ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ

ವದೆಹಲಿ, ಮಾರ್ಚ್ 18: ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಮಹಾರಾಷ್ಟ್ರ ಮೂಲದ ಕೆಲವು ಟಿವಿ ವಾಹಿನಿಗಳ ಸುಮಾರು 32 ಕೋಟಿ ಮೌಲ್ಯದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವಿ ಚಾನೆಲ್‌ಗಳಂತಹ ಕೆಲವು ವಾಹಿನಿಗಳಿಗೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮುಂಬೈ, ಇಂದೋರ್, ದೆಹಲಿ ಮತ್ತು ಗುರುಗಾಂವ್‌ಗಳಲ್ಲಿನ ವಾಣಿಜ್ಯ ಹಾಗೂ ನಿವಾಸಿ ಘಟಕಗಳು ಮತ್ತು ಭೂಮಿ , ಕೆಲವು ಬ್ಯಾಂಕ್ ಠೇವಣಿಗಳು ಸೇರಿವೆ ಎಂದು ಇ.ಡಿ ಹೇಳಿಕೆ ತಿಳಿಸಿದೆ.

ಚಾನೆಲ್ಗಳಲ್ಲಿ ಎರಡು ವಾಹಿನಿಗಳ ಒಟ್ಟಾರೆ ಟಿಆರ್ಪಿಯು ಕೇವಲ ಐದು ಮನೆಗಳಿಂದ ಮುಂಬೈನಒಟ್ಟುಎ ಶೇ 25ರಷ್ಟು ವೀವರ್ಶಿಪ್ ತೋರಿಸುತ್ತಿತ್ತುಮೂರನೇ ವಾಹಿನಿಯಲ್ಲಿ ಐದು ನಿಗದಿತ ಮನೆಗಳಿಂದ ನಿರ್ದಿಷ್ಟ ಅವಧಿಯಲ್ಲಿ ಶೇ 12ರಷ್ಟು ವೀವರ್ಶಿಪ್ ಮುಂಬೈನಲ್ಲಿ ತೋರಿಸಲಾಗುತ್ತಿತ್ತುಎಂದು ಸಂಸ್ಥೆ ತಿಳಿಸಿದೆ.  ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ಅನ್ನು ತಿರುಚಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡ ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತುಟಿಆರ್ಪಿ ಹಗರಣ: ಅರ್ನಬ್ ಗೋಸ್ವಾಮಿ ಮಧ್ಯಂತರ ರಕ್ಷಣೆ ವಿಸ್ತರಣೆಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವೀಯಂತಹ ಚಾನೆಲ್ಗಳು ತಪ್ಪು ಮಾರ್ಗದ ಮೂಲಕ ಟಿಆರ್ಪಿಯನ್ನು ತಿರುಚಲು ವಂಚನೆ, ನಂಬಿಕೆ ದ್ರೋಹದ ಅಪರಾಧಗಳನ್ನು ಎಸಗಿವೆ ಮತ್ತು ಮೋಸ ಮಾಡುವ ಅಪರಾಧ ಸಂಚಿನಲ್ಲಿ ಭಾಗಿಯಾಗಿವೆ. ಟಿಆರ್ಪಿ ರೇಟಿಂಗ್ಗಳನ್ನು ಮೋಸದಿಂದ ಹೆಚ್ಚಿಸಿಕೊಳ್ಳುವ ಮೂಲಕ ಚಾನೆಲ್ಗಳು ಹೆಚ್ಚಿನ ಜಾಹೀರಾತು ಆದಾಯವನ್ನು ಪಡೆದುಕೊಳ್ಳುತ್ತಿದ್ದವುಎಂದು .ಡಿ ವಿವರಿಸಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಧೋನಿ ಒಬ್ಬ ಬೌದ್ಧ ಬಿಕ್ಷು ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಅದು ಯಾವ ವಿಚಾರಕ್ಕೆ?

Thu Mar 18 , 2021
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಯಾವಗಲ್ಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಗುಡ್‌ ಬೈ ಹೇಳಿದ ನಂತರ ತಮ್ಮ ಫಾರಂ ಹೌಸ್‌ ನಲ್ಲಿ ರೈತರಂತೆ ಕೆಲಸ ಮಾಡುತ್ತಿದ್ದ ವಿಡೀಯೊ ಸಕತ್‌ ವೈರಲ್‌ ಆಗಿತ್ತು, ಇದೀಗ ಧೋನಿ ಒಬ್ಬ ಬೌದ್ಧ ಭಿಕ್ಷನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಅದು ಯಾವ ವಿಚಾರಕ್ಕೆ, ಏನು ವಿಷಯ ಅಂತಿರಾ ಹೇಳ್ತೀವಿ ನೋಡಿ.   ಸನ್ಯಾಸತ್ವ ದೀಕ್ಷೆ […]

Advertisement

Wordpress Social Share Plugin powered by Ultimatelysocial