ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ.

 

ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ. ಆಕೆಗೆ ಕಾವ್ಯ ರಚನೆ ಜನ್ಮತಃ ಸಿದ್ಧಿಸಿದ ಕಲೆ. ಹಾಗಾಗೆ ಅತೀ ಅಲ್ಪಾಯುಷಿಯಾದ ಬರೀ 21 ವರ್ಷಕ್ಕೆ ಇಹಲೋಕ ತ್ಯಜಿಸಿದ ತೋರು ದತ್ತ ಅವಿಸ್ಮರಣೀಯವೆನಿಸುವ ಕೃತಿಗಳನ್ನು ರಚಿಸಿ ಇಂಗ್ಲೀಷ್ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಒತ್ತಿದ್ದಾಳೆ.ರಾಮ ಬಾಗನ್ ದತ್ತ ಕುಟುಂಬದಲ್ಲಿ 1856ರ ಮಾರ್ಚ್ 4ರಂದು ಜನಿಸಿದ ತೋರು ದತ್ತರ ತಂದೆ ಗೋವಿನ್ ಚಂದರ ದತ್ತ. ತೋರುವಿನ ಸಹೋದರ ಅಬ್ಜು, ಅಕ್ಕ ಅರು ಕೂಡಾ ಅತಿ ಚಿಕ್ಕ ವಯಸ್ಸಿನಲ್ಲೇ ಮರಣಿಸಿದರು. ಆ ಮರಣ ತೋರುವಿನ ಮೇಲೆ ಬೀರಿದ ಪರಿಣಾಮ, ನೆನಪುಗಳು ಹೊಂಚು ಹಾಕುವುದನ್ನು ಅವರ ಕೆಸುರಿನಾ ಟ್ರೀ ಕವನ ಬಿಂಬಿಸುತ್ತದೆ.
ಇಂಗ್ಲೀಷ್ ಸಾಹಿತ್ಯದಲ್ಲಿ ಅಮೋಘ ಕವನವೆಂದೆ ಬಣ್ಣಿಸಲ್ಪಟ್ಟ ಕವನ ತೋರು ದತ್ತ ಅವರ “ಕ್ಯಾಸುರಿನಾ ಟ್ರೀ”. ಅಭೂತಪೂರ್ವವಾದ ಕ್ಯಾಸುರಿನಾ ಮರ ವರ್ಣನೆ. ಕವನ ಗಿಡದ ವರ್ಣನೆಯೊಂದಿಗೆ ಪ್ರಾರಂಭವಾಗುತ್ತದೆ. ಹೊರ ನೋಟಕ್ಕೆ ಕವನ ಮರವನ್ನು ಬಣ್ಣಿಸುತ್ತಿದ್ದರೂ ಗೂಡಾರ್ಥದಲ್ಲಿ ತೋರು ತನ್ನ ಭೂತದ ಬದುಕನ್ನು ವರ್ತಮಾನದ ಬದುಕಿನೊಂದಿಗೆ ಬೆಸೆಯಲು ಗಿಡ ಒಂದು ಸಾಧನವಷ್ಟೆ. ಗಿಡದ ಸುತ್ತ ಬಳ್ಳಿಯೊಂದು ಹೆಬ್ಬಾವಿನಂತೆ ಸುತ್ತುವರೆದಿದೆ. ಬಳ್ಳಿ ಗಿಡದ ಬಡ್ಡೆಯ ಸುತ್ತಲೂ ಹಬ್ಬಿಸಿದ ಗುರುತು ಅಳಿಸಲಾಗದಂತಿದೆ. ಆದಾಗ್ಯೂ ಬಳ್ಳಿಯ ಆಕ್ರಮಣಕ್ಕೂ ಕಮರದೆ ಬೆಳೆದ ಗಿಡ ಬಳ್ಳಿಯ ಕೆಂಪು ಕ್ರಿಮ್ ಸನ್ ಹೂಗಳನ್ನು ತಲೆ ತುಂಬಾ ಸ್ಕಾರ್ಪಿನಂತೆ ಧರಿಸಿದೆ. ಇನ್ನು ರಾತ್ರೀ ಇಡೀ ಬೆಳಗು ಹರಿಯುವವರೆಗೂ ಉದ್ಯಾನವನದ ತುಂಬಾ ಕೋಗಿಲೆಯ ಗಾನ ಪ್ರತಿಧ್ವನಿಸುತ್ತಿದೆ. ಅದೇ ಚಳಿಗಾಲದಲ್ಲಿ ಬೂದು ಬಣ್ಣದ ಬಬೂನ್ಗಳು ಮರಿಗಳೊಂದಿಗೆ ಚೆನ್ನಾಟವಾಡುತ್ತಿವೆ. ಹೊರ ನೋಟಕ್ಕೆ ಮರದ ಸುಂದರ ಚಿತ್ರಣದಂತೆ ಕವನ ಕಂಡುಬರುತ್ತದೆ. ಆದರೆ ತೋರು ದತ್ತ ಹೇಳುತ್ತಾಳೆ -ಬರಿಯ ಕ್ಯಾಸುರಿನಾ ಮರದ ಘನಚಹರೆಯಲ್ಲ ಆಕೆಗೆ ಇಷ್ಟವಾದದ್ದು. ಆದರೆ ತನ್ನ ಒಡಹುಟ್ಟಿದವರೊಂದಿಗಿನ ಸಾಂಗತ್ಯದ ಬಾಲ್ಯದ ಮಧುರ ನೆನಪುಗಳು ಆ ಮರದೊಂದಿಗೆ ಬೆಸೆದುಕೊಂಡಿವೆ. ಆಕೆ ಪ್ರಾನ್ಸನಲ್ಲಿರಲಿ ಇಲ್ಲವೇ ಇಟಲಿಯಲ್ಲಿರಲಿ ಆಕೆ ಆ ಮರದೊಂದಿಗಿನ ಮಧುರ ನೆನಪುಗಳು ಆಕೆಗೆ ನೆಮ್ಮದಿ ಹಾಗೂ ಸಮಾಧಾನವನ್ನು ನೀಡುತ್ತವೆ. ತೋರು ಒಡಹುಟ್ಟಿದವರ ಸಾವಿಂದ ವಿಚಲಿತಗೊಂಡ ಮನಸ್ಸನ್ನು ಹೃದಯದ ನೋವನ್ನು ಹೀಗೆ ನಿಸರ್ಗದ ಒಂದು ಸಂಕೇತದೊಂದಿಗೆ ವ್ಯಕ್ತಗೊಳಿಸುತ್ತಾಳೆ. ಸಾವಿನ ದಾರಿಯಲ್ಲಿ ಅವರ ಹಿಂಬಾಲಿಸುತ್ತಿದ್ದಾಳೆ. ಅವರಿಗಾಗಿ ಆಕೆ ಮರವನ್ನು ಅಮರಗೊಳಿಸುತ್ತಾಳೆ ತನ್ನ ಕವನದ ಮೂಲಕ.
ತೋರು ದತ್ತ ಆಂಗ್ಲೋ ಇಂಡಿಯನ್ ಕವಿಗಳ ತಾಯಿ ಎಂದೇ ಪ್ರಸಿದ್ದಳು. ಇಂಗ್ಲೆಂಡಿನಲ್ಲಿ ಉನ್ನತ ಪ್ರೆಂಚ್ ಶಿಕ್ಷಣವನ್ನು ಮುಂದುವರೆಸಿದ ತೋರು ಬಂಗಾಲಿ, ಇಂಗ್ಲೀಷ, ಪ್ರೇಂಚ, ಹಾಗೂ ಸಂಸ್ಕೃತದಲ್ಲೂ ಪಾಂಡಿತ್ಯವನ್ನು ಗಳಿಸಿದ್ದಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ರಘುನಾಥ್ ಡಾ. ಗಿರಿಜಾ ಶಾಸ್ತ್ರಿ ದಂಪತಿಗಳು.

Mon Mar 6 , 2023
  ಡಾ. ಕೆ. ರಘುನಾಥ್ ಮತ್ತು ಡಾ. ಗಿರಿಜಾ ಶಾಸ್ತ್ರಿ ದಂಪತಿಗಳು ಮುಂಬೈ ನೆಲದಲ್ಲಿ ಅಪಾರವಾದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದಾರೆ.ಮಾರ್ಚ್ 3 ರಘುನಾಥ್ ಕೃಷ್ಣಮಾಚಾರ್ ಅವರ ಜನ್ಮದಿನ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಮುಂಬೈ ವಿ.ವಿ.ಯಿಂದ ಎಂಫಿಲ್ ಮತ್ತು ಪಿಎಚ್.ಡಿ ಪದವಿ ಪಡೆದರು. ಅರವಿಂದ ನಾಡಕರ್ಣಿ ಅವರ ಕಾವ್ಯ – ಒಂದು ಅಧ್ಯಯನ’ ಅವರ ಎಂಫಿಲ್ ಪ್ರಬಂಧ. ‘ಕನ್ನಡ ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ’ […]

Advertisement

Wordpress Social Share Plugin powered by Ultimatelysocial