿಶ್ವಕ್ ಸೇನ್ ಸೇರಿದಂತೆ ಹಲವು ನಟರು COVID-19 ಸೋಂಕಿಗೆ ತುತ್ತಾಗಿದ್ದರು. ಇದೀಗ ರಾಜೇಂದ್ರ ಪ್ರಸಾದ್ ಅವರು ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ರಾಜೇಂದ್ರ ಪ್ರಸಾದ್‌ ಅವರು ಆರಂಭಿಕ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ಪರೀಕ್ಷೆಗೆ ಮಾಡಿಸಿಕೊಂಡಿದ್ದರು. ಇದೀಗ ಅವರ ಪರೀಕ್ಷಾ ವರದಿ ಲಭ್ಯವಾಗಿದ್ದು, ವರದಿ ಪಾಸಿಟಿವ್ ಬಂದಿದೆ.

ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಸಿಟಿವ್ ಎಂದು ದೃಢಪಟ್ಟ ನಂತರ ವೈದ್ಯರ ಸಲಹೆ ಮೇರೆಗೆ ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ರಾಜೇಂದ್ರ ಪ್ರಸಾದ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದಿಬಂದಿದೆ.

ಇತ್ತೀಚೆಗಷ್ಟೇ ಟಾಲಿವುಡ್ ನಟರಾದ ಮಹೇಶ್ ಬಾಬು, ಲಕ್ಷ್ಮಿ ಮಂಚು ಮತ್ತು ವಿಶ್ವಕ್ ಸೇನ್ ಸೇರಿದಂತೆ ಹಲವು ನಟರು COVID-19 ಸೋಂಕಿಗೆ ತುತ್ತಾಗಿದ್ದರು. ಅಲ್ಲದೆ ತಮಿಳುನಟ ಬಾಹುಬಲಿ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಕೊಕೇನ್ ರಾಜ": ಪ್ಯಾಬ್ಲೊ ಎಸ್ಕೋಬಾರ್;

Sun Jan 9 , 2022
ಪ್ಯಾಬ್ಲೊ ಎಸ್ಕೋಬಾರ್, ಪೂರ್ಣವಾಗಿ ಪ್ಯಾಬ್ಲೊ ಎಮಿಲಿಯೊ ಎಸ್ಕೋಬಾರ್ ಗವಿರಿಯಾ, (ಜನನ ಡಿಸೆಂಬರ್ 1, 1949, ರಿಯೊನೆಗ್ರೊ, ಕೊಲಂಬಿಯಾ-ಮರಣ ಡಿಸೆಂಬರ್ 2, 1993, ಮೆಡೆಲಿನ್), ಕೊಲಂಬಿಯಾದ ಕ್ರಿಮಿನಲ್ ಅವರು ಮೆಡೆಲಿನ್ ಕಾರ್ಟೆಲ್‌ನ ಮುಖ್ಯಸ್ಥರಾಗಿ, ವಾದಯೋಗ್ಯವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಮಾದಕವಸ್ತು ಕಳ್ಳಸಾಗಣೆದಾರರಾಗಿದ್ದರು. 1980 ರ ದಶಕ ಮತ್ತು 90 ರ ದಶಕದ ಆರಂಭದಲ್ಲಿ. ಅವನ ಜನನದ ನಂತರ, ಎಸ್ಕೋಬಾರ್‌ನ ಕುಟುಂಬ-ಅವನ ತಂದೆ ಕೃಷಿಕ ಮತ್ತು ಅವನ ತಾಯಿ ಶಾಲಾ ಶಿಕ್ಷಕಿ-ಎಂವಿಗಾಡೊ, ಕೊಲಂಬಿಯಾ, […]

Advertisement

Wordpress Social Share Plugin powered by Ultimatelysocial