ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ

 

 

 ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ರವಿವಾರ ‘ಸುಶಾಸನ ದಿನ’ವನ್ನು ಆಚರಿಸುವ ಮೂಲಕ ಉನ್ನತ ಶಿಕ್ಷಣ, ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ವಿದ್ಯುನ್ಮಾನ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣೆಯಾಗಲಿದೆ.ಈ ಇಲಾಖೆಗಳ ವತಿಯಿಂದ ಡಿಸೆಂಬರ್‌ ಮಾಸಾದ್ಯಂತ ಸುಶಾಸನ ದಿನ ಆಚರಿಸಿ ಹಲವು ಉಪಯುಕ್ತ ಉಪಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣ, ಐಟಿ- ಬಿಟಿ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಉತ್ತಮ ಆಡಳಿತಕ್ಕೆ ಭದ್ರ ಬುನಾದಿ ಹಾಕಲು ‘ಸುಶಾಸನ ಮಾಸ: ಸುಂದರ ಸಮಾಜದ ಸಾತ್ವಿಕ ತುಡಿತ’ ಘೋಷವಾಕ್ಯದಡಿ ನಾವು ಡಿ.1ರಂದು ಚಾಲನೆ ನೀಡಿದೆವು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.ಸುಶಾಸನ ಅಥವಾ ಗುಡ್‌ ಗವರ್ನೆನ್ಸ್‌ ಒಂದು ದಿನಕ್ಕೆ ಸೀಮಿತವಾದ ಔಪಚಾರಿಕ ಆಚರಣೆಯಾಗಿ ಉಳಿಯಬಾರದು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ‘ಗರಿಷ್ಠ ಆಡಳಿತ, ಕನಿಷ್ಠ ಸರಕಾರ’ ಎನ್ನುವುದನ್ನೇ ತಮ್ಮ ಚಿಂತನೆಯ ಮೂಲದ್ರವ್ಯವನ್ನಾಗಿ ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾ ನಿಲಯಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಸಹ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಕೆಲಸ ನಾವು ‘ಸುಶಾಸನ ಮಾಸ’ ಆಚರಣೆಯ ಅಂಗವಾಗಿ ಕಡ್ಡಾಯ ಗೊಳಿಸಲಾಗಿದ್ದು, ಇದು ಡಿ.10ರಿಂದ ಜಾರಿಗೆ ಬಂದಿದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಅಶ್ವಿನ್-ಅಯ್ಯರ್ ಅಮೋಘ ಜೊತೆಯಾಟ, ಭಾರತಕ್ಕೆ 3 ವಿಕೆಟ್‌ಗಳ ರೋಚಕ ಜಯ

Sun Dec 25 , 2022
    ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಅಮೋಘ ಜೊತೆಯಾಟದ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶದ ವಿರದ್ಧದ 2ನೇ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.145 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 3ನೇ ದಿನದಾಂತ್ಯಕ್ಕೆ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.4ನೇ ದಿನದಾಟ ಆರಂಭವಾಗುತ್ತಿದ್ದಂತೆ ಭಾರತ ಆಘಾತ ಅನುಭವಿಸಿತು. ಜಯದೇವ್ ಉನಾದ್ಕತ್ 13 ರನ್ ಗಳಿಸಿದ್ದಾಗ ಔಟ್ ಆದರು, ನಂತರ ಬಂದ ರಿಷಬ್ […]

Advertisement

Wordpress Social Share Plugin powered by Ultimatelysocial