ವಿಜಯಪುರ…. *ನಾಗಠಾಣದಲ್ಲಿ ಪವಾಡ ಪುರುಷ ಗೂಳಪ್ಪ ಮುತ್ಯಾನ ಜಾತ್ರೆ

ನಾಗರ ಅಮಾವಾಸ್ಯೆ ದಿನದಂದು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪವಾಡ ಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು. ಡೊಳ್ಳಿನ ವಾಲಗದೊಂದಿಗೆ ಭೀರಸಿದ್ದೇಶ್ವರ, ಕಗ್ಗೊಡದ
ತಿಪರಾಯ ದೇವರ, ಲಾಯಮ್ಮ ದೇವಿ, ತಿಡಗುಂದಿಯ ಭೀರಲಿಂಗೇಶ್ವರ ದೇವರ, ಮಾಳಿಂಗರಾಯ ದೇವರ ಪಲ್ಲಕ್ಕಿಗಳು ಭಕ್ತರ ಜಯಘೋಷಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ, ಗಂಗಾ ಪೂಜೆ ನೆರವೇರಿಸಲಾಯಿತು.ನಂತರ ಬಜಾರದ ನಡುಕಟ್ಟೆಯ ಮೇಲೆ ಎಲ್ಲ ಪಲ್ಲಕ್ಕಿಗಳನ್ನಿರಿಸುವರು.
ಹಿರಿಯರು,ಮಹಿಳೆಯರು, ಮಕ್ಕಳಾದಿಯಾಗಿ ಅಲ್ಲಿಗೆ ಬಂದು ನೈವೇದ್ಯ ಸಲ್ಲಿಸಿ,ಕಾಯಿ ಕರ್ಪುರ ಸಲ್ಲಿಸುವದು ಸಾಮಾನ್ಯ ದೃಶ್ಯವಾಗಿತ್ತು.
ಅಲ್ಲಿ ಎಲ್ಲ ಭಕ್ತರಿಗೆ ದರ್ಶನ ಭಾಗ್ಯ ಸಿಗುವದು. ಅಲ್ಲಿ ಬಳಗಾನೂರ,ಸಾರವಾಡ ಗ್ರಾಮದ ಯುವಕರು ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಜನಮನ ಗೆದ್ದರು. ಇದೇ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಗಳನ್ನು ತೀರಿಸುವರು. ಎಲ್ಲ ಧರ್ಮಿಯರು ಒಂದಾಗಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವದು ಗ್ರಾಮದ ವಿಶೇಷವಾಗಿದೆ. ಬೇರೆ ಬೇರೆ ಗ್ರಾಮ,ಜಿಲ್ಲೆ,ರಾಜ್ಯಗಳಿಂದ ಭಕ್ತರು ಜಾತ್ರೆಗೆ ಬರುವರು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಜಾತ್ರೆಯು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಗೊಂಬೆ ಕುಣಿತ,ಕರಡಿ ಮಜಲುದಂತಹ ಅನೇಕ ಪ್ರದರ್ಶನಗಳು ಜನರನ್ನು ಆಕರ್ಷಿಸಿದವು. ಭಾರ ಎತ್ತುವ ಸ್ಪರ್ಧೆ ಮೈನವಿರೇಳಿಸುವಂತೆ ನಡೆಯಿತು.ಅಪ್ಪಟ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಈ ಜಾತ್ರೆಯು ಗೂಳಪ್ಪ ಮುತ್ಯಾ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಜಾತ್ರೆಗೆ ಬರುವ ಎಲ್ಲ ಭಕ್ತರಿಗೂ ಅನ್ನ ಪ್ರಸಾದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತದೆ.ನಿರಂತರವಾಗಿ ವಿವಿಧ ತಂಡಗಳಿಂದ ಡೊಳ್ಳಿನ ಹಾಡಿಕೆಗಳು ನಡೆದು,ಜನರನ್ನು ತನ್ನತ್ತ ಸೆಳೆಯುತ್ತದೆ.
ಭಕ್ತರು ದೇವರಲ್ಲಿ ಮಳೆ-ಬೆಳೆಯ ಕುರಿತು ಹೇಳಿಕೆ ಕೇಳುವದು ಪ್ರತಿವರ್ಷದ ರೂಢಿಯಾಗಿದೆ. ಅನೇಕ ಪವಾಡಗಳನ್ನು ಮಾಡಿದ ಗೂಳಪ್ಪ ಮುತ್ಯಾ ಜನರ ಆರಾಧ್ಯ ದೇವರಾಗಿದ್ದಾರೆ.ನಾಗಠಾಣದಲ್ಲಿ ಪವಾಡ ಪುರುಷ ಗೂಳಪ್ಪ ಮುತ್ಯಾನ ಜಾತ್ರೆ

ನಾಗರ ಅಮಾವಾಸ್ಯೆ ದಿನದಂದು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪವಾಡ ಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು. ಡೊಳ್ಳಿನ ವಾಲಗದೊಂದಿಗೆ ಭೀರಸಿದ್ದೇಶ್ವರ, ಕಗ್ಗೊಡದ
ತಿಪರಾಯ ದೇವರ, ಲಾಯಮ್ಮ ದೇವಿ, ತಿಡಗುಂದಿಯ ಭೀರಲಿಂಗೇಶ್ವರ ದೇವರ, ಮಾಳಿಂಗರಾಯ ದೇವರ ಪಲ್ಲಕ್ಕಿಗಳು ಭಕ್ತರ ಜಯಘೋಷಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ, ಗಂಗಾ ಪೂಜೆ ನೆರವೇರಿಸಲಾಯಿತು.ನಂತರ ಬಜಾರದ ನಡುಕಟ್ಟೆಯ ಮೇಲೆ ಎಲ್ಲ ಪಲ್ಲಕ್ಕಿಗಳನ್ನಿರಿಸುವರು.
ಹಿರಿಯರು,ಮಹಿಳೆಯರು, ಮಕ್ಕಳಾದಿಯಾಗಿ ಅಲ್ಲಿಗೆ ಬಂದು ನೈವೇದ್ಯ ಸಲ್ಲಿಸಿ,ಕಾಯಿ ಕರ್ಪುರ ಸಲ್ಲಿಸುವದು ಸಾಮಾನ್ಯ ದೃಶ್ಯವಾಗಿತ್ತು.
ಅಲ್ಲಿ ಎಲ್ಲ ಭಕ್ತರಿಗೆ ದರ್ಶನ ಭಾಗ್ಯ ಸಿಗುವದು. ಅಲ್ಲಿ ಬಳಗಾನೂರ,ಸಾರವಾಡ ಗ್ರಾಮದ ಯುವಕರು ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಜನಮನ ಗೆದ್ದರು. ಇದೇ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಗಳನ್ನು ತೀರಿಸುವರು. ಎಲ್ಲ ಧರ್ಮಿಯರು ಒಂದಾಗಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವದು ಗ್ರಾಮದ ವಿಶೇಷವಾಗಿದೆ. ಬೇರೆ ಬೇರೆ ಗ್ರಾಮ,ಜಿಲ್ಲೆ,ರಾಜ್ಯಗಳಿಂದ ಭಕ್ತರು ಜಾತ್ರೆಗೆ ಬರುವರು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಜಾತ್ರೆಯು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಗೊಂಬೆ ಕುಣಿತ,ಕರಡಿ ಮಜಲುದಂತಹ ಅನೇಕ ಪ್ರದರ್ಶನಗಳು ಜನರನ್ನು ಆಕರ್ಷಿಸಿದವು. ಭಾರ ಎತ್ತುವ ಸ್ಪರ್ಧೆ ಮೈನವಿರೇಳಿಸುವಂತೆ ನಡೆಯಿತು.ಅಪ್ಪಟ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಈ ಜಾತ್ರೆಯು ಗೂಳಪ್ಪ ಮುತ್ಯಾ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಜಾತ್ರೆಗೆ ಬರುವ ಎಲ್ಲ ಭಕ್ತರಿಗೂ ಅನ್ನ ಪ್ರಸಾದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತದೆ.ನಿರಂತರವಾಗಿ ವಿವಿಧ ತಂಡಗಳಿಂದ ಡೊಳ್ಳಿನ ಹಾಡಿಕೆಗಳು ನಡೆದು,ಜನರನ್ನು ತನ್ನತ್ತ ಸೆಳೆಯುತ್ತದೆ.
ಭಕ್ತರು ದೇವರಲ್ಲಿ ಮಳೆ-ಬೆಳೆಯ ಕುರಿತು ಹೇಳಿಕೆ ಕೇಳುವದು ಪ್ರತಿವರ್ಷದ ರೂಢಿಯಾಗಿದೆ. ಅನೇಕ ಪವಾಡಗಳನ್ನು ಮಾಡಿದ ಗೂಳಪ್ಪ ಮುತ್ಯಾ ಜನರ ಆರಾಧ್ಯ ದೇವರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಕೈಲಾಗಲ್ಲ ಎಂದರೆ ಬಿಟ್ಟು ಹೋಗಿ ನಾವು ನೋಡ್ಕೋತೀವಿ -ಪ್ರಿಯಾಂಕ್ ಖರ್ಗೆ

Thu Jul 28 , 2022
  ತೇಜಸ್ವಿ ಸೂರ್ಯ ಹೇಳ್ತಾರೆ ಹರ್ಷ ಕೊಲೆ ಆಯ್ತು,ಈಗ ಪ್ರವೀಣ್ ಕೊಲೆಯಾಗಿದೆ ಯಾವಾಗ ನಿಲ್ಲುತ್ತದೆ ಎಂದು ಕೇಳಿದ್ದೀರಿ.ನಿಮ್ಮ ಸರ್ಕಾರಗಳೇ ಇವೆಯಲ್ಲಾ ಯಾಕೆ ತಡೆಯಲಿ ಕ್ಕಾಗುತ್ತಿಲ್ಲ. ಖಾಕಿಗೆ ನೀವೆ ಗೌರವ ಕೊಡುತ್ತಿಲ್ಲ.ಕಳ್ಳರಿಗೆ ನೀವೇ ಬೆಂಬಲ ಕೊಡ್ತಿದ್ದೀರಿ. ಕಾನೂನು ಬಗ್ಗೆ ಗೌರವ, ಭಯ ಯಾರಿಗೆ ಬರುತ್ತದೆ. ಇಂಟಲಿಜೆನ್ಸ್ ಇಲಾಖೆ ಏನು ಮಾಡ್ತಿದ್ದಾರೆ ಕತ್ತೆ ಕಾಯ್ತಾ ಇದ್ರಾ…!! ಕಾಂಗ್ರೆಸ್ ಸರ್ಕಾರ ಇದ್ದಾಗ ೧೫೦೦ ಕೇಸ್ ಗಳನ್ನು ಹಿಂಪಡದಿದೆ ಎಂದು ಆರೋಪಿಸಿದ್ದಾರೆ. ನಾನೂ ಬಹಿರಂಗ ಸವಾಲು […]

Advertisement

Wordpress Social Share Plugin powered by Ultimatelysocial