ಯೂಕ್ರೇನ್​ನ ಮರಿಯುಪೋಲ್​ನಲ್ಲಿ ಒಂದೇ ಕಡೆ 9 ಸಾವಿರಕ್ಕೂ ಹೆಚ್ಚು ಶವ

 

ಸಮೂಹ ಸಮಾಧಿ ಪತ್ತೆಯಾಗಿದೆ ಎಂದು ಮೇಯರ್ ವಡಿಮ್ ಬಾಯ್ಚೆನ್ಕೋ ಹೇಳಿದ್ದಾಗಿ ಟೆಲಿಗ್ರಾಂ ಪೋಸ್ಟ್ ವರದಿ ಮಾಡಿದೆ. ಯೂಕ್ರೇನ್​ನಲ್ಲಿ 1941ರಲ್ಲಿ ನಾಜಿಗಳು ಯೂಕ್ರೇನಿಯನ್ ಯಹೂದಿಗಳನ್ನು ಹತ್ಯೆ ಮಾಡಿದ ವೇಳೆ 34,000 ಜನರನ್ನು ಇದೇ ರೀತಿ ಹಲವು ಸಮಾಧಿಗಳಲ್ಲಿ ಹೂತಿದ್ದರು.

ಯಹೂದಿಗಳು, ರೋಮಾ, ಸ್ಲಾವ್ಸ್ ಜನರನ್ನು ಅಂದು ಹಿಟ್ಲರ್ ಸೇನೆ ಹತ್ಯೆ ಮಾಡಿತ್ತು. ಈಗ ಪುತಿನ್ ಸೇನೆ ಮರಿಯುಪೋಲ್​ನಲ್ಲಿ ಯೂಕ್ರೇನಿಗಳ ಹತ್ಯೆ ಮಾಡುತ್ತಿದೆ. ಇದು 21ನೇ ಶತಮಾನದ ಅತಿದೊಡ್ಡ ಯುದ್ಧಾಪರಾಧ ಎಂದು ಬಾಯ್ಚೆನ್ಕೋ ಆರೋಪಿಸಿದ್ದಾರೆ. ಇಡೀ ಜಗತ್ತು ಇದಕ್ಕೆ ಕಠಿಣ ಪ್ರತಿಕ್ರಿಯೆ ನೀಡಬೇಕು. ನರಹತ್ಯೆ ತಡೆಯುವುದಕ್ಕೆ ಯಾವುದೇ ರೀತಿಯ ನೆರವನ್ನು ನಾವು ಬಯಸುತ್ತೇವೆ. ಈ ಬಗ್ಗೆ ಎಲ್ಲ ರಾಷ್ಟ್ರಗಳೂ ಗಮನಹರಿಸಿ ನೆರವಿನ ಹಸ್ತ ಚಾಚಬೇಕು ಎಂದು ಅವರು ಮನವಿ ಮಾಡಿದರು.

12 ಮೈಲಿ ಉದ್ದದ ಕಂದಕ:ಮರಿಯುಪೋಲ್​ನ ಪಶ್ಚಿಮಕ್ಕೆ ರಷ್ಯಾ ಸೇನೆ 12 ಮೈಲಿ ಉದ್ದದ ಕಂದಕವನ್ನು ನಿರ್ವಿುಸಿದೆ. ಅದನ್ನು ಯುದ್ಧಾಪರಾಧದ ಕೃತ್ಯವನ್ನು ಮರೆಮಾಚಲು ಅದು ಬಳಸುತ್ತಿದೆ. ನಾಗರಿಕರ ಹತ್ಯೆ ಮಾಡಿ ಅವುಗಳನ್ನು ಅಲ್ಲಿ ಸಮಾಧಿ ಮಾಡುತ್ತಿದೆ ಎಂದು ಬಾಯ್ಚೆನ್ಕೋ ಆರೋಪಿಸಿದ್ದಾರೆ. ಮನ್​ಹುಷ್​ನ ಉಪಗ್ರಹ ಚಿತ್ರಗಳಲ್ಲೂ ಸಮೂಹ ಸಮಾಧಿಯ ಚಿತ್ರಣ ಗೋಚರಿಸಿದೆ.

ರಷ್ಯಾ-ಕ್ರಿಮಿಯಾ ಸೇತುವೆ ಟಾರ್ಗೆಟ್ರಷ್ಯಾ ಮತ್ತು ಕ್ರಿಮಿಯಾ ನಡುವಿನ ಪ್ರಮುಖ ಸಂಪರ್ಕ ಸೇತುವೆಯನ್ನು ಯೂಕ್ರೇನ್ ಸೇನೆ ಟಾರ್ಗೆಟ್ ಮಾಡಲಿದೆ. 4 ಶತಕೋಟಿ ಡಾಲರ್ ವೆಚ್ಚದ ಕ್ರೆಚ್ ಸೇತುವೆ ಮಾತ್ರವೇ ರಷ್ಯಾ ಮತ್ತು ಕ್ರಿಮಿಯಾ ನಡುವಿನ ಸಂಪರ್ಕಕ್ಕೆ ರಹದಾರಿ. ಸೇನೆಯನ್ನು ರವಾನಿಸುವುದು ಕೂಡ ಇದರಲ್ಲೇ ಆಗಿರುವುದರಿಂದ ಇದು ಅಸಾಧ್ಯ ಟಾರ್ಗೆಟ್ ಏನೂ ಅಲ್ಲ ಎಂದು ಯೂಕ್ರೇನ್​ನ ನ್ಯಾಷನಲ್ ಸೆಕ್ಯುರಿಟಿ ಮತ್ತು ಡಿಫೆನ್ಸ್ ಕೌನ್ಸಿಲ್​ನ ಸೆಕ್ರೆಟರಿ ಒಲೆಕ್ಸಿ ಡ್ಯಾನಿಲೋವ್ ಎಚ್ಚರಿಸಿದ್ದಾರೆ.

29 ಅಮೆರಿಕನ್ನರಿಗೆ ರಷ್ಯಾ ನಿರ್ಬಂಧ: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಮೆಟಾ ಕಂಪನಿ ಸಿಇಒ ಮಾರ್ಕ್ ಜುಕರ್​ಬರ್ಗ್ ಮತ್ತು ಇತರೆ 27 ಗಣ್ಯರ ರಷ್ಯಾ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಈ ಆದೇಶವನ್ನು ಪ್ರಕಟಿಸಿರುವ ರಷ್ಯಾದ ವಿದೇಶಾಂಗ ಸಚಿವಾಲಯ, ಅಮೆರಿಕದ ನಿರ್ಬಂಧಗಳಿಗೆ ಪ್ರತಿಯಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಮೆರಿಕದ ಮಾಧ್ಯಮಗಳಲ್ಲಿ ರಷ್ಯಾ ವಿರುದ್ಧ ಮಾತನಾಡುವ ಪತ್ರಕರ್ತರು, ಸಾರ್ವಜನಿಕ ವ್ಯಕ್ತಿಗಳನ್ನು ಕೂಡ ಈ ಪಟ್ಟಿಗೆ ಅದು ಸೇರಿಸಿದೆ. ಲಿಂಕ್ಡ್​ಇನ್, ಬ್ಯಾಂಕ್ ಆಫ್ ಅಮೆರಿಕದ ಸಿಇಒಗಳು ಕೂಡ ಈ ಪಟ್ಟಿಯಲ್ಲಿದ್ದಾರೆ. ಇದೇ ರೀತಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ ಸೇರಿ 61 ಕೆನಡಾ ಪ್ರಜೆಗಳ ಮೇಲೂ ನಿರ್ಬಂಧ ಘೋಷಿಸಲಾಗಿದೆ.

ನಾಗರಿಕರ ಸ್ಥಳಾಂತರಕ್ಕೆ ಅಡ್ಡಿ: ಮರಿಯುಪೋಲ್​ನಿಂದ ಗುರುವಾರ ನಾಗರಿಕರ ಸ್ಥಳಾಂತರ ಮಾಡುವುದು ಸಾಧ್ಯವಾಗಿಲ್ಲ. ರಷ್ಯಾ ಜತೆಗೆ ಮಾನವೀಯ ಕಾರಿಡಾರ್ ರಚನೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ರಷ್ಯಾ ಸೇನೆ ಶೆಲ್ ದಾಳಿ ಮುಂದುವರಿಸಿದ ಕಾರಣ ನಾಗರಿಕರ ಸ್ಥಳಾಂತರ ಸಾಧ್ಯವಾಗಿಲ್ಲ. ಸ್ಥಳಾಂತರಿಸುವ ಸ್ಥಳದ ಮೇಲೆಯೆ ದಾಳಿ ಆಗಿತ್ತು ಎಂದು ಯೂಕ್ರೇನ್ ಸರ್ಕಾರ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Sat Apr 23 , 2022
Jos haluat saada osasi valokeilasta, voit lähettää linkin screenshottiin Kasinoitsijan palautelomakkeella. Ja terveiset sille tuhman kuvan lähettäjälle, että karma maksaa potut pottuina. Karma on luonnonlaki, joka johtaa siihen, että toisia loukkaavat ihmiset päätyvät itse loukatuiksi ja jäävät yksin, sanoi Sylvester Stallone vapaasti suomennettuna. Aloita Pelaaminen Reactoonz Peli Reactoonzilla Ja lisäksi […]

Advertisement

Wordpress Social Share Plugin powered by Ultimatelysocial