ನಾಳೆ ದೇಗುಲಗಳಲ್ಲಿ ಹನುಮಾನ್ ಚಾಲೀಸಾ ಪಠಣ!

ಕಲಬುರಗಿ : ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ನಾಳೆಗೆ ಅಂತ್ಯವಾಗಿದ್ದು, ನಾಳೆಯಿಂದ ಮಸೀದಿಗಳ ಸಮೀಪದ ದೇಗುಲಗಳಲ್ಲಿ ಹನುಮಾನ್ ಚಾಲೀಸ್ ಮತ್ತು ಭಜನೆಗಳನ್ನು ಲೌಡ್ ಸ್ಪೀಕರ್ ಗಳಲ್ಲಿ ಮೊಳಗಿಸುವುದಾಗಿ ಶ್ರೀರಾಮಸೇನೆ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಆಟೊ ನಿಲ್ದಾಣದ ಬಳಿಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು. ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಭಜನೆ, ಹನುಮಾನ ಚಾಲಿಸಾ ಪಠಿಸಲಾಗುವುದು ಎಂದು ಹೇಳಿದ್ದಾರೆ.

ನಾಳೆಯಿಂದ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸದ ಜೊತೆಗೆ ವೇದಮಂತ್ರಗಳನ್ನು ಮೊಳಗಿಸಲು ಶ್ರೀರಾಮಸೇನೆ ಮತ್ತು ಇತರ ಹಿಂದುತ್ವಪರ ಸಂಘಟನೆಗಳು ಮುಂದಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಬ್ರಾಹಿಂ ದಾವಣಗೆರೆಯಿಂದ ಸ್ಪರ್ಧಿಸಲಿ: ಮಾಜಿ ಶಾಸಕ ಶಿವಶಂಕರ್!

Sun May 8 , 2022
ಹರಿಹರ: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಅಭೂತಪೂರ್ವ ಜಯಗಳಿಸುತ್ತಾರೆ. ಕಾಂಗ್ರೆಸ್ ದೂಳಿಪಟವಾಗುವುದಲ್ಲದೇ ಜಿಲ್ಲೆಯ 5 ಸ್ಥಾನಗಳೂ ಜೆಡಿಎಸ್‌ಗೆ ದೊರಕುತ್ತವೆ. ಹರಿಹರ ಕ್ಷೇತ್ರದಲ್ಲಿ ನನ್ನ ಗೆಲುವೂ ಸುಲಭವಾಗುತ್ತದೆ. ಆದ್ದರಿಂದ ಸಿ.ಎಂ. ಇಬ್ರಾಹಿಂ ಮತ್ತು ಎಚ್.ಡಿ. ಕುಮಾರಸ್ವಾಮಿ ಇದನ್ನು ಘೋಷಣೆ ಮಾಡಬೇಕು’ ಎಂದು ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮನವಿ ಮಾಡಿದರು. ಪಕ್ಷದ ಜನತಾ ಜಲಧಾರೆ ರಥಯಾತ್ರೆಯ ಅಂಗವಾಗಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ […]

Advertisement

Wordpress Social Share Plugin powered by Ultimatelysocial