Smartphone:ರೆಡ್​​ಮಿ ಸ್ಮಾರ್ಟ್​ಫೋನ್​ ಪ್ರಿಯರಿಗೆ ಸಿಹಿಸುದ್ದಿ

ಶಿಯೋಮಿ (Xiaomi)ಯ ಉಪ-ಬ್ರ್ಯಾಂಡ್ ರೆಡ್ ಮಿ (Redmi)ಯ ಮತ್ತೊಂದು ಸೀರೀಸ್ ರೆಡ್ ಮಿ ನೋಟ್ 11S (Redmi Note 11S) ಅಧಿಕೃತವಾಗಿ ಮಾರುಕಟ್ಟೆಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ರೆಡ್ ಮಿ ನೋಟ್ 11S ಮುಂದಿನ ತಿಂಗಳ ಫೆಬ್ರವರಿ (February) 9ರಂದು ಭಾರತದ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ.
ಈ ಬಗ್ಗೆ ರೆಡ್ ಮಿ ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ರೆಡ್ ಮಿ ಫೋನ್ ಫೆಬ್ರವರಿ 9 ರಂದು ಭಾರತದ ಮಾರುಕಟ್ಟೆಯಲ್ಲಿ (Market) ಲಭಿಸಲಿದ್ದು, ಗ್ರಾಹಕರು ಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ.
ನೋಟಿಪೈ ಮಿ’ ವೆಬ್‌ಸೈಟ್‌ನಲ್ಲಿ ವಿವರ ಲಭ್ಯ;
ರೆಡ್ ಮಿ ಕಂಪನಿಯು 108-ಮೆಗಾಪಿಕ್ಸೆಲ್ ಒಳಗೊಂಡಿರುವ ಕ್ವಾಡ್ ರಿಯರ್ ಕ್ಯಾಮೆರಾ ಸಿಸ್ಟಮ್ ಅನ್ನು ಹೈಲೈಟ್ ಮಾಡಲು ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಸ್ಥಾಪಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ, ಶಿಯೋಮಿ ರೆಡ್ ಮಿ ನೋಟ್ 10 ಪ್ರೋ ಮ್ಯಾಕ್ಸ್ (Xiaomi Redmi Note 10 Pro Max) ಅನ್ನು ಪರಿಚಯಿಸಿತು, ಇದು 108-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿತ್ತು. ಆಸಕ್ತ ರೆಡ್ ಮಿ ಅಭಿಮಾನಿಗಳು ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಇತ್ತೀಚಿನ ಅಧಿಕೃತ ನವೀಕರಣಗಳನ್ನು ತಿಳಿಯಲು ‘ನೋಟಿಪೈ ಮಿ’ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.ರೆಡ್ ಮಿ ನೋಟ್ 11S ಯಾವೆಲ್ಲಾ ವಿಶೇಷತೆ ಹೊಂದಿದೆ ಎಂಬುವುದರ ಬಗ್ಗೆ ಈವರೆಗೆ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಹಾಗಾಗಿ Redmi Note 10Sನ ಆಧಾರವಾಗಿಟ್ಟುಕೊಂಡು ಕೆಲವು ಮಾಹಿತಿಗಳು ಲಭಿಸಿವೆ. Redmi Note 10Sನ ಹಲವು ನವೀಕರಣಗಳೊಂದಿಗೆ ಈದೀಗ ಹೊಸ ಫೋನ್ ರೆಡ್ ಮಿ ನೋಟ್ 11S ಬರುತ್ತದೆ ಎಂದು ಹೇಳಲಾಗುತ್ತಿದೆ.

ಅಂದರೆ ಹೊಸ Redmi Note 11S ಆಕ್ಟಾ-ಕೋರ್ MediaTek Helio G96 ಚಿಪ್‌ಸೆಟ್ ಮತ್ತು ಪೂರ್ಣ-HD+ ರೆಸಲ್ಯೂಶನ್‌ನೊಂದಿಗೆ ಕನಿಷ್ಠ 6.43-ಇಂಚಿನ ಪರದೆಯನ್ನು ಹೊಂದಿರಬಹುದು. ಇದು ಕನಿಷ್ಟ 6GB RAM, 128GB ಆಂತರಿಕ ಸಂಗ್ರಹಣೆ ಮತ್ತು 5,000mAh ಬ್ಯಾಟರಿಯನ್ನು ಸಹ ಹೊಂದಿರುವ ಬಗ್ಗೆ ನಿರೀಕ್ಷೆಗಳಿವೆ. ಜೊತೆಗೆ ವೇಗವಾದ ಚಾರ್ಜಿಂಗ್ ತಂತ್ರಜ್ಞಾನವನ್ನೂ Redmi Note 11S ನಲ್ಲಿ ಗ್ರಾಹಕರು ನಿರೀಕ್ಷಿಸಬಹುದು.

ಉತ್ತಮ ತಂತ್ರಜ್ಞಾನ;

Redmi Note 11S ಕುರಿತು Redmi ಬಿಸಿನೆಸ್ ಲೀಡ್ ಸ್ನೇಹಾ ತೈನ್ವಾಲಾ ಮಾತನಾಡಿದ್ದು, IDC ಇಂಡಿಯಾ ಮಾಸಿಕ ಸ್ಮಾರ್ಟ್‌ಫೋನ್ ಟ್ರ್ಯಾಕರ್ ನವೆಂಬರ್ 2021 ರ ವರದಿಯನ್ನು ಉಲ್ಲೇಖಿಸಿ, Xiaomi ಪ್ರಾರಂಭವಾದಾಗಿನಿಂದ 65 ಮಿಲಿಯನ್ ಯೂನಿಟ್ Redmi Note ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸ್ನೇಹಾ ತೈನ್ವಾಲಾ ಹೇಳಿದ್ದಾರೆ. ಅಸ್ತಿತ್ವದಲ್ಲಿರುವ Redmi Note 11T 5G “ತಂತ್ರಜ್ಞಾನ’ದಲ್ಲಿನ ಯಥಾಸ್ಥಿತಿಯನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ. Redmi Note 11S “ಉತ್ತಮ ತಂತ್ರಜ್ಞಾನ”ವನ್ನು ನೀಡುತ್ತದೆ, ರೆಡ್ ಮಿ ಗ್ರಾಹಕರಿಗೆ ಇದೊಂದು ಉತ್ತಮ ಫೋನ್ ಆಗಲಿದೆ ಎಂದಿದ್ದಾರೆ.

ಮುಂದಿನ-ಪೀಳಿಗೆಗೆ ಕೊಡುಗೆ;

ತೈನ್‌ವಾಲಾ ಅವರು ಹೇಳುವ ಪ್ರಕಾರ, “ರೆಡ್‌ಮಿ ನೋಟ್ ಸರಣಿಗೆ ಹೊಸ ಸೇರ್ಪಡೆಯೊಂದಿಗೆ, ನಾವು ಅತ್ಯುತ್ತಮ ದರ್ಜೆಯ ಕ್ಯಾಮೆರಾ ಸಾಮರ್ಥ್ಯಗಳು ಮತ್ತು ಸ್ಮೂಥ್ ಡಿಸ್‌ಪ್ಲೇ ಸಾಮರ್ಥ್ಯವನ್ನು ನಿರ್ಮಿಸಲು ಬಯಸುತ್ತೇವೆ. ಮುಂಬರುವ Redmi 11 ಸರಣಿಯು ನವೀಕರಿಸಿದ ವೈಶಿಷ್ಟ್ಯತೆಗಳೊಂದಿಗೆ ಮುಂದಿನ-ಪೀಳಿಗೆಗೆ ಕೊಡುಗೆಯಾಗಿ ನೀಡಿದ್ದಾರೆ ಇದಕ್ಕೆ ನಾನು ತಂತ್ರಜ್ಞಾನರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
Redmi Note 11S Redmi Note 10S ನಲ್ಲಿ 60Hz ಡಿಸ್‌ಪ್ಲೇ ಬದಲಿಗೆ 90Hz ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. Redmi 11 ಸರಣಿಯ ರೆಡ್ ಮಿ ನೋಟ್ 11S ಫೆಬ್ರವರಿ 9ಕ್ಕೆ ಬಿಡುಗಡೆಯಾಗಲಿದ್ದು ಮೊಬೈಲ್ ಮಾರುಕಟ್ಟೆಯಲ್ಲಿ ಹೇಗೆ ಕಮಾಲ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

AMAZON:ಕೇವಲ 3,500 ರೂ.ಗೆ ಖರೀದಿಸಿ ಈ 5G ಸ್ಮಾರ್ಟ್​ಫೋನ್​!

Tue Jan 25 , 2022
ಜನಪ್ರಿಯ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್​ನಲ್ಲಿ (Amazon) ವಿಶೇಷ iQOO ರಿಪಬ್ಲಿಕ್ ಡೇ ಸೇಲ್ (Repulic day Sale) ನಡೆಯುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ (Smartphone) ಮೇಲೆ ಭಾರಿ ರಿಯಾಯಿತಿಗಳನ್ನು (Offer) ನೀಡಿದೆ. ಅಂದಹಾಗೆಯೇ ಈ ಸೇಲ್​ ಮೂಲಕ ಸ್ಮಾರ್ಟ್‌ಫೋನ್ ಬ್ರಾಂಡ್ iQOO ನ ಉತ್ತಮ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತಿದೆ. ಸ್ಮಾರ್ಟ್​ಫೋನ್​ ಖರೀದಿಸಲು ಕಾತುರದಿಂದ ಕಾಯುತ್ತಿದ್ದ ಗ್ರಾಹಕರಿಗೆ ರಿಪಬ್ಲಿಕ್​ ಸೇಲ್​ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. 23 ಸಾವಿರದ […]

Advertisement

Wordpress Social Share Plugin powered by Ultimatelysocial