ಮದುವೆ ಬಗ್ಗೆ ರಾಹುಲ್ ಗಾಂಧಿ ಕುತೂಹಲಕಾರಿ ಪ್ರತಿಕ್ರಿಯೆ

ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸುದೀರ್ಘ ಪಾದಯಾತ್ರೆ ಮುಂದುವರೆದಿದೆ. ಯಾತ್ರೆ ದೆಹಲಿ ತಲುಪಿದ್ದು, ಯಾತ್ರೆಗೆ ತಾತ್ಕಾಲಿಕ ಬ್ರೇಕ್ ಬಿದ್ದ ಕಾರಣ ರಾಹುಲ್ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆ.ಈ ಸಂದರ್ಭದಲ್ಲಿ ಎದುರಾಳಿಗಳ ಆರೋಪ, ಪಪ್ಪು ಎನ್ನುವ ಟೀಕೆಗಳಿಗೆ ಉತ್ತರಿಸಿದರು. ಮೇಲಾಗಿ.. ಎಂತಹ ಸಂಗಾತಿ ಬೇಕು ಎಂಬುದಕ್ಕೂ ರಾಹುಲ್ ಕ್ಲಾರಿಟಿ ನೀಡಿದ್ದಾರೆ.ವಿಪಕ್ಷಗಳು ನಿಮ್ಮನ್ನು ‘ಪಪ್ಪು’ ಎಂದು ಸಂಬೋಧಿಸುತ್ತಿದ್ದಾರೆ.. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದಿದ್ದಕ್ಕೆ ಅವರು ನನ್ನನ್ನು ನಿಂದಿಸಿದರೂ, ಹೊಡೆದರೂ ನಾನು ಯಾರನ್ನೂ ದ್ವೇಷಿಸುವುದಿಲ್ಲ ಎಂದು ರಾಹುಲ್ ಉತ್ತರಿಸಿದರು. ನನಗೆ ಎಷ್ಟು ಹೆಸರು ಕೊಟ್ಟರೂ ಪರವಾಗಿಲ್ಲ, ಜೀವನದಲ್ಲಿ ಏನೂ ಆಗದೆ ಅವರ ಸಂಬಂಧಗಳು ಸರಿಯಿಲ್ಲದೆ ಕೆಲವರು ನರಳುತ್ತಿರುತ್ತಾರೆ. ಅಂಥವರು ಮಾಡೋಕೆ ಬೇರೆ ಕೆಲಸ ಇಲ್ಲದೆ ಇಂತಹ ಟೀಕೆ ಮಾಡುತ್ತಾರೆ ಎಂದು ರಾಹುಲ್ ಕೌಂಟರ್ ಕೊಟ್ಟಿದ್ದಾರೆ.ಮದುವೆ ಪ್ರಸ್ತಾಪಕ್ಕೆ ರಾಹುಲ್ ಪ್ರತಿಕ್ರಿಯಿಸಿದ್ದು, ನನ್ನ ಭಾವಿ ಪತ್ನಿ ಅಜ್ಜಿ (ಮಾಜಿ ಪ್ರಧಾನಿ ಇಂದಿರಾಗಾಂಧಿ) ಅವರಂತಹ ಗುಣವುಳ್ಳ ಮಹಿಳೆಯಾದರೆ ನನ್ನ ಅಭ್ಯಂತರವಿಲ್ಲ. ತಾಯಿ (ಸೋನಿಯಾ ಗಾಂಧಿ) ಶಾಂತ ಗುಣಗಳನ್ನು ಹೊಂದಿರುವ ಮಹಿಳೆ ಇದ್ದರೆ ಉತ್ತಮ ಎಂದು ತನ್ನ ಭಾವಿ ಪತ್ನಿಗೆ ಇರಬೇಕಾಗಿರುವ ಗುಣಗಳನ್ನು ರಾಹುಲ್ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಚಲಿಸುತ್ತಿದ್ದ ವಿಮಾನದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು.

Thu Dec 29 , 2022
ನವದೆಹಲಿ: ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ನಡೆದಿದೆ.ಕೆಲವರು ಈ ಗಲಾಟೆ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ವಿಮಾನದ ಸಿಬ್ಬಂದಿ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.ಸಮಾಧಾನವಾಗಿ ಮಾತಾಡಿ ಎಂದು ಒಬ್ಬ ವ್ಯಕ್ತಿ ಹೇಳಿದರೆ, ಮತ್ತೊಬ್ಬ ವ್ಯಕ್ತಿ ನಿಮ್ಮ ಕೈ ಕೆಳಗಿಳಿಸಿ ಎಂದು ಕೂಗುತ್ತಾನೆ. ಹೀಗೆ ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಒಬ್ಬ ವ್ಯಕ್ತಿ ಕೋಪದಿಂದ […]

Advertisement

Wordpress Social Share Plugin powered by Ultimatelysocial