ಶಾಕುಂತಲಂ ಸಿನಿಮಾ ರಿಲೀಸ್​ಗೆ ಫೈನಲ್​​ ಡೇಟ್​ ಫಿಕ್ಸ್​;

ಪುರಾಣದ ಹಿನ್ನೆಲೆ ಹೊಂದಿರುವಶಾಕುಂತಲಂ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಖ್ಯಾತ ನಿರ್ದೇಶಕ ಗುಣಶೇಖರ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ.

ಶಾಕುಂತಲಂ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗ್ತಿದೆ. ಇದೀಗ ಫೈನಲ್ ಡೇಟ್ ಅನ್ನು ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಘೋಷಿಸಿದ್ದಾರೆ. 3ಡಿ ಮತ್ತು ಗ್ರಾಫಿಕ್ಸ್ ಕೆಲಸಗಳಿಂದಾಗಿ ಮುಂದೂಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಈ ಹಿಂದೆ ಶಾಕುಂತಲಂ ಸಿನಿಮಾ ಫೆಬ್ರವರಿ 17ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಘೋಷಿಸಿದ್ರು. ಚಿತ್ರ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ರಿಲೀಸ್ ಡೇಟ್ ಮುಂದೂಡಿದ್ರು.

ಇದೀಗ ಶಾಕುಂತಲಂ ಸಿನಿಮಾ ಫೈನಲ್ ಆಗಿ ಏಪ್ರಿಲ್ 14ಕ್ಕೆ ಬರಲಿದೆ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ.

ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಶಾಕುಂತಲಂ ಸಿನಿಮಾ ಏಪ್ರಿಲ್ 14ಕ್ಕೆ ವಿಶ್ವಾದ್ಯಂತ ರಿಲೀಸ್ ಆಗ್ತಿದೆ. ಶಾಕುಂತಲಂ ಸಿನಿಮಾ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ಮಹಾಕಾವ್ಯ ಆಧರಿಸಿದ್ದು, ಗುಣ ಶೇಖರ್ ನಿರ್ದೇಶನದ ಪೌರಾಣಿಕ ಪ್ರೇಮ ಕಾವ್ಯವಾಗಿದೆ.

ಈ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು, ಚಿತ್ರದ ಟ್ರೇಲರ್, ಮಲ್ಲಿಕಾ ಮಲ್ಲಿಕಾ.. ಹಾಡು ಜನರಿಗೆ ಸಖತ್ ಇಷ್ಟವಾಗಿದೆ. ಇದೀಗ ಶಾಕುಂತಲಂನಲ್ಲಿ ಸಮಂತಾ ತೊಟ್ಟ ಬಟ್ಟೆ ಮತ್ತು ಜ್ಯುವೆಲರಿ ಬಗ್ಗೆ ಸಖತ್ ಸುದ್ದಿಯಾಗಿದೆ.

ಸಮಂತಾ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದಲ್ಲಿ ಸಮಂತಾ ಬ್ಯೂಟಿಫುಲ್ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಏಪ್ರಿಲ್ 14ಕ್ಕೆ ತೆರೆ ಮೇಲೆ ಶಾಕುಂತಲಂ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Online Dating International

Sat Feb 11 , 2023
Online dating overseas is usually an increasingly popular method to meet persons from all over the world. Worldwide internet dating allows you to expand your périmètre, gain new experiences and find take pleasure in without ever going outside. The best foreign dating sites are those that have a whole lot […]

Advertisement

Wordpress Social Share Plugin powered by Ultimatelysocial