ಯಳಂದೂರು ತಾಲ್ಲೂಕಿನ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವೈಕುಂಠ ಏಕಾದಶಿಯನ್ನು ಭಕ್ತಿ.

ಯಳಂದೂರು ತಾಲ್ಲೂಕಿನ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವೈಕುಂಠ ಏಕಾದಶಿಯನ್ನು ಭಕ್ತಿ,ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು…..

ಯಳಂದೂರು ಪಟ್ಟಣ ಸುವರ್ಣ ತಿರುಮಲ ಶ್ರೀನಿವಾಸ ಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿಯ ಹಿನ್ನೆಲೆ ಹರಿದು ಬಂದ ಜನ ಸಾಗರ….

ಪುರೋಹಿತರಾದ ಅನಂತ ಪದ್ಮನಾಭ ರವರು ಮಾತನಾಡಿ ಹಿಂದು ಪುರಾಣಗಳ ಪ್ರಕಾರ, ವೈಕುಂಠ ಏಕಾದಶಿಯ ಈ ಪವಿತ್ರ ದಿನದಂದು ಸಾಗರ ಮಂಥನವನ್ನು ನಡೆಸಲಾಯಿತು.ಈ ಸಾಗರ ಮಂಥನದ ಸಮಯದಲ್ಲಿ, ಕ್ಷೀರ ಸಾಗರದಿಂದ ದೈವಿಕ ಅಮೃತವು ಹೊರಹೊಮ್ಮಿತು, ಅದನ್ನು ದೇವರುಗಳ ನಡುವೆ ವಿತರಿಸಲಾಯಿತು. ಆದ್ದರಿಂದ ಈ ಮಂಗಳಕರ ದಿನದಂದು ಸಾಯುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಸ್ವರ್ಗೀಯ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂಬುದು ಹಿಂದು ಭಕ್ತರ ನಂಬಿಕೆಯಾಗಿದೆ ಎಂದರು…..

ಭಕ್ತರಾದ ಮಹೇಶ್ ರವರು ಮಾತನಾಡಿ
ಸಾಮಾನ್ಯವಾಗಿ ಏಕಾದಶಿ ವ್ರತಾಚರಣೆಯಿಂದ ವ್ಯಕ್ತಿಯ ಆಧ್ಯಾತ್ಮಿಕ, ಮಾನಸಿಕ ಮತ್ತು ಶಾರೀರಿಕ ಶುದ್ಧಿಯನ್ನು ನಿರೀಕ್ಷಿಸಲಾಗುತ್ತದೆ. ಈ ವ್ರತಾಚರಣೆ ಅಷ್ಟು ಶಕ್ತಿಶಾಲಿ. ಶರೀರ ಮತ್ತು ಆತ್ಮಕ್ಕೆ ಶಕ್ತಿ ತುಂಬುವ ಪ್ರಕ್ರಿಯೆ. ಧಾರ್ಮಿಕ ನಂಬಿಕೆಯ ಪ್ರಕಾರ ಹೇಳುವುದಾದರೆ, ನಿತ್ಯ ಬದುಕಿನಲ್ಲಿ ಸಾಕಷ್ಟು ಲೋಪದೋಷಗಳು, ತಪ್ಪುಗಳಾಗಿರುತ್ತವೆ. ಅದನ್ನು ನಿವಾರಿಸಲು ಈ ವ್ರತಾಚರಣೆ ಒಂದು ಪರಿಹಾರ ಕ್ರಮ. ಭಗವಾನ್‌ ಶ್ರೀಹರಿಯು ಈ ವ್ರತಾಚರಣೆ ಮಾಡುವ ತನ್ನ ಭಕ್ತರ ಎಲ್ಲ ಪಾಪಗಳನ್ನು ನಿವಾರಿಸಿ ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ ಎಂದರು….

ಭಕ್ತ ಮಂಡಳಿಯ ಸೇತು ಮಾಧವ, ಸಂತೋಷ್,ಮುರುಳಿ ಕೃಷ್ಣ, ಸೂರ್ಯನಾರಾಯಣ, ವೇದಾಚರ್ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಾರಾಯಿ ಅಂಗಡಿ ತೆರಲು ವಿರೋದಿಸಿದ ನಿವಾಸಿಗಳು.

Mon Jan 2 , 2023
ಸಾರಾಯಿ ಅಂಗಡಿ ತೆರಲು ವಿರೋದಿಸಿದ ನಿವಾಸಿಗಳು ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಶೆರಶೂರಿ ಓಣಿಯ ನಿವಾಸಿಗಳ ಒತ್ತಾಯ. ಲಕ್ಷ್ಮೇಶ್ವರದ ಸವಣೂರು ರಸ್ತೆಗೆ ಹೊಂದಡಿರುವ ಸಂಗಮ ಹೋಟೆಲ್ ಮತ್ತು ಲಾಡ್ಜಿಂಗ ಗೆ ಮತ್ತಿಗೆ ಹಾಕಿದ ಮಹಿಳೆಯರು. ಇಂದು ಸಂಗಮ ಹೋಟೆಲ್ ಮತ್ತು ಲಾಡ್ಜಿಂಗ ಪ್ರಾರಂಭ ಇರುವುದರಿಂದ ಮಹಿಳೆಯರ ಮುತ್ತಿಗೆ. ನಮ್ಮ ಓಣಿ ಸುತ್ತಮುತ್ತು ಯಾವುದೇ ಸಾರಾಯಿ ಅಂಗಡಿಗಳನ್ನು ತೆರೆಯಬಾರದು ಎಂದು ನಿವಾಸಿಗಳ ಆಗ್ರಹ. ಸಾರಾಯಿ ಕುಡಿದು ತುಂಬಾ ಮಕ್ಕಳ ಹಾಳಾಗುತ್ತಿದ್ದಾರೆ ಎಂದು […]

Advertisement

Wordpress Social Share Plugin powered by Ultimatelysocial