ಮೊಬೈಲ್ ಫುಲ್​ ಸ್ಕ್ರೀನ್​ಗಾಗಿ ಹೊಸ ಆವೃತ್ತಿ ಹೊರತಂದ ಯೂಟ್ಯೂಬ್

ಯೂಟ್ಯೂಬ್ ತನ್ನ ಮೊಬೈಲ್ ಅಪ್ಲಿಕೇಶನ್‌ನ ಫುಲ್​ ಸ್ಕ್ರೀನ್ ಪ್ಲೇಯರ್‌ಗಾಗಿ ಹೊಸ ಆವೃತ್ತಿಯನ್ನು ಹೊರತಂದಿದ್ದು, ಏನೆಲ್ಲಾ ಬದಲಾವಣೆ ಕಾಣಬಹುದು ಎಂದು ಇಲ್ಲಿದೆ ನೋಡಿ ಮಾಹಿತಿ.

ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಮಾಲೀಕತ್ವದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್ ತನ್ನ ಮೊಬೈಲ್ ಅಪ್ಲಿಕೇಶನ್‌ನ ಪೂರ್ಣ ಸ್ಕ್ರೀನ್ ಪ್ಲೇಯರ್‌ಗಾಗಿ ಹೊಸ ಇಂಟರ್ಫೇಸ್ ಅನ್ನು ಹೊರತಂದಿದೆ.ದಿ ವರ್ಜ್ ವರದಿ ಪ್ರಕಾರ, ಹೊಸ ಇಂಟರ್ಫೇಸ್ ಕೆಲವು ತಾಜಾ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ. ಈ ಆವೃತ್ತಿ ವಿಡಿಯೋವನ್ನು ಲೈಕ್ಸ್ ಮತ್ತು ಡಿಸ್​ ಲೈಕ್ಸ್ ಮಾಡುವುದಕ್ಕೆ ಹಾಗೂ ಕಾಮೆಂಟ್‌ಗಳನ್ನು ವೀಕ್ಷಿಸಲು ಸುಲಭವಾಗಿದೆ.ನೀವು ಫುಲ್​ ಸ್ಕ್ರೀನ್​ನಲ್ಲಿ ವಿಡಿಯೋ ವೀಕ್ಷಿಸುತ್ತಿರುವಾಗ ಮಾತ್ರ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಪೋರ್ಟ್ರೇಟ್ ಮೋಡ್‌ನಲ್ಲಿ ವಿಡಿಯೋ ವೀಕ್ಷಿಸುತ್ತಿರುವಾಗ ಅಪ್ಲಿಕೇಶನ್ ಬಹುತೇಕ ಒಂದೇ ರೀತಿ ಕಾಣುತ್ತದೆ. ನೀವು ಫುಲ್​ ಸ್ಕ್ರೀನ್​ನಲ್ಲಿ ವಿಡಿಯೋ ವೀಕ್ಷಿಸುತ್ತಿರುವಾಗ ವಿಡಿಯೋ ಶೇರ್​ ಮಾಡುವ ಬಟನ್ ಮತ್ತು ಲೈಕ್ಸ್ ಮತ್ತು ಡಿಸ್​ ಲೈಕ್ಸ್​ ಬಟನ್​​ಗಳು ವಿಡಿಯೋದ ಎಡಭಾಗದಲ್ಲಿ ಕೆಳಗಡೆ ಕಾಣಿಸುತ್ತಿದೆ. ಕಾಮೆಂಟ್​ ಬಟನ್​ ಕ್ಲಿಕ್​ ಮಾಡಿದ್ದಾಗ ವಿಡಿಯೋ ವೀಕ್ಷಿಸುತ್ತಲೇ ಬಲ ಭಾಗದಲ್ಲಿ ಕಾಮೆಂಟ್‌ಗಳನ್ನು ಓದಬಹುದು.ಹಳೆಯ ಆವೃತ್ತಿಯಲ್ಲಿ ನೀವು ಫುಲ್ ಸ್ಕ್ರೀನ್​ನಲ್ಲಿ ವಿಡಿಯೋ ವೀಕ್ಷಿಸುತ್ತಿದ್ದಾಗ ಹೆಚ್ಚಿನ ವಿಡಿಯೋಗಳಿಗಾಗಿ ಬ್ಯಾಕ್​ ಹೋಗಿ, ಅನಂತರ ನೋಡಬಹುದಿತ್ತು. ಆದರೆ, ಹೊಸ ಅವೃತ್ತಿಯಲ್ಲಿ ವೀಕ್ಷಿಸುತ್ತಿರುವ ವಿಡಿಯೋ ಬಲಭಾಗದ ಕೆಳಗಡೆ “ಹೆಚ್ಚು ವಿಡಿಯೋಗಳು” ಎಂಬ ವಿಭಾಗದ ಇದೆ. ನೀವು ಮೋರ್​ ವಿಡಿಯೋ ಮೇಲೆ ಕ್ಲಿಕ್​ ಮಾಡಿದರೆ ಬೇರೆ ಬೇರೆ ವಿಡಿಯೋಗಳನ್ನು ನೋಡಬಹುದು. ಹೊಸ ಅವೃತ್ತಿಯೂ iOS ಮತ್ತು Android ಎರಡಕ್ಕೂ ಬರುತ್ತಿದೆ ಎಂದು ಗೂಗಲ್​ ವಕ್ತಾರರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆತ್ಮಹತ್ಯೆಗೆ ಶರಣಾದ ಕಂದಾಯ ಇಲಾಖೆ ಲೆಕ್ಕಾಧಿಕಾರಿ ̤

Thu Feb 3 , 2022
  ಕಾರವಾರ: ಕಂದಾಯ ಇಲಾಖೆ ಲೆಕ್ಕಾಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ನಡೆದಿದೆ.ಈಶ್ವರ್ ಭಟ್ (38) ಆತ್ಮಹತ್ಯೆಗೆ ಶರಣಾದ ಕಾರವಾರ ಉಪವಿಭಾಗ ಕಚೇರಿ ಕಂದಾಯ ಇಲಾಖೆ ಲೆಕ್ಕಾಧಿಕಾರಿ.ಕಾರವಾರದ ಪ್ರಿಮಿಯರ್ ಹೋಟೆಲ್ ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಾವಿಗೂ ಮುನ್ನ ಈಶ್ವರ್ ಭಟ್ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದ್ದು, ತಾನು ಹೆಂಡತಿ ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡಿಟ್ಟಿಲ್ಲ ತನ್ನನ್ನು ಕ್ಷಮಿಸು. ಮಕ್ಕಳನ್ನು […]

Advertisement

Wordpress Social Share Plugin powered by Ultimatelysocial