TROLL:ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌;

ಪುಷ್ಪ ಸಿನಿಮಾದ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಅವರು ಟಾಲಿವುಡ್‌ ಸ್ಟಾರ್‌ ಆಗಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಆದರೆ ಅವರು ಯಾವ ಟ್ರೋಲ್‌ಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೇ ಅಂತಹ ಟ್ರೋಲ್‌ಗಳಿಗೂ ಅವರು ಉತ್ತರ ಕೊಡುವುದಿಲ್ಲ ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ ಆಗಿದೆ.

ಭಾನುವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅವರು ಬಿಳಿ ಟಿ-ಶರ್ಟ್‌ ಹಾಗೂ ಶಾರ್ಟ್ಸ್‌ ಹಾಕಿರುವ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ವಿಡಿಯೊ ಸಿಕ್ಕಾಪಟ್ಟೆ ಶೇರ್‌ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Smartphone:ರೆಡ್​​ಮಿ ಸ್ಮಾರ್ಟ್​ಫೋನ್​ ಪ್ರಿಯರಿಗೆ ಸಿಹಿಸುದ್ದಿ

Tue Jan 25 , 2022
ಶಿಯೋಮಿ (Xiaomi)ಯ ಉಪ-ಬ್ರ್ಯಾಂಡ್ ರೆಡ್ ಮಿ (Redmi)ಯ ಮತ್ತೊಂದು ಸೀರೀಸ್ ರೆಡ್ ಮಿ ನೋಟ್ 11S (Redmi Note 11S) ಅಧಿಕೃತವಾಗಿ ಮಾರುಕಟ್ಟೆಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ರೆಡ್ ಮಿ ನೋಟ್ 11S ಮುಂದಿನ ತಿಂಗಳ ಫೆಬ್ರವರಿ (February) 9ರಂದು ಭಾರತದ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ. ಈ ಬಗ್ಗೆ ರೆಡ್ ಮಿ ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ರೆಡ್ ಮಿ ಫೋನ್ ಫೆಬ್ರವರಿ 9 ರಂದು ಭಾರತದ […]

Advertisement

Wordpress Social Share Plugin powered by Ultimatelysocial