ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

 

ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆಗೆ  ಶರಣಾಗಿರುವ ಘಟನೆ ಸಾಗರ ತಾಲೂಕಿನ ದಿಗಟೆಕೊಪ್ಪ ಗ್ರಾಮದಲ್ಲಿ ನಡೆದಿದೆ.ದಿಗಟೆಕೊಪ್ಪ ಗ್ರಾಮದ 23 ವರ್ಷದ ಸುಶ್ಮಿತಾ ನೇಣಿಗೆ ಶರಣಾದ ಗೃಹಿಣಿ.ಕಳೆದ ಏಳು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಸುಷ್ಮಿತಾ ಮನೆಯ ಶೌಚಗೃಹದಲ್ಲಿ ವೇಲ್‌ನಿಂದ ನೇಣಿಗೆ ಶರಣಾಗಿದ್ದಾರೆ.ಈ ಸಂಬಂಧ ಪತಿ ಹಾಗೂ ಅತ್ತೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನ ಮಗಳಿಗೆ ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತಳ ತಂದೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಬಿಸಿ ೩ಎ ಮೀಸಲಾತಿ ಹೊಂದಿದ್ದ ಒಕ್ಕಲಿಗರಿಗೆ 2ಸಿ ಹಾಗೂ ೩ಬಿ ಮೀಸಲಾತಿ ಹೊಂದಿದ್ದ ಪಂಚಮಸಾಲಿ ಸಮುದಾಯಕ್ಕೆ 2ಡಿ ಎಂದು ರಾಜ್ಯ ಸರ್ಕಾರ ಹೊಸದಾಗಿ ಪ್ರವರ್ಗ ಸೃಷ್ಟಿಸಿದೆ. ಈ ಬಗ್ಗೆ ನಮಗೆ ಪೂರ್ಣ ಮಾಹಿತಿ ಸಿಕ್ಕಿಲ್ಲ. ಮೀಸಲಾತಿ (Reservation) ಶೇಕಡಾ ಇಂತಿಷ್ಟೇ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಎಲ್ಲಿಂದ ಕೊಡುತ್ತಾರೆ ಎಂದು ತೀರ್ಮಾನವಾಗಿಲ್ಲ. ಈ ಮೀಸಲಾತಿ ಪರಿಷ್ಕರಣೆ ಎಲೆಕ್ಷನ್‌ ಗಿಮಿಕ್‌ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಪಂಚಮಸಾಲಿ, ಒಕ್ಕಲಿಗರ ಒಬಿಸಿ ಮೀಸಲಾತಿ ಪರಿಷ್ಕರಣೆ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಸೃಜಿಸಿರುವ ಪ್ರವರ್ಗಗಳಿಗೆ ಮೀಸಲಾತಿ ಎಲ್ಲಿಂದ ಕೊಡುತ್ತಾರೆ. ಇಡಬ್ಲ್ಯುಎಸ್‌ನಿಂದ ಅಥವಾ ಜನರಲ್ ಕೆಟಗರಿಯಿಂದ ತೆಗೆದುಕೊಳ್ಳಬೇಕಾ ಎಂಬುದು ತೀರ್ಮಾನವಾಗಿಲ್ಲ ಎಂದು ತಿಳಿಸಿದರು.1992ರಲ್ಲಿ ಸುಪ್ರೀಂಕೋರ್ಟ್ 9 ನ್ಯಾಯಾಧೀಶರ ಪೀಠ, ಮೀಸಲಾತಿ ಶೇ.50 ಮೀರಬಾರದು ಎಂದು ತೀರ್ಪು ನೀಡಿತ್ತು. ಕೇಂದ್ರದಿಂದ ಈಗಾಗಲೇ 49.5 ರಷ್ಟು ಮೀಸಲಾತಿ ಇದೆ. ಆದರೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್‌) ಶೇ.೧೦ ಮೀಸಲಾತಿ ಕೊಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಮೋದರ ವ್ಯಾಲಿ ಕಾರ್ಪೋರೇಷನ್‌ನಲ್ಲಿ ಗ್ರಾಜುಯೇಟ್‌ ಇಂಜಿನಿಯರ್‌ಗಳ ನೇಮಕ

Fri Dec 30 , 2022
  ದಾಮೋದರ ವ್ಯಾಲಿ ಕಾರ್ಪೋರೇಷನ್‌ (ಡಿವಿಸಿ) ಗ್ರಾಜುಯೇಟ್‌ ಇಂಜಿನಿಯರ್ ಟ್ರೈನಿ ಪೋಸ್ಟ್‌ಗಳ ಭರ್ತಿಗೆ ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ಎರಡು ದಿನಗಳಷ್ಟೇ ಬಾಕಿ ಇವೆ. ಈ ಹುದ್ದೆಗಳಲ್ಲಿ ಆಸಕ್ತಿ ಇದ್ದು, ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಕೊನೆ ಕ್ಷಣದವರೆಗೆ ಬೇಗ ಬೇಗ ಅರ್ಜಿ ಸಲ್ಲಿಸಿ. ಡಿವಿಸಿ ನೋಟಿಫಿಕೇಶನ್‌ ಪ್ರಕಾರ ಆನ್‌ಲೈನ್‌ ಅರ್ಜಿಗೆ ಡಿಸೆಂಬರ್ 31 ಕೊನೆ ದಿನವಾಗಿದೆ. ಈ ಹುದ್ದೆಗಳಿಗೆ ಅರ್ಹತೆ, ಪ್ರಮುಖ […]

Advertisement

Wordpress Social Share Plugin powered by Ultimatelysocial