ಭಗವಾನ್​​ರ ‘ಸ್ನೇಹ ಗುಣ’ ನೆನೆದು ಭಾವುಕರಾದ ಹಿರಿಯ ನಟ ಶ್ರೀನಾಥ್!

ಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಿರ್ದೇಶಕ ಭಗವಾನ್ (90) ಇನ್ನು ನೆನಪು ಮಾತ್ರ. ಅವರ ಅಗಲಿಕೆ ಸುದ್ದಿ ತಿಳಿದು ಸ್ಯಾಂಡಲ್​​ವುಡ್​ನ ಹಿರಿಯ ನಟ ಶ್ರೀನಾಥ್ ಕಂಬನಿ ಮಿಡಿದಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಅವರು.. ಭಗವಾನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಕನ್ನಡ ಸಿನಿಮಾ ರಂಗಕ್ಕೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಚಿತ್ರರಂಗದಲ್ಲಿ ಅವರು ಎಷ್ಟೇ ದೊಡ್ಡವರಾಗಿದ್ದರೂ ತುಂಬಾ ಸ್ನೇಹ ಜೀವಿಯಾಗಿದ್ದರು ಅಂತಾ ತಿಳಿಸಿದರು.

ಒಬ್ಬರ ಮನಸ್ಸನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ಎಲ್ಲಾ ವಿಚಾರಗಳನ್ನೂ ತುಂಬಾ ಓದುತ್ತಿದ್ದರು. ಅದೆಷ್ಟೋ ಕನ್ನಡ ಚಿತ್ರರಂಗದ ಕಲಾವಿದರಿಗೆ ಭಗವಾನ್ ಜೊತೆ ಕೆಲಸ ಮಾಡಲು ಆಗಿರಲಿಲ್ಲ. ಅಂತಹ ಅದೆಷ್ಟೋ ಕಲಾವಿದರು ಭಗವಾನ್​ ಅವರನ್ನು ಗುರು ಎಂದು ಸ್ವೀಕರಿಸಿದ್ದರು. ಸದಾ ನಗು ಮುಖದ ವ್ಯಕ್ತಿ ಅವರದ್ದಾಗಿತ್ತು. ಇಂದು ನಮ್ಮನ್ನು ಅಗಲಿದ್ದಾರೆ. ಕನ್ನಡ ಸಿನಿಮಾ ರಂಗದ ಹಿರಿಯ ಕೊಂಡಿಯೊಂದು ಕಳಚಿದೆ. ತುಂಬಾ ನೋವಾಗಿದೆ ಎಂದು ಶ್ರೀನಾಥ್ ದುಃಖ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ದೊರೆ ಭಗವಾನ್ ನಿಧನ!

Mon Feb 20 , 2023
ಸ್ಯಾಂಡಲ್ವುಡ್ನಹಿರಿಯನಿರ್ದೇಶಕಎಸ್.ಕೆ. ಭಗವಾನ್ನಿಧನರಾಗಿದ್ದಾರೆ. ವಯೋಸಹಜಕಾಯಿಲೆಯಿಂದಬಳಲುತ್ತಿದ್ದಭಗವಾನ್ ಚಿಕಿತ್ಸೆಫಲಕಾರಿಯಾಗದೇಕೊನೆಯುಸಿರೆಳೆದಿದ್ದಾರೆ. ಕನ್ನಡಸಿನಿಮಾರಂಗದಲ್ಲಿದೊರೈಭಗವಾನ್ಎಂದೇಜೋಡಿಖ್ಯಾತಿಯಾಗಿತ್ತು. ಈಗಾಗಲೇದೊರೆನಿಧನರಾಗಿದ್ದು, ಅವರನ್ನು ಅರಸಿಕೊಂಡು ಭಗವಾನ್ ಹೊರಟಿದ್ದಾರೆ . ಶ್ರೀನಿವಾಸ್ಕೃಷ್ಣಅಯ್ಯಂಗಾರ್ಭಗವಾನ್ಭಗವಾನ್ ಪೂರ್ಣಹೆಸರು. 1933ರಲ್ಲಿಮೈಸೂರಿನತಮಿಳುಅಯ್ಯಂಗಾರ್ಕುಟುಂಬದಲ್ಲಿಜನಿಸಿದ್ದಇವರು, ರಂಗಭೂಮಿಹಿನ್ನೆಲೆಯುಳ್ಳವರು. ಕಾಲೇಜುದಿನಗಳಲ್ಲಿರಂಗಭೂಮಿಯಸಾಕಷ್ಟುಚಟುವಟಿಕೆಗಳಲ್ಲಿತೊಡಗಿಕೊಂಡವರು. 1956ರಲ್ಲಿಕಣಗಾಲ್ಪ್ರಭಾಕರಶಾಸ್ತ್ರಿಗಳಿಗೆಸಹಾಯಕನಿರ್ದೇಶಕರಾಗಿಸಿನಿಮಾರಂಗಕ್ಕೆಪ್ರವೇಶಮಾಡಿದವರು. 1966ರಲ್ಲಿತೆರೆಕಂಡಸಂಧ್ಯಾರಾಗಚಿತ್ರದಮೂಲಕಸಹಾಯಕನಿರ್ದೇಶಕರಾಗಿಭಡ್ತಿಪಡೆದವರು. ನಂತರನಿರ್ದೇಶಕದೊರೈರಾಜ್ಜೊತೆಗೂಡಿಸ್ವತಂತ್ರನಿರ್ದೇಶಕರಾದವರು. 1993ರಲ್ಲಿದೊರೈರಾಜ್ನಿಧನದನಂತರಒಂಟಿಯಾದರುಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನುಈಜೋಡಿನಿರ್ದೇಶನಮಾಡಿದ್ದುವಿಶೇಷ. ಈಜೋಡಿಯಮತ್ತೊಂದುದಾಖಲೆಯೆಂದರೆ 24 ಕಾದಂಬರಿಆಧರಿಸಿದಸಿನಿಮಾಗಳನ್ನುಈಜೋಡಿನಿರ್ದೇಶನಮಾಡಿದೆ. ಕನ್ನಡದಅಷ್ಟೂಸೂಪರ್ಸ್ಟಾರ್ಸಿನಿಮಾಗಳಿಗೆನಿರ್ದೇಶನಮಾಡಿದಹೆಗ್ಗಳಿಕೆಈಜೋಡಿಯದ್ದು. ಜೇಡರಬಲೆ, ಕಸ್ತೂರಿನಿವಾಸ, ಎರಡುಕನಸು, ಬಯಲುದಾರಿ, ಗಿರಿಕನ್ಯೆ, ಚಂದನದಗೊಂಬೆ, ಜೀವನಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನಮಾದರಿಸೇರಿದಂತೆ ಇನ್ನೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial