ರಾಗಿ ವರ್ಷ ಆಚರಣೆಗೆ ವಿಶ್ವಸಂಸ್ಥೆ ಅಸ್ತು

ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ರಾಗಿ ವರ್ಷದ ಎರಡೂ ಅಭಿಯಾನಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯಿಂದಾಗಿ ಕ್ರಾಂತಿಯ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಭಾರತದ ಪ್ರಸ್ತಾಪದ ನಂತರ ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ರಾಗಿ ವರ್ಷ ಎರಡನ್ನೂ ಆಚರಿಸಲು ನಿರ್ಧರಿಸಿದೆ. ಯೋಗ ಆರೋಗ್ಯಕ್ಕೂ ಸಂಬಂಧಿಸಿದ್ದರೆ ರಾಗಿ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.ವರ್ಷದ ಮೊದಲ ಹಾಗು ಮನ್ ಕಿ ಬಾಸ್ ಸರಣಿಯ ೯೭ನೇ ಆವೃತ್ತಿಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು ಜನರು ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯ ಭಾಗವಹಿಸುವಿಕೆ ಮೂಲಕ ಯೋಗ ಮತ್ತು ಫಿಟ್‌ನೆಸ್ ಅನ್ನು ಜೀವನದ ಒಂದು ಭಾಗವಾಗಿಸಿಕೊಂಡಂತೆ; ಅದೇ ರೀತಿ ಜನರು ರಾಗಿಯನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಸಾಕಷ್ಟು ಸಂಖ್ಯೆಯ ಪದ್ಮ ಪ್ರಶಸ್ತಿ ಪುರಸ್ಕೃತರು ಬುಡಕಟ್ಟು ಸಮುದಾಯಗಳು ಮತ್ತು ಬುಡಕಟ್ಟು ಸಮಾಜಕ್ಕೆ ಸೇರಿದವರಾಗಿದ್ದಾರೆ. ಬುಡಕಟ್ಟು ಜನರ ಜೀವನ ನಗರ ಜೀವನಕ್ಕಿಂತ ಭಿನ್ನವಾಗಿದೆ ಜೊತೆಗೆ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಇದೆಲ್ಲದರ ಹೊರತಾಗಿಯೂ, ಬುಡಕಟ್ಟು ಸಮಾಜಗಳು ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಯಾವಾಗಲೂ ಉತ್ಸುಕವಾಗಿವೆ ಎಂದು ಅವರು ಹೇಳಿದ್ದಾರೆ.ಬುಡಕಟ್ಟು ಭಾಷೆಗಳಾದ ಟೊಟೊ, ಹೊ, ಕುಯಿ, ಕುವಿ, ಮಂದ ಮುಂತಾದ ಭಾಷೆಗಳಲ್ಲಿ ಕೆಲಸ ಮಾಡಿದ ಅನೇಕ ಮಹಾನ್ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳು ಸಂದಿವೆ. ಇದು ನಮಗೆಲ್ಲ ಹೆಮ್ಮೆಯ ವಿಚಾರ. ಸಿದ್ದಿ, ಜರ್ವಾ ಮತ್ತು ಒಂಗೆ ಬುಡಕಟ್ಟು ಜನಾಂಗದವರಿಗೂ ಈ ಬಾರಿ ಪ್ರಶಸ್ತಿ ಸಂದಿದೆ.ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.ಈ ಬಾರಿಯ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಸಾಂಪ್ರದಾಯಿಕ ಸಂಗೀತ ವಾದ್ಯಗಳಾದ ಸಂತೂರ್, ಬಮ್ಹುಮ್, ದ್ವಿತಾರಾಗಳ ಮಾಧುರ್ಯವನ್ನು ಪಸರಿಸುವ ಪರಿಣತಿ ಹೊಂದಿರುವವರು ಸೇರಿದ್ದಾರೆ. ಗುಲಾಮ್ ಮೊಹಮ್ಮದ್ ಝಾಝ್, ಮೋವಾ ಸು-ಪಾಂಗ್, ರಿ-ಸಿಂಗ್ಬೋರ್ ಕುರ್ಕಾ-ಲಾಂಗ್, ಮುನಿ-ವೆಂಕಟಪ್ಪ ಮತ್ತು ಮಂಗಲ್ ಕಾಂತಿ ರೈ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.ಜನವರಿ ೬ ರಿಂದ ೮ ರವರೆಗೆ ಗೋವಾದ ಪಣಜಿಯಲ್ಲಿ ಪರ್ಪಲ್ ಫೆಸ್ಟ್ ಆಯೋಜಿಸಲಾಗಿತ್ತು. ದಿವ್ಯಾಂಗರ ಕಲ್ಯಾಣಕ್ಕಾಗಿ ಸ್ವತಃ ಒಂದು ಅನನ್ಯ ಪ್ರಯತ್ನವಾಗಿತ್ತು. ೫೦,೦೦೦ ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದರು. ಜನರು ಈಗ ‘ಮಿರಾಮರ್ ಬೀಚ್’ ಅನ್ನು ಪೂರ್ಣವಾಗಿ ಆನಂದಿಸಬಹುದು ಎಂಬ ಅಂಶದ ಬಗ್ಗೆ ರೋಮಾಂಚನಗೊಂಡಿದ್ದಾರೆ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಭಾರತೀಯರ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿ.

Mon Jan 30 , 2023
ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್ ನ ಫೆಡರೇಶನ್‌ ಸ್ಕ್ವೇರ್‌ನಲ್ಲಿ ಭಾನುವಾರ ಭಾರತದ ಧ್ವಜ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಮೂಲದವರ ಮೇಲೆ ಖಡ್ಗ ಹಿಡಿದ ಸುಮಾರು 40 ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ, ಖಲಿಸ್ತಾನಿ ಪರ ಚಟುವಟಿಕೆಗಳ ವಿರುದ್ಧ ಭಾರತೀಯ ಮೂಲದವರು ನಿಶಸ್ತ್ರರಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ನುಗ್ಗಿದ ಖಡ್ಗ ಸೇರಿದಂತೆ ಹರಿತವಾದ ಆಯುಧಗಳು, ಬೆತ್ತ ಹಿಡಿದ ಸುಮಾರು 40 ಮಂದಿ […]

Advertisement

Wordpress Social Share Plugin powered by Ultimatelysocial