HEEALTH TIPS:ಮೊಡವೆ ಸಮಸ್ಯೆಗೆ ಕಾರಣವಾಗಬಹುದು ಅತಿಯಾದ ಕಾಫಿ ಸೇವನೆ.!

ಸಾಮಾನ್ಯವಾಗಿ ಬಹುತೇಕರ ದಿನ ಶುರುವಾಗೋದು ಕಾಫಿ ಅಥವಾ ಚಹಾದ ಜೊತೆಗೆ. ಕೆಲವರಿಗಂತೂ ದಿನಕ್ಕೆ ಕಡಿಮೆಯೆಂದ್ರೂ 4 ಕಪ್‌ ಕಾಫಿ ಕುಡಿದು ಅಭ್ಯಾಸ. ಅಂಥವರಿಗೆ ದಿಢೀರನೆ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು. ಹಾಗಿದ್ರೆ ಕಾಫಿಗೂ ಮೊಡವೆಗೂ ಏನು ಸಂಬಂಧ ಅನ್ನೋದನ್ನು ನೋಡೋಣ.

ಆರೋಗ್ಯಕರ ಹೊಳೆಯುವ ಚರ್ಮ ತಮ್ಮದಾಗಲಿ ಅಂತಾ ಎಲ್ಲರೂ ಆಸೆಪಡ್ತಾರೆ. ಆದ್ರೆ ಹೆಚ್ಚುತ್ತಿರುವ ಮಾಲಿನ್ಯ, ಪರಿಸರದಲ್ಲಿನ ಕೊಳಕು, ರಾಸಾಯನಿಕಗಳುಳ್ಳ ಸೌಂದರ್ಯ ವರ್ಧಕಗಳ ಅತಿಯಾದ ಬಳಕೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ನಿಮ್ಮ ಚರ್ಮವನ್ನು ಹಾಳುಮಾಡಿಬಿಡುತ್ತವೆ.

ಇದರಿಂದ ಮೊಡವೆಗಳು ಏಳಬಹುದು. ಕೆಲವು ಆಹಾರ ಪದಾರ್ಥಗಳು ಕೂಡ ಮೊಡವೆಗಳಂತಹ ಹಠಾತ್ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಕಾಫಿ, ಹಾಲು ಮತ್ತು ಡೈರಿ ಉತ್ಪನ್ನಗಳು, ಮಸಾಲೆಯುಕ್ತ ಆಹಾರ, ಬ್ರೆಡ್ ಮತ್ತು ಜಂಕ್ ಫುಡ್‌ ಮೊಡವೆಗಳಿಗೆ ಮೂಲ.

ತಜ್ಞರ ಪ್ರಕಾರ ಅತಿಯಾದ ಕಾಫಿ ಸೇವನೆ ಮೊಡವೆಗಳನ್ನು ಪ್ರಚೋದಿಸುತ್ತದೆ. ಮೊಡವೆಗಳು ಮುಖ್ಯವಾಗಿ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತವೆ. ಜೊತೆಗೆ ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಪ್ರಚೋದಿಸಲ್ಪಡುತ್ತದೆ.

ಮೊಡವೆಗಳನ್ನು ಉಂಟುಮಾಡುವ ದೇಹದಲ್ಲಿನ ಶಾಖವನ್ನು ಹೆಚ್ಚಿಸುವ ಎಣ್ಣೆಯುಕ್ತ, ಸಕ್ಕರೆ, ಮಸಾಲೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸಲು ವೈದ್ಯರು ಸಲಹೆ ನೀಡುತ್ತಾರೆ. ಹಾಲು, ಕೆಫೀನ್ ಭರಿತ ಕಾಫಿ, ಸಕ್ಕರೆ ಮತ್ತು ಬೆಣ್ಣೆಯ ಸಮ್ಮಿಲನದಿಂದಾಗಿ ಮೊಡವೆಗಳು ಏಳುತ್ತವೆ. ಇವೆಲ್ಲ ದೇಹದ ಉಷ್ಣವನ್ನು ಹೆಚ್ಚಿಸುತ್ತವೆ. ನಿಮಗೂ ಮೊಡವೆ ಸಮಸ್ಯೆ ಇದ್ದಲ್ಲಿ ಕಾಫಿ ಅಥವಾ ಕೆಫೀನ್‌ ಸೇವನೆಯನ್ನು ಕಡಿಮೆ ಮಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೇತರಿಕೆ ಮತ್ತು ನಂತರದ ಚಿಕಿತ್ಸೆಯ ಸಮಯದಲ್ಲಿ ಕ್ಯಾನ್ಸರ್ ರೋಗಿಗಳಲ್ಲಿ ಪೋಷಣೆ!

Mon Feb 28 , 2022
ಕ್ಯಾನ್ಸರ್ ಆರೈಕೆಗಾಗಿ ಡಿಜಿಟಲ್ ಥೆರಪ್ಯೂಟಿಕ್ಸ್ ಆರೋಗ್ಯ ರಕ್ಷಣೆಯ ಒಂದು ನವೀನ ವರ್ಗವಾಗಿದ್ದು, ಜಾಗತಿಕವಾಗಿ ಕ್ಯಾನ್ಸರ್ ನಿಂದ ಪೀಡಿತರಾಗಿರುವ ಲಕ್ಷಾಂತರ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಕ್ಯಾನ್ಸರ್ ವಾಸಿಮಾಡುವಿಕೆಯು ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು, ರೋಗಿಯು ರೋಗನಿರ್ಣಯಗೊಂಡಾಗ ಪ್ರಾರಂಭವಾಗುತ್ತದೆ ಮತ್ತು ಚೇತರಿಸಿಕೊಳ್ಳುವವರೆಗೆ ಇರುತ್ತದೆ. ಪ್ರತಿ ರೋಗಿಯ ಕ್ಯಾನ್ಸರ್ ಪ್ರಯಾಣವನ್ನು ಮೂರು ವಿಭಿನ್ನ ಹಂತಗಳಾಗಿ ವಿಂಗಡಿಸಬಹುದು ಸಕ್ರಿಯ ಚಿಕಿತ್ಸಾ ಹಂತ, ಚೇತರಿಕೆಯ ಹಂತ (ಕ್ಷೀಣಿಸಿದ ಪೋಷಕಾಂಶಗಳ ಮರುಸ್ಥಾಪನೆ) ಮತ್ತು ನಿರ್ವಹಣೆ ಹಂತ (ಮರುಕಳಿಸುವಿಕೆಯನ್ನು […]

Advertisement

Wordpress Social Share Plugin powered by Ultimatelysocial