ಪ್ರೀತಿಯ ದ್ಯೂತಕ ‘ತಾಜ್‌ಮಹಲ್‌’ ನೋಡಿದವರೆಷ್ಟು? ಗಳಿಸಿದ ಆದಾಯವೆಷ್ಟು?

ಬೆಂಗಳೂರು, ಫೆಬ್ರವರಿ 14: ಪ್ರೀತಿಯ ದ್ಯೂತಕವಾಗಿ ನೂರಾರು ವರ್ಷಗಳ ಹಿಂದೆಯೇ ಯಮುನಾ ನದಿ ತೀರದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡ ‘ತಾಜಮಹಲ್’ ಇಂದಿಗೂ ಲಕ್ಷಾಂತರ ಮಂದಿಯನ್ನು ತನ್ನ ಸೆಳೆಯುವ ಶಕ್ತಿ ಹೊಂದಿದೆ.

ಇಂದು ಫೆಬ್ರವರಿ 14 ಮಂಗಳವಾರ ‘ಪ್ರೇಮಿಗಳ ದಿನ

ಪ್ರೇಮಿಯಿಂದ, ಪ್ರೇಮಿಗಾಗಿ, ಪ್ರೇಮಿಗೋಸ್ಕರವಾಗೇ ತಾಜಮಹಲ್‌ ಅನ್ನು ಶಹಜಹಾನ್ ತನ್ನ ಪ್ರೀತಿಯ ಹೆಂಡರ್‌ ಮುಮ್ತಾಜ್ ಗಾಗಿ ನಿರ್ಮಿಸಿರುವ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಈ ಅದ್ಭುತವನ್ನು ನೆನೆಯದ ಪ್ರೇಮಿಗಳೇ ಇಲ್ಲ. ಅದೇಷ್ಟು ಜನರು ಇನ್ನೂ ‘ತಾಜ್‌ಮಹಲ್’ ಅನ್ನು ಕಣ್ತುಂಬಿಕೊಳ್ಳದವರಿದ್ದಾರೆ.

ತಾವು ಪ್ರೀತಿಸುವ ಜೀವಗಳ ಜೊತೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಆಗ್ರಾದ ಯಮುನಾ ನದಿ ದಂಡೆ ಮೇಲಿರುವ ಈ ತಾಜ್‌ಮಹಲ್ ನೋಡಬೇಕು, ಅಲ್ಲಿ ಪ್ರೇಮ ನಿವೇದನೆ ತೋಡಿಕೊಳ್ಳಬೇಕು ಎಂದು ಹವಣಿಸುವವರು ಇದ್ದಾರೆ. ಅದೇಷ್ಟೋ ಜನರು ಕನಸು ಇದಾಗಿರುತ್ತದೆ. ಇನ್ನೂ ಪ್ರೇಮಿಗಳ ದಿನಾಚರಣೆ ಜೊತೆಗೆ ತಾವು ಸುತ್ತಿದ ಸ್ಥಳಗಳ ಪೈಕಿ ನಿಶ್ವಾರ್ಥದ ಪ್ರೀತಿ ಸಾರವನ್ನು ಸಾರುವ ಈ ತಾಜ್‌ಮಹತ್‌ ಅನ್ನು ಸ್ಮರಿಸದೇ ಇರಲಾರರು.

ಪ್ರೇಮಿಗಳು ಸೇರಿದಂತೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವ ಈ ತಾಜ್‌ಮಹಲ್‌ ಗೆ ಒಟ್ಟು ಐದು ವರ್ಷಗಳಲ್ಲಿ ಎಷ್ಟು ಜನ ಭೇಟಿ ನೀಡಿ ಕಣ್ತುಂಬಿಕೊಂಡಿದ್ದಾರೆ. ಅವರಿಂದ ಅಲ್ಲಿ ಸಂಗ್ರಹವಾದ ಆದಾಯವೆಷ್ಟು?, ವಾರ್ಷಿಕವಾಗಿ ಎಷ್ಟು ಹಣದಲ್ಲಿ ಮಹಲ್‌ ಅನ್ನು ಸುಂದರವಾಗಿ ಕಾಣುವಂತೆ ನಿರ್ವಹಣೆ ಮಾಡಲಾಗುತ್ತದೆ. ಈ ರೀತಿಯ ಹಲವು ಮಾಹಿತಿಗಳು, ಅಂಕಿ ಅಂಶಗಳು ನಿಮ್ಮ ಮುಂದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ತಾಜ್‌ಮಹಲ್ ಕುರಿತು ಅಧಿಕೃತಿ ಮಾಹಿತಿಯೊಂದನ್ನು ನೀಡಿದೆ. ಲಭ್ಯ 2014-15 ರಿಂದ 2018-19ರ ವರೆಗಿನ (05 ವರ್ಷ) ಮಾಹಿತಿ ನೋಡಿದರೆ ಅಚ್ಚರಿಯಾಗುವಷ್ಟು ಆದಾಯ ತಾಜ್‌ ಮಹಲ್ ಸಂಗ್ರಹಿಸಿದೆ.

23,95,010,321 ಕೋಟಿ ರೂಪಾಯಿ ಸಂಗ್ರಹ

ಈ ಹಿಂದಿನ ಒಟ್ಟು ಐದು ವರ್ಷಗಳಲ್ಲಿ ಪ್ರೇಮಿಗಳು, ಪ್ರವಾಸಿಗರು ಒಳಗೊಂಡಂತೆ ಒಟ್ಟು ಸುಮಾರು 25,084 ,404 ಮಂದಿ ತಾಜಮಹಲ್‌ ಅನ್ನು ಕಣ್ತುಂಬಿಕೊಂಡಿದ್ದಾರೆ. ಇಷ್ಟು ಜನರು ಆಗಮನದಿಂದಾಗಿ ತಾಜ್‌ಮಹಲ್ ನಿರ್ವಹಿಸುವ ಉತ್ತರ ಪ್ರದೇಶದ ರಾಜ್ಯ ಸರ್ಕಾರಕ್ಕೆ ಐದ ವರ್ಷದ ಅವಧಿಯಲ್ಲಿ ಒಟ್ಟು ಸರಿಸುಮಾರು 23,95,010,321 ಕೋಟಿ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯವು ತಿಳಿಸಿದೆ.

2018-2019 ರಲ್ಲಿ ಅತ್ಯಧಿಕ ಮಂದಿ ಭೇಟಿ

ಈ ಐದು ವರ್ಷಗಳಲ್ಲಿ ಈ ಪೈಕಿ 2018-2019 ರ ಅವಧಿಯಲ್ಲಿ ಅತ್ಯಧಿಕ ಪ್ರವಾಸಿಗರು ಅಂದರೆ 7,090,207 ಮಂದಿ ತಾಜ್‌ಮಹಲ್‌ ಭೇಟಿ ನೀಡಿದ್ದಾರೆ. ತಮ್ಮ ಪ್ರೇಮಿಗಳು, ಸ್ನೇಹಿತರು, ಕುಟುಂಬ ಸಮೇತರಾಗಿ ಭವ್ಯ ಕಟ್ಟಡವನ್ನು ಕಣ್ತುಂಬಿಕೊಂಡಿದ್ದಾರೆ. ಈ ವರ್ಷದಲ್ಲೇ ಅತ್ಯಧಿಕ ಆದಾಯವು ಸಂಗ್ರಹವಾಗಿದೆ. 2018-2019 ಅವಧಿಯಲ್ಲಿ ಸರ್ಕಾರಕ್ಕೆ ಒಟ್ಟು 86,48,93,100 ರೂಪಾಯಿ ಸಂಗ್ರಹಿಸಲಾಗಿದೆ.

2015-2016 ರಲ್ಲಿ ಅತ್ಯಂತ ಕಡಿಮೆ ಮಂದಿ ಭೇಟಿ

ಈ ಪೈಕಿ ಅತ್ಯಂತ ಕಡಿಮೆ ಎಂದರೆ, 2015-2016 ರಲ್ಲಿ 5,070,573 ಮಂದಿ ತಾಜಮಹಲ್ ವೀಕ್ಷಿಸಿದ್ದಾರೆ. ಇದರಿಂದ ಆ ವರ್ಷ ಸರ್ಕಾರಕ್ಕೆ ನಿರೀಕ್ಷಿತ ಮಟ್ಟದ ಆದಾಯ ಸಂಗ್ರಹವಾಗಿಲ್ಲ ಎನ್ನಲಾಗಿದೆ. ಅಂದರೆ ಒಟ್ಟು 17,92,27,050 ಕೋಟಿ ರೂ. ಹಣ ಬಂದಿದೆ. 2014-15ರಲ್ಲಿ 6,089,901 ಜನರ ಆಗಮನದಿಂದ 21, 23,55,330 ಕೋಟಿ ಆದಾಯ, 2016- 17ರ ಒಂದು ವರ್ಷದಲ್ಲಿ 61,77,196 ಪ್ರವಾಸಿಗರ ಭೇಟಿಯಿಂದಾಗಿ 55,09,29,860 ಕೋಟಿ ರೂಪಾಯಿ ಆದಾಯ ಗಳಿಕೆ ಆಗಿದೆ. ಇನ್ನು ಕೊನೆಯದಾಗಿ 2017-18ರಂದು ತಾಜ್‌ಮಹಲ್‌ಗೆ ಬಂದಿದ್ದ 65,65,627 ಜನರಿಂದ 85,76,04,981 ಕೋಟಿ ರೂಪಾಯಿ ಹಣ ಸರ್ಕಾರದ ಭೊಕ್ಕಸ ಸೇರಿದೆ.

ಅದೇ ರೀತಿ 2014-15 ರಿಂದ 2018-19ರ ಐದು ವರ್ಷಗಳ ಅವಧಿಯಲ್ಲಿ 205,581,052 ಕೋಟಿ ರೂಪಾಯಿ ಹಣವನ್ನು ಉತ್ತರ ಪ್ರದೇಶದ ಸರ್ಕಾರ ತಾಜಮಹ್ ನಿರ್ವಹಣೆಗೆ ಖರ್ಚು ಮಾಡಿದೆ. ಒಟ್ಟು ಆದಾಯ ಪೈಕಿ ಈ 5 ವರ್ಷದಲ್ಲಿ ತಾಜ್‌ ಮಹಲ್ 2,189,429,269 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಮಾಹಿತಿ ನೀಡಿದೆ.

ತಾಜ್‌ಮಹಲ್ ಪ್ರವೇಶ ಶುಲ್ಕದ ಮಾಹಿತಿ

ಇನ್ನೂ ತಾಜ್‌ಮಹಲ್ ಪ್ರವೇಶಿಸಿರುವವರನ್ನು ಮೂರು ವರ್ಗಗಳಾಗಿ ‘ಭಾರತೀಯರು, ವಿದೇಶಿ ಪ್ರವಾಸಿಗರು/ಅನಿವಾಸಿ ಭಾರತೀಯರು ಹಾಗೂ SAARC/BIMSTEC ಎಂದು ವಿಂಗಡಿಸಲಾಗಿದೆ. ಅದರಂತೆ ಪ್ರವೇಶ ಶುಲ್ಕವನ್ನು ಸಾಮಾನ್ಯ ದಿನಗಳಲ್ಲಿ ಹಾಗೂ ವಾರಾಂತ್ಯದ ಆಧಾರದಲ್ಲಿ ಮೂರು ರೀತಿ ಇರಲಿದೆ. ಅದರಲ್ಲಿ ಒಬ್ಬರ ವ್ಯಕ್ತಿಯಿಂದ ತಲಾ 50ರೂಪಾಯಿ/ 540ರೂಪಾಯಿ/ 1100ರೂಪಾಯಿ ಪಡೆಯಲಾಗುತ್ತದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವತಃ ರಾಹುಲ್ ಗಾಂಧಿ ವಾರಣಾಸಿ ಪ್ರವಾಸ ರದ್ದುಗೊಳಿಸಿದ್ದಾರೆ

Tue Feb 14 , 2023
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ  ಸ್ವತಃ ಉತ್ತರ ಪ್ರದೇಶದ ವಾರಣಾಸಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.ಅವರ ಚಾರ್ಟರ್ಡ್ ಏರ್‌ಲೈನ್ ಕಳೆದ ರಾತ್ರಿ ವಾರಣಾಸಿ ವಿಮಾನ ನಿಲ್ದಾಣಕ್ಕೆ ಪತ್ರ ಬರೆದು ತಮ್ಮ ಪ್ರವಾಸ ರದ್ದತಿ ಬಗ್ಗೆ ತಿಳಿಸಿತ್ತು ಎಂದು ಸರಕಾರದ ಉನ್ನತ ಮೂಲಗಳು ಮಂಗಳವಾರ ತಿಳಿಸಿವೆ. ಸೋಮವಾರ ತಡರಾತ್ರಿ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರ ವಿಮಾನವನ್ನು ಇಳಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ವಾರಣಾಸಿ ವಿಮಾನ […]

Advertisement

Wordpress Social Share Plugin powered by Ultimatelysocial