ಸೂಟ್​ಕೇಸ್​ನಲ್ಲಿ ಪ್ರೇಯಸಿಯನ್ನು ತುಂಬಿಕೊಂಡು ಹಾಸ್ಟೆಲ್​ಗೆ ಕರೆತಂದ ವಿದ್ಯಾರ್ಥಿ! ವಿಡಿಯೋ ಸಖತ್​ ವೈರಲ್​

 

 

ಬೆಂಗಳೂರು: ವಿದ್ಯಾರ್ಥಿಯೊಬ್ಬ ದೊಡ್ಡ ಟ್ರಾವೆಲ್ ಬ್ಯಾಗ್​ನಲ್ಲಿ ತನ್ನ ಗೆಳೆತಿಯನ್ನ ತುಂಬಿಕೊಂಡು ಕಾಲೇಜು ಹಾಸ್ಟೆಲ್​ಗೆ ಬಂದಿದ್ದ. ಗೆಳೆಯನಿಗೆ ಹತ್ತಿರವಾಗಲು ಖುಷಿಯಿಂದಲೇ ಬ್ಯಾಗ್​ ಒಳಗೆ ಕೂತು ಯಾರಿಗೂ ಅನುಮಾನ ಬಾರದಂತೆ ಹಾಸ್ಟೆಲ್​ ರೂಂ ಒಳ ಹೋಗಲು ಯುವತಿಯೂ ಸಿದ್ಧವಾಗಿದ್ದಳು.ಇನ್ನೇನು ಒಳ ಹೋಗಬೇಕು ಅನ್ನುವಷ್ಟರಲ್ಲಿ ಆಗಿದ್ದೇ ಬೇರೆ!ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಹಾಸ್ಟೆಲ್ ಒಳಗೆ ಕರೆದುಕೊಂಡು ಹೋಗಲು ದೊಡ್ಡ ಟ್ರಾವೆಲ್ ಬ್ಯಾಗ್ ಅನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ. ಹಾಸ್ಟೆಲ್​ನಲ್ಲಿ ಯಾರಿಗೂ ಅನುಮಾನ ಬರುವುದಿಲ್ಲ. ಮೇಲ್ನೋಟಕ್ಕೆ ಬ್ಯಾಗ್​ನಲ್ಲಿ ಬಟ್ಟೆ ಅಥವಾ ಪುಸ್ತಕ ಇರಬೇಕು ಅಂದುಕೊಳ್ತಾರೆ ಎಂದು ಯುವತಿಯನ್ನ ಅದರಲ್ಲಿ ಕೂರಿಸಿಕೊಂಡು ಸಲೀಸಾಗಿ ಹಾಸ್ಟೆಲ್​ಗೆ ಬಂದಿದ್ದ. ಗೇಟ್​ನಲ್ಲಿ ಯುವಕನನ್ನು ತಡೆದ ಸೆಕ್ಯೂರಿಟಿ ಗಾರ್ಡ್​ಗಳು ಬ್ಯಾಗ್​ನಲ್ಲಿ ಏನಿದೆ? ಓಪನ್​ ಮಾಡು ಎಂದಿದ್ದಾರೆ.ಭಯಗೊಂಡ ಯುವಕ, ಬ್ಯಾಗ್​ ಸಮೇತ ಓಡಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಅನುಮಾನಗೊಂಡು ಸೂಟ್​ಕೇಸ್ ಓಪನ್​ ಮಾಡಿದ್ರೆ ಅದರಲ್ಲಿ ಯುವತಿ! ತಕ್ಷಣ ಯುವತಿ ಅಲ್ಲಿಂದ ಹೊರ ಹೋಗಿದ್ದಾಳೆ. ಈ ಎಲ್ಲ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.ಅಂದಹಾಗೆ ಇಂತಹ ವಿಲಕ್ಷಣ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್​ನಲ್ಲಿ ನಡೆದದ್ದು ಎನ್ನಲಾಗಿದೆ. ಆದರೆ, ಈ ವಿಡಿಯೋಗೂ ಮಣಿಪಾಲ್​ಗೂ ಸಂಬಂಧವಿಲ್ಲ. ಇದು 2019ರಲ್ಲಿ ಉತ್ತರಖಾಂಡ್​ನ ಡೆಹ್ರಾಡೂನ್​ನಲ್ಲಿ ನಡೆದ ಘಟನೆ. ಹಳೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೀನುಗಾರನನ್ನು ಮೂತಿಯಿಂದ ಚುಚ್ಚಿ ಕೊಂದ ಮಾರ್ಲಿನ್ ಮೀನು!

Thu Feb 3 , 2022
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕರಾವಳಿಯ ದೈತ್ಯ ಮೀನು ಮಾರ್ಲಿನ್ ತನ್ನ ಈಟಿಯಂತಹ ಮೂತಿಯಿಂದ ಚುಚ್ಚಿ ಮೀನುಗಾರನೊಬ್ಬನನ್ನು ಕೊಂದು ಹಾಕಿದೆ.ವಿಶಾಖಪಟ್ಟಣಂನ ದಕ್ಷಿಣದ ಪರವಾಡ ಪೊಲೀಸ್ ಠಾಣಾ ವ್ಯಾಪ್ತಿಯ ತೀರದಿಂದ 60 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ.ವಿಶಾಖಪಟ್ಟಣಂ ಜಿಲ್ಲೆಯ 40 ವರ್ಷದ ಮೊಳ್ಳಿ ಜೋಗಣ್ಣ ಎಂಬ ಮೀನುಗಾರ ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ 4 ಗಂಟೆಗೆ ಮೀನು ಹಿಡಿಯಲು ಆಳ ಸಮುದ್ರಕ್ಕೆ ಇಳಿದ ನಾಲ್ವರು ಮೀನುಗಾರರು, ಬುಧವಾರ […]

Advertisement

Wordpress Social Share Plugin powered by Ultimatelysocial