ವಿಚ್ಛೇದನಗೊಂಡ ನಟ – ನಟಿಯರನ್ನು ಈ ವಿಷಯದಲ್ಲಿ ಮೆಚ್ಚಲೇಬೇಕು.!

ಬಾಲಿವುಡ್ ಚಿತ್ರರಂಗದಲ್ಲಿ ವಿಚ್ಛೇದನ ಮರುಮದುವೆ ಹೊಸ ಸಂಗತಿಯೇನು ಅಲ್ಲ. ಆದರೆ ತಂದೆ – ತಾಯಿ ಬೇರ್ಪಟ್ಟ ಸಂದರ್ಭದಲ್ಲಿ ಇದರ ಮೊದಲ ಪರಿಣಾಮವಾಗುವುದು ಮಕ್ಕಳ ಮೇಲೆ ಎಂಬುದು ಸತ್ಯಸಂಗತಿ. ಆದರೆ ಬಾಲಿವುಡ್ ಚಿತ್ರರಂಗದಲ್ಲಿ ಬೇರ್ಪಟ್ಟ ಕೆಲ ಜೋಡಿಗಳು ಮಕ್ಕಳ ಸಲುವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ.ನಟ ಅಮೀರ್ ಖಾನ್ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಕಿರಣ್ ರಾವ್ ಅವರನ್ನು ಕೈಹಿಡಿದಿದ್ದರು. ಇದೀಗ ಕಿರಣ್ ರಾವ್ ಅವರಿಂದಲೂ ಅಮೀರ್ ವಿಚ್ಛೇದನ ಪಡೆದುಕೊಂಡಿದ್ದು, ಆದರೆ ಇಂದಿಗೂ ಮೊದಲ ಹಾಗೂ ದ್ವಿತೀಯ ಮಾಜಿ ಪತ್ನಿ ಜೊತೆ ಆತ್ಮೀಯತೆ ಹೊಂದಿದ್ದಾರೆ. ಜೊತೆಗೆ ಹುಟ್ಟುಹಬ್ಬ ಸೇರಿದಂತೆ ಇತರೆ ಕುಟುಂಬದ ಕಾರ್ಯಕ್ರಮಗಳಲ್ಲಿ ಮಕ್ಕಳು ಮತ್ತು ಮಾಜಿ ಪತ್ನಿಯರೊಂದಿಗೆ ಕಾಣಿಸಿಕೊಳ್ಳುತ್ತಾರೆ.

ಇನ್ನು ನಟ ಹೃತಿಕ್ ರೋಷನ್ ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ಸೊಸೈನೆ ಖಾನ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರೂ ಸಹ ಈ ಬೇರ್ಪಟ್ಟ ಜೋಡಿ ಈಗಲೂ ಸಹ ಮಕ್ಕಳೊಂದಿಗೆ ಒಟ್ಟಿಗೆ ಊಟಕ್ಕೆ ಹೋಗುವುದು, ಕುಟುಂಬದ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮಾಡುತ್ತಾರೆ.

ಹಾಗೆ ಅರ್ಬಾಜ್ ಖಾನ್ ಹಾಗೂ ಮಲೈಕ ಅರೋರ ವಿಚ್ಛೇದನ ಪಡೆದುಕೊಂಡಿದ್ದರೂ ಸಹ ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ವೇಳೆ ಅಥವಾ ಕುಟುಂಬ ಕಾರ್ಯಕ್ರಮದ ಸಂದರ್ಭದಲ್ಲಿ ಮಕ್ಕಳ ಜೊತೆ ಒಟ್ಟಿಗೆ ಇರುತ್ತಾರೆ. ರೀತಿ ಬಾಲಿವುಡ್ ನ ಹಲವು ಬೇರ್ಪಟ್ಟ ಜೋಡಿ ಮಕ್ಕಳ ಸಲುವಾಗಿ ತಮ್ಮ ತಮ್ಮ ಮಾಜಿ ಪತಿ-ಪತ್ನಿಯೊಂದಿಗೆ ಕಾಣಿಸಿಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನಿರೋದೇ ಹೀಗೆ ನೋಡಿ! ಖಾಸಗಿ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

Mon May 16 , 2022
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯ ಮದುವೆಯಲ್ಲಿ ಪಾಲ್ಗೊಂಡ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪಟ ಕೊಡವ ಸೀರೆಯಲ್ಲಿ ಮಿಂಚಿರುವ ರಶ್ಮಿಕಾ ತಮ್ಮ ಹಳೆಯ ಗೆಳತಿಯರೊಂದಿಗೆ ಫೋಟೋಗೆ ಪೋಸ್ ಕೊಟ್ಟು ಖುಷಿಪಟ್ಟಿದ್ದಾರೆ. ವಿಮಾನ ನಿಧಾನವಾದರೂ ಬೆಳಗಿನ ಜಾವವೇ ಕಷ್ಟಪಟ್ಟು ಮದುವೆಯಲ್ಲಿ ಪಾಲ್ಗೊಳ್ಳಲು ಬಂದೆ. ನನ್ನ ಗೆಳತಿ ಮದುವೆಯಲ್ಲಿ ಪಾಲ್ಗೊಂಡು ಹಳೆಯ ಗೆಳತಿಯರನ್ನೆಲ್ಲಾ ಭೇಟಿ ಮಾಡಿದೆ ಎಂದಿದ್ದಾರೆ ರಶ್ಮಿಕಾ. ರಶ್ಮಿಕಾಗೆ ಜಂಬ ಜಾಸ್ತಿ ಎನ್ನುವವರಿದ್ದಾರೆ. ಆದರೆ ಈ […]

Advertisement

Wordpress Social Share Plugin powered by Ultimatelysocial