‘ವಾಮನ’ ಜೊತೆಯಾದ ರಚನಾ ರೈ…ಸಕಲಕಲಾವಲ್ಲಭೆ ಈ ತುಳುನಾಡ ಬೆಡಗಿ!!

‘ವಾಮನ’ ಸಿನಿಮಾಗೆ ನಾಯಕಿ ಫಿಕ್ಸ್…ಧನ್ವೀರ್ ಗೆ ತುಳುನಾಡ ಬೆಡಗಿ ಜೋಡಿ’ವಾಮನ’ ಅಂಗಳಕ್ಕೆ ಎಂಟ್ರಿ ಕೊಟ್ರು ತುಳುನಾಡ ಕುವರಿ…ಶೋಕ್ದಾರ್ ಧನ್ವೀರ್ ಗೆ ರಚನಾ ರೈ ಜೋಡಿ

ಶೋಕ್ದಾರ್ ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ವೊಂದು ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರ್ತಾರೆ ಅನ್ನೋ ಅಭಿಮಾನಿಗಳ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ.

ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಮೊದಲ ಕನ್ನಡ ಸಿನಿಮಾವಾಗಿದೆ.ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟುಬಿಟ್ಟು ಕೊಡದ ರಚನಾ, ಬಬ್ಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಫ್ಲೈಯರ್ ಆಗಿರುವ ಈ ತುಳುನಾಡ ಚೆಲುವೆ,ಮಾಡೆಲ್,ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ.ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ.ಸದ್ಯ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ನಾಯಕಿಯಾಗಿ ನಟಿಸ್ತಿರುವ ರಚನಾ ರೈ, ಈಗಾಗಲೇ ಸೆಕೆಂಡ್ ಶೆಡ್ಯೂಲ್ಡ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರ್ತಿರುವ ಮಾಸ್​ ಆಕ್ಷನ್ ಎಂಟರ್​ಟೇನರ್ ವಾಮನ ಸಿನಿಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣಾಗಾರನಾಗಿ ಕಾರ್ಯನಿರ್ವಹಿಸಿದ್ದ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೇ 6ಕ್ಕೆ ತೆರೆಗೆ ಬರುತ್ತಿದೆ "ದ್ವಿಮುಖ",ಚಿತ್ರದಲ್ಲಿ ಕಥೆಯೇ ಪ್ರಮುಖ!

Fri Apr 29 , 2022
ಎರಡು ಮುಖಗಳನ್ನು ಹೊಂದಿರುವ ಮನುಷ್ಯರ ಪಾಪಗಳಿಂದ ಹುಟ್ಟಿದ ಕಥೆ “ದ್ವಿಮುಖ”. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಿದು. ಮನುಷ್ಯನ ಮನಸ್ಸಿನಲ್ಲಿರುವ “ದ್ವಿಮುಖ”ವನ್ನು ಅನಾವರಣಗೊಳಿಸಲು ಈ ಚಿತ್ರ ಇದೇ ಮೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಲವಾರು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಮಧು ಶ್ರೀಕಾರ್ ಅವರು “ದ್ವಿಮುಖ” ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಯಕ ನಟನಾಗಿ ಮೊದಲ ಸಿನಿಮಾದಲ್ಲಿ ನಟಿಸಿರುವ ಪ್ರವೀಣ್ ಅಥರ್ವ, ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಥೆ ಮತ್ತು ಚಿತ್ರ […]

Advertisement

Wordpress Social Share Plugin powered by Ultimatelysocial