ವಿ. ಟಿ. ಎಸ್. ರಾವ್

ವಿ. ಟಿ. ಎಸ್. ರಾವ್ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ 1935ರ ಫೆಬ್ರವರಿ 24ರಂದು ಜನಿಸಿದರು. ತಂದೆ ತಿಮ್ಮರಸು. ತಾಯಿ ಗೌರಮ್ಮ. ರಾವ್ ಮೈಸೂರಲ್ಲಿ ಓದಿದರು. ಶಾಲಾ ದಿನಾಚರಣೆಯ ಸಂದರ್ಭದಲ್ಲಿ ರಚಿಸಿದ ವೀಣಾಪಾಣಿ ಚಿತ್ರಕ್ಕೆ ಅಮೆರಿಕದ ರೆಡ್‌ಕ್ರಾಸ್ ಸೊಸೈಟಿಯ ರಾಲ್ಫ್‌ಬುಂಜೆ ಯವರಿಂದ ಬಹುಮಾನ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವಿ. ಟಿ. ಎಸ್. ರಾವ್ ಉದ್ಯೋಗಕ್ಕಾಗಿ ಅಂಚೆ ಇಲಾಖೆ ಸೇರಿದರು. ಮೈಸೂರು ಶೈಲಿಯ ಮಹಾನ್ ಚಿತ್ರಕಾರರಾದ ಎನ್.ಜಿ. ಪಾವಂಜೆಯವರ ಬಳಿ ಕಲಾಭ್ಯಾಸ ಮಾಡಿದರು. ಇವರಿಗೆ ಚಿತ್ರಕಲೆಯ ಜೊತೆಗೆ ಬೆಳೆದು ಬಂದ ಮತ್ತೊಂದು ಹವ್ಯಾಸ ತೊಗಲುಬೊಂಬೆಯಾಟ. ಖ್ಯಾತ ಕಲಾವಿದ ರೋರಿಚ್ ಮತ್ತು ದೇವಿಕಾರಾಣಿ ಸಮ್ಮುಖದಲ್ಲಿ ತೊಗಲುಬೊಂಬೆ ಪ್ರದರ್ಶನದ ಸಂಯೋಜನೆ ಮಾಡಿ ಪ್ರದರ್ಶಿಸಿದರು. ದೃಶ್ಯ ಚಿತ್ರಗಳ ಪ್ರದರ್ಶನ ಕಲೆ, ತೊಗಲುಬೊಂಬೆಯಾಟಕ್ಕೆ ಪುನರ್ಜನ್ಮ ನೀಡಿದರು.
ರಾವ್ ಅವರು ಡೆನ್ಮಾರ್ಕ್ ವಿಶ್ವವಿದ್ಯಾಲಯದ ಕಲಾ ಪ್ರಾಧ್ಯಾಪಕ ಸೊರೆನ್‌ಸನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ದೃಶ್ಯ ಕಲಾ ಮಾಧ್ಯಮದ ಪ್ರಾಧ್ಯಾಪಕ ಮಾಲ್ವಿಯನ್ ಬಿ. ಹೆಲೆಸ್ಟಿನ್ ಮುಖಾಂತರ ವಿದೇಶಕ್ಕೂ ತೊಗಲುಬೊಂಬೆಯಾಟ ಪರಿಚಯಿಸಿದರು. ಫ್ರಾನ್ಸ್ ದೇಶದ ರ್ಯಾನ್‌ಸೆ ಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ತೊಗಲುಬೊಂಬೆ ಪ್ರದರ್ಶನದಲ್ಲಿ ಭಾರತವನ್ನು ಪ್ರತಿನಿಧಿಸುವಂತೆ ಬೊಂಬೆಯಾಟಗಾರರ ತಂಡದ ಸಂಘಟನೆಯ ಮಹತ್ಕಾರ್ಯ ಮಾಡಿದರು.
ವಿ. ಟಿ. ಎಸ್. ರಾವ್ ಅವರು ಆರ್.ಟಿ. ನಗರದಲ್ಲಿ ಮಕ್ಕಳಿಗಾಗಿ ಉಚಿತ ಚಿತ್ರಕಲಾ ಶಿಕ್ಷಣ ನೀಡಿದರು. ಸ್ಥಳದಲ್ಲೆ ಚಿತ್ರ ಬರೆಯುವ ಸ್ಪರ್ಧೆಗಳ ಆಯೋಜನೆ ಮಾಡಿದರು. ತಾಳೆಗರಿ ಗ್ರಂಥಗಳಲ್ಲಿನ ಚಿತ್ರ ವಿನ್ಯಾಸಗಳ ಬಗೆಗೆ ಸಂಶೋಧನೆ ಮಾಡಿದರು.

ವಿ. ಟಿ. ಎಸ್. ರಾವ್ ಅವರು ಚಿತ್ರಕಲೆಗಾಗಿ ಗಳಿಸಿದ ಪ್ರಶಸ್ತಿಗಳು ಹಲವಾರು. ದೇವಾಲಯ ಚಿತ್ರಕ್ಕೆ ಮೈಸೂರು ದಸರಾ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ವರ್ಣ ಮಹೋತ್ಸವ ಸಂದರ್ಭದಲ್ಲಿ ಚಿತ್ರಕಲೆಗಾಗಿ ಪ್ರಶಸ್ತಿ, ಇಂಡೋ-ಸೋವಿಯತ್ ಸಾಂಸ್ಕೃತಿಕ ಗೌರವ ಇವುಗಳಲ್ಲಿ ಸೇರಿವೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೂದಲು ಉದುರುತ್ತಿದ್ದರೆ ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.!

Fri Mar 18 , 2022
ಕೂದಲಿಗೆ ಸರಿಯಾದ ಪೋಷಣೆಗಳು ಸಿಗದಿದ್ದಾಗ ಕೂದಲುದುರುತ್ತದೆ.ಹಾಗೇ ನೀರಿನ ಬದಲಾವಣೆಯಾದಾಗ, ನಮ್ಮ ಕೆಟ್ಟ ಜೀವನಶೈಲಿಯಿಂದ ಕೂದಲು ಉದುರಿ ಹೋಗುತ್ತದೆ. ಹಾಗಾಗಿ ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.ಬೃಂಗರಾಜ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹಲವಾರು ಗಿಡಮೂಲಿಕೆ ಅಂಶಗಳನ್ನು ಒಳಗೊಂಡಿದೆ. ಬೃಂಗರಾಜ್ ಅನ್ನು ಅನೇಕ ತೈಲಗಳು, ಶಾಂಪೂಗಳು, ಕಂಡೀಷನರ್ ಗಳು ಮತ್ತು ಸೀರಮ್ ಗಳಲ್ಲಿ ಬಳಸಲಾಗುತ್ತದೆ. ಹಾಗೇ ಬೃಂಗರಾಜ್ ಪುಡಿಯನ್ನು ಕೂದಲಿಗೆ ಬಳಸಬಹುದು. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.1 […]

Advertisement

Wordpress Social Share Plugin powered by Ultimatelysocial