ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ.

ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ. ಅವರು ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಅವರು ಗುಜರಾತ್ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು. ಇಂದು ಅವರ ಸಂಸ್ಮರಣಾ ದಿನ.ಉಮಾಶಂಕರ್ ಜೋಶಿ 1911ರ ಜುಲೈ 21ರಂದು ಗುಜರಾತ್ ರಾಜ್ಯದ ಸಬರಕಾಂಠ ಜಿಲ್ಲೆಯ ಬಾಮ್ನಾ ಎಂಬಲ್ಲಿ ಜನಿಸಿದರು. ತಂದೆ ಜೇಥಾಲಾಲ್ ಕಮಲ್ಜಿ. ತಾಯಿ ನವಲ್ ಬಾಯಿ. ಬಡತನದಲ್ಲಿ ಹುಟ್ಟಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಜೋಶಿಯವರು ತಮ್ಮ ಜೀವನದ ಆರಂಭದಲ್ಲೇ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಜೋಶಿಯವರು 1927ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಕೆಲಕಾಲ ಸೆರೆಮನೆಯಲ್ಲಿದ್ದರು. 1930ರಲ್ಲೂ 1932ರಲ್ಲೂ ಕಾರಾಗೃಹ ಶಿಕ್ಷೆಯನ್ನನುಭವಿಸಿದ್ದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೂರನೆಯ ಸ್ಥಾನ ಪಡೆದರು. ಅನಂತರ ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿ ಗಳಿಸಿದರು.ಕೇವಲ 19 ವರ್ಷ ಆಗಿದ್ದಾಗ ಜೋಶಿಯವರು ಬರೆದ ವಿಶ್ವಶಾಂತಿ ಎಂಬ ಖಂಡಕಾವ್ಯ ಅವರಿಗೆ ಕೀರ್ತಿ ತಂದುಕೊಟ್ಟಿತು. ಜೋಶಿಯವರ ಪ್ರಥಮ ಕವನಸಂಕಲನ ‘ಗಂಗೋತ್ರಿ’ ಪ್ರಕಟವಾದ್ದು 1934ರಲ್ಲಿ. ಈ ಕೃತಿಯಲ್ಲಿ ಜೋಶಿಯವರು ಅಭಿಜಾತ ಸಾಹಿತ್ಯದ ಮಹೋನ್ನತಿಯನ್ನೂ ರಮ್ಯಪರಂಪರೆಯ ಭವ್ಯತೆಯನ್ನೂ ಮನೋಜ್ಞವಾಗಿ ಹೊಂದಿಸಿದ್ದಾರೆ. ಭಾರತೀಯ ಜ್ಞಾನಪೀಠ ಪ್ರಶಸ್ತಿ ಸಂದ ಅವರ ‘ನಿಶೀಥ’ ಎಂಬ ಕವನಸಂಕಲನ ಪ್ರಕಟವಾದದ್ದು 1939ರಲ್ಲಿ. ಆ ಸಂಕಲನದ ಮೊದಲ ಕವನದ ಹೆಸರೂ ನಿಶೀಥ್. ಆ ಸಂಕಲನದಲ್ಲಿ ಪ್ರೇಮಗೀತೆಗಳೂ ಪ್ರಕೃತಿಸೌಂದರ್ಯದ ವರ್ಣನೆಗಳೂ ಇವೆ.ಇದೇ ಸಮಯದಲ್ಲಿ ವಾಸುಕಿ ಎಂಬ ಕಾವ್ಯನಾಮದಿಂದ ಜೋಶಿ ಬರೆಯುತ್ತಿದ್ದ ಸಣ್ಣ ಕಥೆಗಳು ಏಕಾಂತ ನಾಟಕಗಳು ಬಹಳ ಜನಪ್ರಿಯವಾಗಿದ್ದುವು. ಏಕಾಂತ ನಾಟಕಗಳ ಒಂದು ಸಂಕಲನವೂ ಸಣ್ಣ ಕಥೆಗಳ ಎರಡು ಸಂಕಲನಗಳೂ ಪ್ರಕಟವಾಗಿದ್ದುವು.ಮುಂಬಯಿಯ ವಿಲೆ ಪಾರ್ಲೆಯಲ್ಲಿ ಉಪಾಧ್ಯಾಯವೃತ್ತಿಯನ್ನಾರಂಭಿಸಿ ಸಿಡೆನ್ಹ್ಯಾಂ ಕಾಲೇಜಿನಲ್ಲಿ ಗುಜರಾತಿಯ ಒಪ್ಪೊತ್ತಿನ ಅಧ್ಯಾಪಕರಾಗಿ ಕೆಲಸ ಮಾಡಿದ (1937-1939) ಉಮಾಶಂಕರ ಜೋಶಿಯವರು ಅನಂತರ ಅಹಮದಾಬಾದಿನ ಗುಜರಾತ್ ವಿದ್ಯಾಸಭೆಯ ಸ್ನಾತಕೋತ್ತರ ಅಧ್ಯಾಪಕರಾದರು (1939-1947). ಈ ಸಮಯದಲ್ಲಿ ಜೋಶಿಯವರಿಂದ ಎರಡು ವಿದ್ವತ್ಪೂರ್ಣ ಕೃತಿಗಳು ಪ್ರಕಟವಾದುವು. ಆಖೋ : ಏಕ್ ಆಧ್ಯಯನ ಎಂಬುದು ಒಂದು. ಇದು ಗುಜರಾತಿನ ಪ್ರಸಿದ್ಧ ಕವಿ ಆಖೋನನ್ನು ಕುರಿತ ಒಂದು ಅಧ್ಯಯನ. ಪುರಾಣೋಮನ್ ಗುಜರಾತ್ (ಪುರಾಣಗಳಲ್ಲಿ ಗುಜರಾತು) ಎಂಬುದು ಇನ್ನೊಂದು. ಇವೆರಡೂ ಈ ಕ್ಷೇತ್ರಗಳಲ್ಲಿ ಮಹತ್ತ್ವದ ಕೃತಿಗಳೆನಿಸಿಕೊಂಡಿವೆ.ಜೋಶಿಯವರ ಪ್ರಾಚೀನ ಎಂಬುದು 1944ರಲ್ಲಿ ಪ್ರಕಟವಾದ ಏಳು ನೀಳ್ಗವನಗಳ ಸಂಕಲನ. ಇವರ ಇತರ ಕವನಸಂಕಲನಗಳು ಆತಿಥ್ಯ, ವಸಂತ ವರ್ಷಾ ಮತ್ತು ಅಭಿಜ್ಞಾನ, ಧಾರಾವಸ್ತ್ರ ಮತ್ತು ಸಪ್ತಪದಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ವ್ಯವಸ್ಥೆಇಲ್ಲದೆವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.

Thu Dec 22 , 2022
ಲಕ್ಷ್ಮೇಶ್ವರ ಪಟ್ಟಣದಿಂದ ಬೆಳ್ಳಟ್ಟಿ ಹಾಗೂ ಇತರೆ ಗ್ರಾಮಗಳಿಗೆ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.ಬಸ್‌ ಬಾರದೆ ಹೋದರೆ ಶಾಲೆ, ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಬೇಕಾಗಿದೆ. ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಮನೆಗೆ […]

Advertisement

Wordpress Social Share Plugin powered by Ultimatelysocial