ಚಾಲುಕ್ಯ ಸಾಮ್ರಾಜ್ಯ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಕ್ರಾಂತಿ.

ಚಾಲುಕ್ಯ ಸಾಮ್ರಾಜ್ಯ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಮತ್ತು ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಸಂಚಾರದ ಮೂಲಕ ಜನ ಸಾಮಾನ್ಯರಲ್ಲಿ ಪಸರಿಸುವ ತನ್ಮೂಲಕ ಚಳವಳಿಯನ್ನು ಸಮಾಜೋದ್ಧರಣ ಕಾರ್ಯವಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಶರಣ ಸಂಸ್ಕೃತಿಯ ಹರಿಕಾರರಾದ ಅಲ್ಲಮಪ್ರಭು, ಅಣ್ಣ ಬಸವಣ್ಣ, ಅಕ್ಕಮಹಾದೇವಿ, ಚೆನ್ನ ಬಸವಣ್ಣ ಮತ್ತು ಸಿದ್ದರಾ ಮೇಶ್ವರರು ಎಂಬುದು ವಿಷೇಶ ಎಂದು ಆದರದಹಳ್ಳಿ ಗವಿಮಠದ ತಪಸ್ವಿ ಡಾ.ಕುಮಾರ ಮಹಾರಾಜ ಹೇಳಿದರು. ಆದರದಹಳ್ಳಿ ಗ್ರಾಮದಲ್ಲಿ ಕಾಯಕಯೋಗಿ ಸಿದ್ದ ರಾಮೇಶ್ವರ ಜಯಂತಿ‌ ಆಚರಿಸಿ ಅವರು ಮಾತನಾಡಿದರು. ಶರಣ ಸಂಸ್ಕೃತಿಯ ಅರಿವಿರುವ ಎಲ್ಲರಿಗೂ ವೇದ್ಯವಾದ ವಿಷಯ ಶರಣ ಸಂಸ್ಕೃತಿಯ ಪಂಚ ಪ್ರಥಮರೆಂದೇ ಖ್ಯಾತಿವೆತ್ತ ಮೇಲಿನ ಐವರು ಮಹನೀಯರಲ್ಲಿ ಅಂದಿನ ಕಾಲದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದವರು ಶ್ರೀಗುರು ಸಿದ್ದರಾಮೇಶ್ವರರು. ಕಾಯಕ ಯೋಗಿ, ಶಿವ ಯೋಗಿ, ಕರ್ಮಯೋಗಿ ಎಂದೆಲ್ಲಾ ಭಕ್ತಜನರಿಂದ ಪ್ರಶಂಸೆಗೆ ಪಾತ್ರರಾದ ಸಿದ್ದರಾಮೇಶ್ವರರು ಮೂಲತಃ ಮಹಾರಾಷ್ಟ್ರದ ಸೊನ್ನ ಲಾಪುರ (ಇಂದಿನ ಸೋಲಾಪುರ)ದಲ್ಲಿ 12ನೇ ಶತ ಮಾನದ ಮಧ್ಯಭಾಗದಲ್ಲಿ ಜನಿಸಿದವರು ಎಂದರು.ಪ್ರಮುಖವಾಗಿ ಜನರ ನೀರಿನ ದಾಹ ಇಂಗಿಸುವಲ್ಲಿ ಶ್ರಮಿಸಿದ ಸಿದ್ದರಾಮೇಶ್ವರರು ಸೊನ್ನಲಾಪುರದಲ್ಲಿ ನಾಲ್ಕು ಸಾವಿರ ಶಿವಶರಣರ ಸಹಕಾರ ದಿಂದ ರಚಿಸಿದ ಕೆರೆ ಇಂದಿಗೂ ಬತ್ತದಿರುವುದು ವಿಶೇಷ ಎಂದರು.ಗ್ರಾಮದ ಪ್ರಮುಖ ಬದಿಗಳಲ್ಲಿ ಸಿದ್ದರಾಮೇಶ್ವರನ ಭಾವ ಚಿತ್ರ ಮೇರವಣಿಗೆ ಮಾಡಲಾಯಿತು.ಗ್ರಾಮದ ಎಲ್ಲ ಸಮಾಜದ ಭಾಂದವರು ಮೇರವಣಿಗೆ ಭಾಗಿಯಾದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಲ್ಲೂರು ದೇವಸ್ಥಾನ ಮಂಗಳಾರತಿ ಹಣಕ್ಕಾಗಿ ಒಡೆದಾಡಿದ ಅರ್ಚಕರು.

Tue Jan 17 , 2023
ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದ ಅಂತ್ರ(ತಾತಿ) ಹಾಗೂ ಭಕ್ತರಿಂದ ತಟ್ಟೆಗೆ ಬೀಳುವ ಹಣದ ವಿಚಾರಕ್ಕೆ ಅರ್ಚಕ‌ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಭಾನುವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಶ್ರೀ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಟುಂಬದವರಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಪರಸ್ಪರ ಬಡಿದಾಡಿ ಕೊಂಡಿರುವ ದೃಶ್ಯ ದೇವಾಲಯದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈಗಾಗಲೇ ಗಲಾಟೆಯ ಈ ವಿಡಿಯೋ ವಾಟ್ಸ್ […]

Advertisement

Wordpress Social Share Plugin powered by Ultimatelysocial