ಅಂಡರ್​ 19 ವಿಶ್ವಕಪ್​ ಪಂದ್ಯದ ವೇಳೆ ಭೂಕಂಪನ;

ಅಂಡರ್‌-19 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್​ ಮತ್ತು ಜಿಂಬಾಬ್ವೆ ನಡುವಿನ ಪ್ಲೇಟ್​ ಸಮಿಫೈನಲ್ ಪಂದ್ಯದ ವೇಳೆ ಲಘು ಭೂಕಂಪನ ಸಂಭವಿಸಿರುವ ದೃಶ್ಯ ಟೆಲಿವಿಷನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆ ಟ್ರಿನಿಡಾಡ್ ಮತ್ತು ಟೊಬೆಗೊದ ಪೋರ್ಟ್​ ಆಫ್​ ಸ್ಪೇನ್​ನಲ್ಲಿರುವ ಕ್ವೀನ್​ ಪಾರ್ಕ್​ ಓವಲ್​ ಮೈದಾನದಲ್ಲಿ ಶನಿವಾರ ನಡೆದಿದೆ.

ಪಂದ್ಯದ ನಡುವೆಯೇ ಭೂಕಂಪನ ಅನುಭವವಾಗಿದ್ದು, ಇದನ್ನು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತಿದ್ದ ವೀಕ್ಷಕ ವಿವರಣೆಗಾರರು ಸಹ ವಿವರಿಸಿದ್ದಾರೆ.

5.2 ತೀವ್ರತೆಯಲ್ಲಿ ಪೋರ್ಟ್​ ಆಫ್​ ಸ್ಪೇನ್​ನ ಕರಾವಳಿ ಪ್ರದೇಶದಲ್ಲಿ ಕಂಪನ ಸಂಭವಿಸಿದೆ. ಪಂದ್ಯವನ್ನು ಸರೆಯುಡಿತ್ತಿದ್ದ ಕ್ಯಾಮೆರಾ ಅಲುಗಾಡಿದ್ದರಿಂದ ಟಿವಿ ಪರದೆಯಲ್ಲಿಯೂ ದೃಶ್ಯ ಅಲುಗಾಡಿದೆ. ಐಸಿಸಿ ಕಾಮೆಂಟೇಟರ್​ ಆಯಂಡ್ರಿವ್​ ಲಿಯೋನಾರ್ಡ್ ಅವರು ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ಕಂಪನದ ಅನುಭವವನ್ನು ವಿವರಿಸಿದ್ದಾರೆ. ಆದರೆ, ಅವರ ಧ್ವನಿಯಲ್ಲಿ ಎಲ್ಲಿಯೂ ಆತಂಕ ಇರಲಿಲ್ಲ.

ನಾವು ಇದೀಗ ಭೂಕಂಪನವನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ನಿಜವಾಗಿಯೂ ಭೂಕಂಪನವಾಗಿದೆ. ನಮ್ಮ ಹಿಂದೆ ಕೇವಲ ರೈಲು ಹೋಗುತ್ತಿಲ್ಲ, ಆದರೆ ಇಡೀ ಕ್ವೀನ್ಸ್ ಪಾರ್ಕ್ ಓವಲ್ ಮಾಧ್ಯಮ ಕೇಂದ್ರವೇ ನಡುಗಿದೆ’ ಎಂದು ಆಯಂಡ್ರಿವ್​ ವಿವರಿಸಿದ್ದಾರೆ.

ಸುಮಾರು 15 ರಿಂದ 20 ಸೆಕೆಂಡ್​ಗಳ ಕಾಲ ಭೂಮಿ ಕಂಪಿಸಿದೆ. ಜಿಂಬಾಬ್ವೆ ಇನ್ನಿಂಗ್ಸ್​ನ 6ನೇ ಓವರ್​ನಲ್ಲಿ ಈ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದರೂ ಎದುರಾಳಿ ಐರ್ಲೆಂಡ್​ ತಂಡದ ಬೌಲರ್​ ಮ್ಯಾಥೀವ್​ ಹಂಪ್ರೇಸ್​ ಬೌಲ್​ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ : ʼಮಾರ್ಚ್ 1ʼರಿಂದ ʼH1-B ವೀಸಾʼ ನೋಂದಾಣಿ ಆರಂಭ

Sun Jan 30 , 2022
 ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) 2023ರ ಹಣಕಾಸು ವರ್ಷದ ಎಚ್1-ಬಿ ವೀಸಾ(H1-B visas)ಗಳ ಆರಂಭಿಕ ನೋಂದಣಿ(Registration) ಅವಧಿ ಮಾರ್ಚ್ 1-18 ರವರೆಗೆ ನಡೆಯಲಿದೆ ಎಂದು ಘೋಷಿಸಿದೆ.ಯುಎಸ್ ಸಿಐಎಸ್ ಶನಿವಾರ ನೀಡಿದ ಹೇಳಿಕೆಯಲ್ಲಿ ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ ‘ನಿರೀಕ್ಷಿತ ಅರ್ಜಿದಾರರು ಮತ್ತು ಪ್ರತಿನಿಧಿಗಳು ನಮ್ಮ ಆನ್ ಲೈನ್ ಎಚ್-1ಬಿ ನೋಂದಣಿ ವ್ಯವಸ್ಥೆಯನ್ನ ಬಳಸಿಕೊಂಡು ತಮ್ಮ ನೋಂದಣಿಗಳನ್ನ ಪೂರ್ಣಗೊಳಿಸಲು ಮತ್ತು ಸಲ್ಲಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದೆ.ಅಂದ್ಹಾಗೆ, ಯುಎಸ್ ಸಿಐಎಸ್ ಸಲ್ಲಿಸಿದ […]

Advertisement

Wordpress Social Share Plugin powered by Ultimatelysocial