ಮೇ 31ರಂದು ತೈಲ ಕಂಪನಿಗಳಿಂದ ಪೆಟ್ರೋಲ್-ಡೀಸೆಲ್ ಖರೀದಿಸುವುದಿಲ್ಲ ಡೀಲರ್ಸ್

 

ನವದೆಹಲಿ, ಮೇ 30: ತೈಲ ಮಾರುಕಟ್ಟೆ ಕಂಪನಿಗಳಿಂದ 24 ರಾಜ್ಯಗಳ 70,000 ಮಳಿಗೆಗಳು ಮೇ 31ರ ಮಂಗಳವಾರ ಯಾವುದೇ ಇಂಧವನ್ನು ಖರೀದಿಸುವುದಿಲ್ಲ ಎಂದು ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್ ಘೋಷಿಸಿದೆ.

ದೆಹಲಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಂಘದ ಸದಸ್ಯರು ತೈಲ ಕಂಪನಿಗಳಿಂದ (ಒಎಂಸಿ) ಇಂಧನ ಖರೀದಿಸುವುದಿಲ್ಲ ಎಂಬ ಅಭಿಯಾನ ನಡೆಸುವುದಾಗಿ ತಿಳಿಸಿವೆ.

ಕಳೆದ 5 ವರ್ಷಗಳಿಂದ ಡೀಲರ್ ಮಾರ್ಜಿನ್‌ಗಳನ್ನು ಹೆಚ್ಚಿಸದಿರುವುದು ಮತ್ತು ಕೇಂದ್ರ ಸರ್ಕಾರವು ದಿಢೀರಾಗಿ ಅಬಕಾರಿ ಸುಂಕಗಳನ್ನು ಪರಿಷ್ಕರಣೆ ಮಾಡುವುದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದರು.

ಕಳೆದ 5 ವರ್ಷಗಳಲ್ಲಿ, ತೈಲ ಕಂಪನಿಗಳು ಡೀಲರ್ ಮಾರ್ಜಿನ್‌ಗಳನ್ನು ಹೆಚ್ಚಿಸದಿದ್ದರೂ, ಪೆಟ್ರೋಲ್ ಪಂಪ್‌ಗಳನ್ನು ಹೊಂದುವ ಮತ್ತು ನಿರ್ವಹಿಸುವ ವೆಚ್ಚ ಏರಿಕೆಯಾಗಿದೆ ಎಂದು ಅಸೋಸಿಯೇಷನ್ ಹೇಳಿದೆ. ಕೇಂದ್ರ ಸರ್ಕಾರವು ಕಳೆದ 2017 ರಲ್ಲಿ ಡೀಲರ್ ಮಾರ್ಜಿನ್ ಅನ್ನು ಹೆಚ್ಚಿಸಿದೆ ಎಂದು ಅಸೋಸಿಯೇಷನ್ ಆರೋಪಿಸಿದೆ, ಅದರ ನಂತರ OMC ಗಳು ಮತ್ತು ಡೀಲರ್ ಅಸೋಸಿಯೇಷನ್ ​​6 ಮಾಸಿಕ ಡೀಲರ್ ಮಾರ್ಜಿನ್ ಪರಿಷ್ಕರಣೆಗೆ ಒಪ್ಪಿಗೆ ನೀಡಿದ್ದು ಅದನ್ನು ಕಂಪನಿಗಳು ಅನುಸರಿಸಿಲ್ಲ ಎಂದು ದೂಷಿಸಲಾಗಿದೆ.

ಯುಎಸ್ ಮಾದರಿಯಲ್ಲಿ ಮಾರ್ಜಿನ್ ಹೆಚ್ಚಿಸಲು ಆಗ್ರಹಭಾರತದಲ್ಲಿ ಪ್ರಸ್ತುತ ಡೀಲರ್ ಮಾರ್ಜಿನ್ ಶೇ.2ರಷ್ಟಿದ್ದು, ಅದನ್ನು ಶೇ.5ಕ್ಕೆ ಹೆಚ್ಚಿಸಲು ತೈಲ ಕಂಪನಿಗಳನ್ನು ಒತ್ತಾಯಿಸಿವೆ. ಇದರ ಜೊತೆಗೆ ಯುಎಸ್‌ನಲ್ಲಿನ ಪಂಪ್‌ಗಳನ್ನು ಉದಾಹರಣೆ ಆಗಿ ಉಲ್ಲೇಖಿಸಿ ಅಲ್ಲಿಯ ಮಾರ್ಜಿನ್ ಶೇ.8ರಷ್ಟಿದೆ ಎಂದು ಅಸೋಸಿಯೇಷನ್ ಹೇಳಿದೆ.

ದೇಶದಲ್ಲಿ ಮಾರ್ಚ್ 22ರ ನಂತರದಲ್ಲಿ ಬರೋಬ್ಬರಿ 15 ಬಾರಿ ಏರಿಕೆ ಕಂಡಿದ್ದ ಇಂಧನ ದರವನ್ನು ಕೇಂದ್ರ ಸರ್ಕಾರ ಇಳಿಸಿದೆ. ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆ ಮಾಡಿತ್ತು. ಸರ್ಕಾರದ ಈ ಕ್ರಮದ ಬಗ್ಗೆಯೂ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್ ಅಸಮಾಧಾನ ವ್ಯಕ್ತಪಡಿಸಿತ್ತು.

ಕಳೆದ ಐದು ವರ್ಷಗಳಲ್ಲಿ ಹಲವು ಬಾರಿ ವೆಚ್ಚಗಳ ಪರಿಷ್ಕರಣೆ

“ಮೂಲಭೂತವಾಗಿ ನಮ್ಮ ವೆಚ್ಚ ಸಂಬಳ, ವಿದ್ಯುತ್ ಬಿಲ್‌ಗಳು, ಬ್ಯಾಂಕ್ ಶುಲ್ಕಗಳು ಇತ್ಯಾದಿಗಳ ಮರುಪಾವತಿಯಾಗಿದ್ದು, ಕಳೆದ 5 ವರ್ಷಗಳಲ್ಲಿ ಇವುಗಳು ಅನೇಕ ಪಟ್ಟು ಹೆಚ್ಚಾಗಿದೆ. ಡೀಲರ್ ಕಮಿಷನ್ ಅನ್ನು ಪರಿಷ್ಕರಿಸುವ ನಮ್ಮ ನಿರಂತರ ಬೇಡಿಕೆಯನ್ನು ತೈಲ ಕಂಪನಿಗಳು ಕಡೆಗಣಿಸುತ್ತಿದೆ. ಆ ಮೂಲಕ ತೈಲ ಕಂಪನಿಗಳು ತನ್ನದೇ ಆದ ನೆಟ್‌ವರ್ಕ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿವೆ,” ಎಂದು ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚಿನ ವೆಚ್ಚಗಳು ಕೆಲವು ಸಣ್ಣ ಪ್ರಮಾಣದ ಪೆಟ್ರೋಲ್ ಪಂಪ್‌ಗಳನ್ನು ದಿವಾಳಿಯ ಅಂಚಿಗೆ ತಳ್ಳುತ್ತಿವೆ. ಕಮಿಷನ್‌ಗಳ ಹೆಚ್ಚಳದ ಕುರಿತು ಚರ್ಚಿಸಲು ತೈಲ ಕಂಪನಿಗಳನ್ನು ಚರ್ಚೆಗೆ ಬರುವಂತೆ ಅಸೋಸಿಯೇಷನ್ ಉಲ್ಲೇಖಿಸಿದೆ. ಅಬಕಾರಿ ಕಡಿತದಿಂದ ಉಂಟಾದ ತಮ್ಮ ವಿತರಕರ ನಷ್ಟವನ್ನು ಮರುಪಾವತಿಸಲು ತೈಲ ಕಂಪನಿಗಳಿಗೆ ಸಂಸ್ಥೆಯು ಕರೆ ನೀಡಿದೆ.

ಬೆನ್ನುಮೂಳೆ ಮುರಿಯುವ ಅಬಕಾರಿ ಸುಂಕ

ಅಬಕಾರಿ ಸುಂಕ ಕಡಿತದ ನಂತರ ಹೆಚ್ಚಿನ ಬೆಲೆಗೆ ಇಂಧನವನ್ನು ಖರೀದಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ಲಕ್ಷಗಟ್ಟಲೆ ನಷ್ಟ ಉಂಟಾಗುತ್ತದೆ. ಈ ಕಾರಣದಿಂದಾಗಿಯೇ ಅಬಕಾರಿ ಸುಂಕದ ಕಡಿತವು “ನಮ್ಮ ಬೆನ್ನುಮೂಳೆಯನ್ನೇ ಮುರಿಯುತ್ತಿದೆ,” ಎಂದು ಅಸೋಸಿಯೇಷನ್ ಆರೋಪಿಸಿದೆ. ಅಬಕಾರಿಯಲ್ಲಿನ ಕಡಿತದಿಂದ “ಚೇತರಿಸಿಕೊಳ್ಳಲಾಗದ ನಷ್ಟವನ್ನು” ವಿತರಕರಿಗೆ ರವಾನಿಸಲಾಗುತ್ತಿದೆ ಎನ್ನುವುದು ಅಸೋಸಿಯೇಷನ್ ಆರೋಪವಾಗಿದೆ.

ಕಳೆದ ಜೂನ್ 2017 ರಿಂದ ಡೈನಾಮಿಕ್ ಪ್ರೈಸಿಂಗ್ ಮೆಕ್ಯಾನಿಸಂ ಅನ್ನು ಜಾರಿಗೆ ತಂದಾಗ ಎಂಟು ಬಾರಿ ಅಬಕಾರಿ ಸುಂಕವನ್ನು ಪರಿಷ್ಕರಿಸಲಾಗಿದೆ. ಈ ಐದು ಸಂದರ್ಭಗಳಲ್ಲಿ, ಸುಂಕವನ್ನು ಕಡಿಮೆ ಮಾಡಲಾಗಿದ್ದು, ಕಡಿಮೆ ಚಿಲ್ಲರೆ ಮಾರಾಟದ ಬೆಲೆಗೆ (RSP) ಕಾರಣವಾಯಿತು. ಆದರೆ ಉಳಿದ ಸಂದರ್ಭಗಳಲ್ಲಿ ಅಬಕಾರಿ ಸುಂಕವು ಚಿಲ್ಲರೇ ಮಾರಾಟದ ಬೆಲೆಯ ಮೇಲೆ ಪರಿಣಾಮ ಬೀರದಂತೆ ಹೆಚ್ಚಿಸಲಾಯಿತು, ಹೀಗಾಗಿ ಲಾಭವನ್ನು ತೈಲ ಕಂಪನಿಗಳಿಗೆ ವರ್ಗಾಯಿಸಲಾಯಿತು.

ಒಂದು ದೇಶ ಒಂದು ಬೆಲೆ ನಿಯಮ ಅಳವಡಿಸಲು ಆಗ್ರಹ

“ಪೆಟ್ರೋಲ್-ಡೀಸೆಲ್ ವಿತರಕರು ಅಬಕಾರಿ ಸುಂಕವನ್ನು ಹೆಚ್ಚಿಸುವುದರಿಂದ ಲಾಭ ಗಳಿಸಬಾರದು ಅಥವಾ ಸುಂಕ ಕಡಿತದಿಂದ ನಷ್ಟಕ್ಕೆ ಗುರಿಯಾಗಬಾರದು,” ಎಂದು ಅಸೋಸಿಯೇಷನ್ ಹೇಳಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಒಂದು ದೇಶ ಒಂದು ಬೆಲೆ ಕಾರ್ಯವಿಧಾನವನ್ನು ಕೇಂದ್ರ ಸರ್ಕಾರ ಹೊರಡಿಸಬೇಕೆಂದು ಸಂಘ ಒತ್ತಾಯಿಸಿದೆ. ಪ್ರಸ್ತುತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ಮಾತ್ರವಲ್ಲದೆ ಅದೇ ರಾಜ್ಯದೊಳಗೆ ನಗರದಿಂದ ನಗರಕ್ಕೆ ಬದಲಾಗುತ್ತಿರುವುದು ಕಂಡು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಕಿಯಾರ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ.

Tue May 31 , 2022
  ನಟಿ ಕಿಯಾರಾ ಅಡ್ವಾಣಿ ಸದ್ಯ ಅಭಿನಯದ ‘ಭೂಲ್ ಭುಲಯ್ಯ 2’ ಸಿನಿಮಾದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ನಟಿ ಕಿಯಾರ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ಕಾಣಿಸಿಕೊಂಡಿದ್ದು, ಈಗ ಈ ಜೋಡಿಯ ಬಗ್ಗೆ ಹೊಸ ಸುದ್ದಿ ಬಂದಿದೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ನಡುವೆ ಲವ್ವಿ-ಡವ್ವಿ ಇದೆ ಎನ್ನುವ ವಿಚಾರ ಹಲವು ದಿನಗಳಿಂದ […]

Advertisement

Wordpress Social Share Plugin powered by Ultimatelysocial