ಗೋವಾದಿಂದ ಕರ್ನಾಟಕಕ್ಕೆ ಬರುವ ರೈಲ್ವೆ ಪ್ರಯಾಣಿಕರಿಗೆ ಬಹುಮುಖ್ಯ ಮಾಹಿತಿ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಗೋವಾ ರಾಜ್ಯದಲ್ಲಿ ಕೋವಿಡ್- 19 ರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋವಾದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸಂಬಂಧಪಟ್ಟಂತೆ ಸರ್ಕಾರದ ಆದೇಶದ ಅನುಸಾರ ಕೆಳಕಂಡ ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಲಾಗುತ್ತಿದೆ ಎಂದು ಅನೀಶ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ, ಹುಬ್ಬಳ್ಳಿ ಇವರು ಮಾಹಿತಿ ನೀಡಿದ್ದಾರೆ.

ಗೋವಾದಿಂದ ಕರ್ನಾಟಕಕ್ಕೆ ಬರುವ ರೈಲ್ವೆ ಪ್ರಯಾಣಿಕರಿಗೆ ಬಹುಮುಖ್ಯ ಮಾಹಿತಿ

1) ದಿನಾಂಕ 05.01.22ರ ಕರ್ನಾಟಕ ಸರ್ಕಾರದ ಸುತ್ತೋಲೆಯ ಆದೇಶದಂತೆ ರೈಲಿನ ನಿಗದಿತ ನಿರ್ಗಮನ ಸಮಯದ ರೈಲು ಹತ್ತುವ 72 ಗಂಟೆಗಳ ಒಳಗಾಗಿ ಪಡೆದುಕೊಂಡ ಋಣಾತ್ಮಕ ಆರ್ ಟಿ – ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿದ ಪ್ರಯಾಣಿಕರಿಗೆ ಮಾತ್ರ (ಲಸಿಕೆ ಹಾಕಿಸಿಕೊಂಡಿದ್ದಾಗ್ಯೂ) ಹೊರತಾಗಿ ಅನುಮತಿ ನೀಡಲಾಗುವುದು.

2) ಗೋವಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ನಿಯತಕಾಲಿಕವಾಗಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿ ಹದಿನೈದು ದಿನಗಳಿಗೊಮ್ಮೆ ಆರ್ ಟಿ ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಂಡು ಅದರ ಋಣಾತ್ಮಕ ವರದಿಯನ್ನು ಹೊಂದಿದ್ದಲ್ಲಿ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುವುದು.

3) ನೈಋತ್ಯ ರೈಲ್ವೆಯು ರಾಜ್ಯ ಸರ್ಕಾರದೊಂದಿಗೆ ಕೋವಿಡ್- 19 ರ ತಡೆಗಟ್ಟುವಲ್ಲಿ ಸಂಪೂರ್ಣವಾಗಿ ಸಹಕರಿಸುವುದು. ವಲಯದ ಮೂರು ವಿಭಾಗಗಳಿಗೂ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಿಚ್ಚನ ಕೊಂಡಾಡಿದ ಕಲಾವಿದರು

Fri Jan 7 , 2022
  ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial