ಮೀನುಗಾರನನ್ನು ಮೂತಿಯಿಂದ ಚುಚ್ಚಿ ಕೊಂದ ಮಾರ್ಲಿನ್ ಮೀನು!

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕರಾವಳಿಯ ದೈತ್ಯ ಮೀನು ಮಾರ್ಲಿನ್ ತನ್ನ ಈಟಿಯಂತಹ ಮೂತಿಯಿಂದ ಚುಚ್ಚಿ ಮೀನುಗಾರನೊಬ್ಬನನ್ನು ಕೊಂದು ಹಾಕಿದೆ.ವಿಶಾಖಪಟ್ಟಣಂನ ದಕ್ಷಿಣದ ಪರವಾಡ ಪೊಲೀಸ್ ಠಾಣಾ ವ್ಯಾಪ್ತಿಯ ತೀರದಿಂದ 60 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ.ವಿಶಾಖಪಟ್ಟಣಂ ಜಿಲ್ಲೆಯ 40 ವರ್ಷದ ಮೊಳ್ಳಿ ಜೋಗಣ್ಣ ಎಂಬ ಮೀನುಗಾರ ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ 4 ಗಂಟೆಗೆ ಮೀನು ಹಿಡಿಯಲು ಆಳ ಸಮುದ್ರಕ್ಕೆ ಇಳಿದ ನಾಲ್ವರು ಮೀನುಗಾರರು, ಬುಧವಾರ ಬೆಳಗಿನ ಜಾವದವರೆಗೂ ಮೀನುಗಾರಿಕೆ ಮುಂದುವರಿಸಿದ್ದರು. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ, ಮೀನುಗಾರರ ಬಲೆಗೆ ಸುಮಾರು 70 ಕೆಜಿ ತೂಕದ ಮಾರ್ಲಿನ್ (ಸ್ಥಳೀಯ ಮೀನುಗಾರರು ಇದನ್ನು ಕೊಮ್ಮು ಕೋಣಂ ಎಂದು ಕರೆಯುತ್ತಾರೆ) ಬಿದ್ದಿದೆ. ಈ ಮೀನನ್ನು ತಮ್ಮ ದೋಣಿಗೆ ಎಳೆಯಲು ಸಾಧ್ಯವಾಗದ ಕಾರಣ, ಜೋಗಣ್ಣ ಇತರರಿಗೆ ಸಹಾಯ ಮಾಡಲು ಸಮುದ್ರಕ್ಕೆ ಹಾರಿದ್ದರು. ಆಗ ದೊಡ್ಡ ಗಾತ್ರದ ಮೀನು ಜೋಗಣ್ಣನ ಹೊಟ್ಟೆಯ ಮೇಲೆ ಮೂತಿಯಿಂದ ದಾಳಿ ಮಾಡಿದೆ. ಪರಿಣಾಮ ಜೋಗಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೋಗಣ್ಣ ಅವರು ಪರವಾಡ ಮಂಡಲದ ಮುತ್ಯಾಲಮ್ಮಪಾಲೆಂ ಪಂಚಾಯತ್‌ನ ಕರಾವಳಿ ಕುಗ್ರಾಮವಾದ ಜಾಲರಿಪೇಟ ನಿವಾಸಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Ind Vs WI: ಹೆಚ್ಚಿನ ಆಟಗಾರರು ಕೋವಿಡ್ -19 ಧನಾತ್ಮಕ ಪರೀಕ್ಷೆ ನಡೆಸಿದರೆ 1 ನೇ ODI ತಳ್ಳಲಾಗುವುದು, ಅಧಿಕೃತ ಹೇಳುತ್ತಾರೆ

Thu Feb 3 , 2022
  ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ದಿನಗಳು, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ನವದೀಪ್ ಸೈನಿ ಮತ್ತು ಅಕ್ಷರ್ ಪಟೇಲ್ ಅವರು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಆಟಗಾರರ ಹೊರತಾಗಿ 4 ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಆಟಗಾರರು ಮತ್ತು ಸಿಬ್ಬಂದಿ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿರುವುದರಿಂದ, ಅಹಮದಾಬಾದ್‌ನ ನರೇಂದ್ರ ಮೋದಿ […]

Advertisement

Wordpress Social Share Plugin powered by Ultimatelysocial