VIJAYDEVARKONDA:ಮೈಕ್ ಟೈಸನ್, ಪಾಂಡೆ ಅಭಿನಯದ ಲೈಗರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ;

ಮುಂಬಯಿ: ನಟ ವಿಜಯ್ ದೇವರಕೊಂಡ, ಮೈಕ್ ಟೈಸನ್ ಹಾಗೂ ನಟಿ ಅನನ್ಯ ಪಾಂಡೆ ನಟಿಸಿರುವ ಲೈಗರ್ ಸಿನಿಮಾ 2022ರ ಆಗಸ್ಟ್ 25ರಂದು ವಿಶ್ವಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಗುರುವಾರ(ಡಿಸೆಂಬರ್ 16) ಘೋಷಿಸಿದೆ.

ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಜಗತ್ತಿನಾದ್ಯಂತ ಥಿಯೇಟರ್ ನಲ್ಲಿ 2022ರ ಆಗಸ್ಟ್ 25ರಂದು ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

“ಸಾಹಸ, ಕುತೂಹಲ ಹಾಗೂ ಹುಚ್ಚುತನ”.ಹೀಗೆ ಪೋಸ್ಟರ್ ಗೆ ಅಡಿಬರಹ ನೀಡಿರುವ ಕರಣ್ ಜೋಹರ್, ಲೈಗರ್ ಮುಂದಿನ ವರ್ಷ ಆಗಸ್ಟ್ 25ರಂದು ತೆರೆಕಾಣಲಿದ್ದು, ಡಿಸೆಂಬರ್ 31ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಭರ್ಜರಿ ಧಮಾಕದೊಂದಿಗೆ ನಿಮ್ಮ ಹೊಸ ವರ್ಷ ಆರಂಭವಾಗಲಿ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

FACT:ಪುಷ್ಪದಲ್ಲಿ ಸಮಂತಾ ಹೈಲೈಟ್‌: ರಶ್ಮಿಕಾ ಕಸಿವಿಸಿ?

Wed Dec 29 , 2021
ಇತ್ತೀಚೆಗಷ್ಟೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿರುವ ನಟಿ ರಶ್ಮಿಕಾ ಮಂದಣ್ಣ ಈಗ “ಪುಷ್ಪ’ ಸಿನಿಮಾದ ಪ್ರಮೋಶನ್‌ನಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರ ಡಿ.17 ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಯಾಗಿ ದೊಡ್ಡ ಹಿಟ್‌ ಆಗಿದೆ. ಇದರ ಬೆನ್ನಿಗೆ ಬಂದ ಚಿತ್ರದ ಸ್ಪೆಷಲ್‌ ನಂಬರ್‌ ಸಾಂಗ್‌ ಕೂಡಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಈ ಹಾಡಿನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಖತ್‌ ಹಾಟ್‌ ಆಗಿ […]

Advertisement

Wordpress Social Share Plugin powered by Ultimatelysocial