ವಿಜಯಪುರದಲ್ಲಿ ಮಾಜಿ ಸ್ಪೀಕರ್ ರಮೇಶ ಕುಮಾರ ಹೇಳಿಕೆ.!

ಭ್ರಷ್ಟರು ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡಬೇಡಿ.ಬಹಳ ನಿರ್ಭಯವಾಗಿ, ನಿರ್ದಾಕ್ಷಿಣ್ಯವಾಗಿ ಹೇಳುವೆ.

ಭ್ರಷ್ಟರನ್ನು ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡಬೇಡಿ, ಎಲ್ಲ ಕಡೆನೂ ಇದ್ದಾರೆ.

ಆದರೆ ನಮ್ಮ ದೌರ್ಭಾಗ್ಯ ಎಲ್ಲ ಪಕ್ಷದಲ್ಲಿ ಅನೇಕ ವೇಳೆ ಅವರದ್ದೇ ಮೇಲುಗೈ ಸಾಧಿಸುತ್ತಾರೆ.

ಮಾರ್ಮಿಕವಾಗಿ ಈ ಉತ್ತರ ಕೊಟ್ಟಿರುವೆ ಎಂದ ರಮೇಶಕುಮಾರ.ಪಿಎಸ್ಐ ಪರಿಕ್ಷೆಯಲ್ಲಿ ಅಕ್ರಮ ವಿಚಾರ

ಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ, ಆದರೆ ಆತುರ ಪಟ್ಟು ವ್ಯಾಖ್ಯಾನ ಮಾಡಬಾರದು.

ಮಾತಿಗೆ ತೂಕ ಇದೆ, ಹೀಗಾಗಿ ಅದರ ಕುರಿತು ಸಂಪೂರ್ಣ ‌ತಿಳಿದು ಮಾತನಾಡಬೇಕು.

ಅದರ ವಿಚಾರಣೆ ಇನ್ನೂ ಆಗಬೇಕು, ಅರ್ದಮರ್ದ ತಿಳಿದುಕೊಂಡು ಯಾರಾದರನ್ನು ಅಪಾದಿಸಬಾರದು.

ಇಂತಹ ಘಟನೆ ನಡೆದಿದ್ದು ಇದೊಂದು ನಾಗರಿಕ ಸಮಾಜಕ್ಕೆ ಅಪಮಾನ.

ಸಂವಿಧಾನದ ಅನ್ವಯ ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಆಗಲೇ ಬೇಕು.ಆಗಲೇ ಇದೊಂದು ದೇಶ ಎಂದು ಆಗುವದು.

ದೇಶ ಮುನ್ನಡಿಸಲು ಸಂವಿಧಾನ ಮಾಡಿದ್ದು, ಸಂವಿಧಾನದ ಪರಿಚ್ಚೇದದ ಅನ್ವಯ ವಿವಿಧ ಕಾನೂನು ಮಾಡಲಾಗಿದೆ.

ಯಾವುದೇ ಕಾನೂನು ಯಾರೇ ಉಲ್ಲಂಘಿಸಿದಾಗ ಅವರಿಗೆ ಶಿಕ್ಷೆ ಆಗಬೇಕು.

ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ಆಗದಿದ್ದರೆ, ಕಾನೂನಿಗೆ ಏನು ಗೌರವ ಸಂವಿಧಾನಕ್ಕೆ ಏನು ಗೌರವ.

ಬಡವರಿಗೆ ಒಂದು ಶ್ರೀಮಂತರಿಗೆ ಒಂದು ಕಾನೂನಾ..? ಬಲಾಡ್ಯರಿಗೊಂದು ದುರ್ಬಲರಿಗೊಂದು ಕಾನೂನಾ..?

ಕಾನುನು ಎಂಬುದು ಸರ್ವ ಶ್ರೇಷ್ಟ, ಹಾಗೂ ಸಂವಿಧಾನ ಎಂಬುದು ಅಂತಿಮವಾಗಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ ಐ ಡೀಲ್ ಹಾಗೂ ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಷಾರ ಆರೋಪ..!

Thu Apr 28 , 2022
ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಬಾಗಲಕೋಟೆ ಆಪ್ ಕಾರ್ಯಕರ್ತರ ಪ್ರತಿಭಟನೆ.ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ. ಸರಕಾರದ ವಿರುದ್ಧ ಧಿಕ್ಕಾರ ,ಘೋಷಣೆ.ರಾಜ್ಯ ಸರ್ಕಾರ ವಜಾಮಾಡಬೇಕೆಂದು ಅಗ್ರಹ. ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಅಗಮನ. ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ.ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ನಾಯಕಿ ದಿವ್ಯಾ ಹಾವರಗಿ ಅವರನ್ನು ಬಂಧಿಸಬೇಕು.. ನಿಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ ,ಸಿಐಡಿ ಕಚೇರಿಗೆ ಮುತ್ತಿಗೆ ಉಗ್ರ […]

Advertisement

Wordpress Social Share Plugin powered by Ultimatelysocial