ಬಾಲ್ಯವಿವಾಹ ಬಂಧನ ವಿನಾಶಕ್ಕೆ ದಾರಿ: ಅಸ್ಸಾಂ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ

ಗುವಾಹತಿ: ಬಾಲ್ಯವಿವಾಹ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ಸಾವಿರಾರು ಮಂದಿಯನ್ನು ಬಂಧಿಸಿರುವ ಅಸ್ಸಾಂ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗುವಾಹತಿ ಹೈಕೋರ್ಟ್, “ಈ ಬಂಧನ ಕಾರ್ಯಾಚರಣೆ ಜನರ ಖಾಸಗಿ ಬದುಕಿನ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ” ಎಂದು ಹೇಳಿದೆ.

ಈ ಸಂಬಂಧ ಒಂಬತ್ತು ಮಂದಿಗೆ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್, “ಇವು ಕಸ್ಟಡಿಯಲ್ಲಿ ವಿಚಾರಣೆ ನಡೆಸುವ ಪ್ರಕರಣಗಳಲ್ಲ” ಎಂದು ಸ್ಪಷ್ಟಪಡಿಸಿದೆ.

ಬಾಲ್ಯವಿವಾಹ ಸಂಬಂಧ ಪೋಕ್ಸೋ ಕಾಯ್ದೆಯಡಿ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸುವುದು ನಿಸ್ಸಂದೇಹವಾಗಿ ವಿಲಕ್ಷಣ ಕ್ರಮ” ಎಂದು ನ್ಯಾಯಮೂರ್ತಿ ಸುಮನ್ ಶ್ಯಾಮ್ ಮೌಖಿಕವಾಗಿ ಅಭಿಪ್ರಾಯಪಟ್ಟರು. “ಆರೋಪಿಗಳಲ್ಲಿ ಮಕ್ಕಳಿದ್ದಾರೆ; ಕುಟುಂಬದ ಸದಸ್ಯರಿದ್ದಾರೆ… ವೃದ್ಧರಿದ್ದಾರೆ… ಖಂಡಿತವಾಗಿಯೂ ಇದು ಕೆಟ್ಟ ಯೋಚನೆ” ಎಂದು ಅವರು ಸ್ಪಷ್ಟಪಡಿಸಿದರು.

“ನಾವು ಕಾನೂನಿನ ಪ್ರಕಾರ ಮುಂದುವರಿಯುತ್ತೇವೆ. ನಾವು ಹೇಳುವುದು ಏನೂ ಇಲ್ಲ. ತಪ್ಪಿತಸ್ಥರೆಂದು ನಿಮಗೆ ಕಂಡುಬಂದಲ್ಲಿ ಆರೋಪಪಟ್ಟಿ ಸಲ್ಲಿಸಿ. ಅತ ಅಥವಾ ಆಕೆ ವಿಚಾರಣೆ ಎದುರಿಸಲಿ. ಅವರು ಅಪರಾಧಿಗಳಾದಲ್ಲಿ ಶಿಕ್ಷೆ ಅನುಭವಿಸಲಿ” ಎಂದು ನ್ಯಾಯಮೂರ್ತಿ ನುಡಿದರು.

ನ್ಯಾಯಾಲಯದ ಮೊರೆ ಹೋದ ಒಂಬತ್ತು ಮಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಅವರ, “ಕಾನೂನು ಉಲ್ಲಂಘಿಸಿ ವಿವಾಹ ನೆರವೇರಿಸಿದರೆ ಕಾನೂನು ತನ್ನದೇ ಕ್ರಮ ಕೈಗೊಳ್ಳುತ್ತದೆ..ನಾವು ಪರಿಗಣಿಸುವುದು ಕೇವಲ ತಕ್ಷಣಕ್ಕೆ ಕಸ್ಟಡಿಯಲ್ಲಿ ವಿಚಾರಣೆ ಅಗತ್ಯವೇ ಅಥವಾ ಇಲ್ಲವೇ ಎನ್ನುವ ಅಂಶವನ್ನು ಮಾತ್ರ. ಸದ್ಯಕ್ಕೆ ಇದು ಕಸ್ಟಡಿ ವಿಚಾರಣೆಯ ಪ್ರಕರಣವಲ್ಲ ಎನ್ನುವುದು ನ್ಯಾಯಾಲಯದ ಭಾವನೆ. ಅವರು ವಿಚಾರಣೆಗೆ ಹಾಜರಾಗುವಂತೆ ಹಾಗೂ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಸೂಚಿಸುತ್ತೇವೆ. ಇವು ಎನ್‌ಡಿಪಿಎಸ್, ಸ್ಮಗ್ಲಿಂಗ್, ಅಸ್ತಿ ಕಳ್ಳತನದ ಪ್ರಕರಣಗಳಲ್ಲ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16,500 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾನೆ.

Thu Feb 16 , 2023
ಅಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16,500 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾನೆ. 160 ರೂಪಾಯಿ ನೀಡಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಈ ಬಂಪರ್ ಬಹುಮಾನ ಬಂದಿದೆ. ಎಡ್ವಿನ್ ಕ್ಯಾಸ್ಟ್ರೋ ಎಂಬಾತನೇ ಈ ಅದೃಷ್ಟವಂತನಾಗಿದ್ದು, ತನಗೆ ಬಹುಮಾನದ ಹಣವನ್ನು ಕೂಡಲೇ ನೀಡುವಂತೆ ಈತ ಕೇಳಿರುವ ಕಾರಣ ಬಂಪರ್ ಬಹುಮಾನದ ಅರ್ಧ ಅಂದರೆ 8 ಸಾವಿರ ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾನೆ. ಲಾಟರಿ ಸಂಸ್ಥೆಯ ನಿಯಮದಂತೆ ಪೂರ್ಣ ಮೊತ್ತವನ್ನು […]

Advertisement

Wordpress Social Share Plugin powered by Ultimatelysocial